Shivamogga: ಶಾಮನೂರು ನೀಡಿದ್ದ ಆನೆ ಸಕ್ರೆಬೈಲ್‌ ಬಿಡಾರದಲ್ಲಿ ಸಾವು

By Govindaraj SFirst Published Nov 13, 2022, 9:23 AM IST
Highlights

ಇಲ್ಲಿನ ಸಕ್ರೆಬೈಲು ಆನೆ ಬಿಡಾರದ ವಿಶೇಷ ಅತಿಥಿಯಾಗಿದ್ದ ಗಣೇಶ ಆನೆ ಶನಿವಾರ ಮೃತಪಟ್ಟಿದ್ದು, ಬಿಡಾರದಲ್ಲಿ ಸೂತಕದ ಛಾಯೆ ಆವರಿಸಿದೆ. ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪರ ಮಾಲೀಕತ್ವದಲ್ಲಿದ್ದ ಆನೆ 2013-14ನೇ ಸಾಲಿನಲ್ಲಿ ಸಕ್ರೆಬೈಲ್‌ ಆನೆ ಬಿಡಾರಕ್ಕೆ ಶಿಫ್ಟ್‌ ಆಗಿತ್ತು.

ಶಿವಮೊಗ್ಗ (ನ.13): ಇಲ್ಲಿನ ಸಕ್ರೆಬೈಲು ಆನೆ ಬಿಡಾರದ ವಿಶೇಷ ಅತಿಥಿಯಾಗಿದ್ದ ಗಣೇಶ ಆನೆ ಶನಿವಾರ ಮೃತಪಟ್ಟಿದ್ದು, ಬಿಡಾರದಲ್ಲಿ ಸೂತಕದ ಛಾಯೆ ಆವರಿಸಿದೆ. ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪರ ಮಾಲೀಕತ್ವದಲ್ಲಿದ್ದ ಆನೆ 2013-14ನೇ ಸಾಲಿನಲ್ಲಿ ಸಕ್ರೆಬೈಲ್‌ ಆನೆ ಬಿಡಾರಕ್ಕೆ ಶಿಫ್ಟ್‌ ಆಗಿತ್ತು. ಅಥ್ರೈರ್‍ಟಿಸ್‌ ಕಾಯಿಲೆಯಿಂದ ಬಳಲುತ್ತಿದ್ದ ಆನೆ ನಿಲ್ಲುವುದಕ್ಕೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿತ್ತು. 

ಆದಾಗ್ಯು ಸಕ್ರೆಬೈಲ್‌ ಆನೆ ಬಿಡಾರದಲ್ಲಿ ಸಿಕ್ಕ ಚಿಕಿತ್ಸೆ ಹಾಗೂ ಆರೈಕೆಯಿಂದ ಸಾಕಷ್ಟು ಚೇತರಿಸಿಕೊಂಡಿತ್ತು. ಕಾಲಿನ ಗಂಟಿನಲ್ಲಿ ನೋವಿನ ಸಮಸ್ಯೆ ಎದುರಿಸುತ್ತಿದ್ದ ಆನೆ ಸಾಕಷ್ಟುಸಲ ನಡೆಯುವಾಗ ಬಿದ್ದಿತ್ತು. ಕೆಲ ದಿನಗಳಿಂದ ಅದರ ಆರೋಗ್ಯ ಹದಗೆಟ್ಟಿದ್ದು, ಇದೀಗ ಮೃತಪಟ್ಟಿದೆ. ಇನ್ನು ಅನಾರೋಗ್ಯದಿಂದ ಗಣೇಶನ ಸಾವನ್ನಪ್ಪಿದ್ದು ಇದರ ಆರೈಕೆ ಮಾಡುತ್ತಿದ್ದ ಕಾವಾಡಿಗಳು, ಮಾವುತರಿಗೆ ನೋವು ತಂದಿದೆ.

ಹಾಸನ ಜಿಲ್ಲೆಯಲ್ಲಿ ಕಾಡಾನೆ ಮಾನವ ಸಂಘರ್ಷ‌ ನಿಯಂತ್ರಣ ಅಧ್ಯಯನಕ್ಕೆ ಉನ್ನತ ಮಟ್ಟದ ತಂಡ ಭೇಟಿ

ವಿದ್ಯುತ್‌ ಸ್ಪರ್ಶದಿಂದ ಆನೆ ಸಾವು: ರಾಜ್ಯದಲ್ಲಿ ವಿದ್ಯುತ್‌ ಸ್ಪರ್ಶದಿಂದ ವನ್ಯಜೀವಿಗಳು ಹಾಗೂ ಮಾನವರು ಮೃತಪಡುವುದನ್ನು ತಪ್ಪಿಸಲು ಸೂಕ್ತ ಮಾರ್ಗಸೂಚಿ ರೂಪಿಸಿ ಜಾರಿಗೊಳಿಸಲು ಉನ್ನತ ಮಟ್ಟದ ಸಮಿತಿ ರಚಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಹೈಕೋರ್ಟ್‌ ವಕೀಲ ಅಂಕುಶ್‌ ಎಣ್ಣೆಮಜಲು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಪಿ.ಬಿ .ವರಾಳೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಕೆಲ ಕಾಲ ಅರ್ಜಿ ವಿಚಾರಣೆ ನಡೆಸಿದ ನಂತರ ಪ್ರತಿವಾದಿಗಳಾಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅರಣ್ಯ ಮತ್ತು ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್‌ ಜಾರಿಗೊಳಿಸಿತು.

ಶಿವಮೊಗ್ಗ ಪ್ರಕರಣ: ಶಿವಮೊಗ್ಗದ ಆಯನೂರು ತಾಲೂಕಿನ ಚೆನ್ನಹಳ್ಳಿಯಲ್ಲಿ ರೈತರೊಬ್ಬರು ಬೆಳೆದಿದ್ದ ಮೆಕ್ಕೆಜೋಳ ರಕ್ಷಿಸಲು ತಮ್ಮ ಜಮೀನು ಸುತ್ತ ತಂತಿ ಅಳವಡಿಸಿ, ಅದಕ್ಕೆ ಅನಧಿಕೃತವಾಗಿ ವಿದ್ಯುತ್‌ ಸಂಪರ್ಕ ನೀಡಿದ್ದರು. ಭದ್ರಾ ಸಂರಕ್ಷಿತ ಅರಣ್ಯ ಪ್ರದೇಶದಿಂದ ಆಹಾರ ಅರಸಿ ಬಂದಿದ್ದ ಏಳು ಆನೆಗಳ ಪೈಕಿ ಎರಡು ಗಂಡು ಆನೆಗಳು ವಿದ್ಯುತ್‌ ಪ್ರವಹಿಸಿ ಸಾವನ್ನಪ್ಪಿದ್ದವು. ಈ ಕುರಿತ ವರದಿ 2022ರ ಸೆ.26ರಂದು ಮಾಧ್ಯಮದಲ್ಲಿ ಪ್ರಕಟಗೊಂಡಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Chikkamagaluru: ಕಾಡಾನೆ ಸೆರೆ ಕಾರ್ಯಾಚರಣೆಗೆ ಬಂದ ಆನೆ ಅಭಿಮನ್ಯುವಿಗೆ ಅನಾರೋಗ್ಯ

ಚಾಮರಾಜನಗರದಲ್ಲಿ 36 ಆನೆಗಳು, ಮೈಸೂರಿನಲ್ಲಿ 12, ಕೊಡಗಿನಲ್ಲಿ 10, ಬೆಂಗಳೂರಿನಲ್ಲಿ 7, ಹಾಸನದಲ್ಲಿ 4 ಮತ್ತು ಚಿಕ್ಕಮಗಳೂರಿನಲ್ಲಿ 1 ಆನೆ ಈ ರೀತಿಯಲ್ಲಿ ಸಾವನ್ನಪ್ಪಿವೆ. ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ರೈತರು ತಮ್ಮ ಜಮೀನಿಗೆ ತಂತಿ ಅಳವಡಿಸಿ, ಅದಕ್ಕೆ ಅನಧಿಕೃತವಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸಿರುವ ಬಗ್ಗೆ ಅರಣ್ಯ ಮತ್ತು ಇಂಧನ ಇಲಾಖೆ ವಿಚಕ್ಷಣಾ ವಿಭಾಗದ ಅಧಿಕಾರಿಗಳು ಹಾಗೂ ಕೆಪಿಟಿಸಿಎಲ್‌ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

click me!