ಸಚಿವ ಈಶ್ವರಪ್ಪ‌ ಅವರ ವಿರುದ್ದ ತನಿಖೆಗೆ ಕೋರ್ಟ್ ಆದೇಶ!

By Suvarna NewsFirst Published Mar 31, 2022, 12:06 AM IST
Highlights

ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ

ಹರ್ಷ ಹತ್ಯೆ ಸಂದರ್ಭದಲ್ಲಿ ಈಶ್ವರಪ್ಪ ಅವರಿಂದ ಪ್ರಚೋದನಕಾರಿ ಹೇಳಿಕೆ

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಆದೇಶ

ಶಿವಮೊಗ್ಗ (ಮಾ.30): ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ (KS Eshwarappa) ವಿರುದ್ಧ ತನಿಖೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ‌ ಆದೇಶಿಸಿದೆ. ಸಚಿವ‌ ಈಶ್ವರಪ್ಪ‌ ತನಿಖೆ ನಡೆಸುವಂತೆ ಶಿವಮೊಗ್ಗದ‌ ದೊಡ್ಡಪೇಟೆ ಪೊಲೀಸರಿಗೆ (Doddapete Police) ಕೋರ್ಟ್ ಆದೇಶ ನೀಡಿದೆ. ಶಿವಮೊಗ್ಗ ನಗರದಲ್ಲಿ (Shivamogga City) ಬಜರಂಗದಳದ ಕಾರ್ಯಕರ್ತ ಹರ್ಷನ ಹತ್ಯೆ(Harsha Murder) ಪ್ರಕರಣ ಸಂಬಂಧ ಈಶ್ವರಪ್ಪ ಪ್ರಚೋಧನಾಕಾರಿ ಹೇಳಿಕೆ ಸಂಬಂದ ಖಾಸಗಿ ದೂರು ದಾಖಲಾಗಿತ್ತು.

ಹರ್ಷ ಹತ್ಯೆ ನಂತರ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಶಿವಮೊಗ್ಗ ಪಾಲಿಕೆ ಸದಸ್ಯ ಚನ್ನಬಸಪ್ಪ ರಿಂದ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಮುಸಲ್ಮಾನ ಗೂಂಡಾಗಳನ್ನು ಬಿಡುವುದಿಲ್ಲ , ಅವರನ್ನು ದಮನ ಮಾಡುತ್ತೇವೆ ಎಂದು ಈಶ್ವರಪ್ಪ ಅವರು ಹೇಳಿಕೆ ನೀಡಿದ್ದು.  ಈ ಹೇಳಿಕೆಯೇ ಗಲಭೆಗೆ ಮುಖ್ಯ ಕಾರಣವಾಗಿದ್ದರಿಂದ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲು ಶಿವಮೊಗ್ಗ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು.

Latest Videos

ಈಶ್ವರಪ್ಪ ವಿರುದ್ಧ ಕಮೀಷನ್‌ ಆರೋಪ, ಪ್ರಧಾನಿ, ಸಿಎಂಗೂ ಮನವಿ ಮಾಡ್ತೇನೆ: ಗುತ್ತಿಗೆದಾರನ ಆಕ್ರೋಶ 

ಈ ಸಂಬಂದ ಸಚಿವ ಕೆ.ಎಸ್.ಈಶ್ವರಪ್ಪ , ಶಿವಮೊಗ್ಗ ಪಾಲಿಕೆ ಸದಸ್ಯ ಚನ್ನಬಸಪ್ಪ  ವಿರುದ್ಧ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರೂ ಎಫ್ಐಆರ್ ದಾಖಲಿಸಿಲ್ಲ ಎಂದು ಆರೋಪಿಸಲಾಗಿತ್ತು. ಶಿವಮೊಗ್ಗದ ರಿಯಾಝ್ ಅಹ್ಮದ್ ಅರ್ಜಿ ಈ ಕುರಿತಾಗಿ ಅರ್ಜಿ ಸಲ್ಲಿಸಿದ್ದರು. 

ನನ್ನ ವಿರುದ್ಧ ಯಾವುದೋ ಒಂದು ಷಡ್ಯಂತ್ರ, 40% ಕಮಿಷನ್ ಆರೋಪಕ್ಕೆ ಈಶ್ವರಪ್ಪ ತಿರುಗೇಟು

ಕೆ.ಎಸ್.ಈಶ್ವರಪ್ಪ , ಚನ್ನಬಸಪ್ಪ  ವಿರುದ್ಧ 124 ( ಎ ) , 153 ( ಎ ) , 153 ( ಬಿ ) , 295 ( ಎ ) , 295 ( ಬಿ ) , 505 ( 2 ) , ಮತ್ತು 504 ಆರ್ / ಡಬ್ಲ್ಯೂ ಸೆಕ್ಷನ್ 34 ಆಫ್ ಐಪಿಸಿ ಕಲಂಗಳಡಿ ಪ್ರಕರಣವನ್ನು ದಾಖಲಿಸುವಂತೆ ಮನವಿ ಮಾಡಲಾಗಿತ್ತು. ಈ ಸಂಬಂದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪ್ರೀತ್ ಅವರು ತನಿಖೆ ನಡೆಸುವಂತೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸರಿಗೆ ಆದೇಶ ನೀಡಿದ್ದಾರೆ.

click me!