Siddhashree National Award: ನಟ ರಿಷಬ್‌ ಶೆಟ್ಟಿಗೆ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿ

By Govindaraj S  |  First Published Nov 13, 2022, 8:34 AM IST

ದೇಶಾದ್ಯಂತ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾದ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರನ್ನು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಶ್ರೀಕ್ಷೇತ್ರ ಮುಗಳಖೋಡ ಮಠದಿಂದ ಕೊಡಮಾಡುವ ಪ್ರಸಕ್ತ ಸಾಲಿನ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 


ಮುಗಳಖೋಡ (ಬೆಳಗಾವಿ) (ನ.13): ದೇಶಾದ್ಯಂತ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾದ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರನ್ನು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಶ್ರೀಕ್ಷೇತ್ರ ಮುಗಳಖೋಡ ಮಠದಿಂದ ಕೊಡಮಾಡುವ ಪ್ರಸಕ್ತ ಸಾಲಿನ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 1 ಲಕ್ಷ ನಗದು, ಪದಕ ಹಾಗೂ ಪ್ರಮಾಣ ಪತ್ರ ಒಳಗೊಂಡಿದೆ. 

ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾ ಶಿವಯೋಗಿಗಳವರ 38ನೇ ಗುರುವಂದನಾ ಕಾರ್ಯಕ್ರಮ ಡಿ.2ರಂದು ಕಲಬುರಗಿಯಲ್ಲಿ ಜರುಗಲಿದ್ದು, ಅಂದು ರಿಷಬ್‌ ಶೆಟ್ಟಿಅವರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಮಠದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ. ಪ್ರತಿವರ್ಷ ಶ್ರೀಮಠವು ಒಂದೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸಿದ್ಧಶ್ರೀ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಈ ಬಾರಿ ರಿಷಬ್‌ ಶೆಟ್ಟಿ ಅವರನ್ನು ಪಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಕಲಬುರಗಿಯ ಜಿಡಗಾ ಮಠದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಆಡಳಿತ ಮಂಡಳಿ ಹೇಳಿದೆ.

Tap to resize

Latest Videos

Kantara ಹಾಡಿನ ವಿವಾದ; ಯೂಟ್ಯೂಬ್​, ಮ್ಯೂಸಿಕ್ ಆ್ಯಪ್​ಗಳಿಂದ 'ವರಾಹ ರೂಪಂ..' ಹಾಡು ಡಿಲೀಟ್

ಕರ್ನಾಟಕದಲ್ಲಿ ಕಾಂತಾರ 1 ಕೋಟಿ ಟಿಕೆಟ್ ಮಾರಾಟ: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾದ ಹವಾ ಇನ್ನೂ ಕಮ್ಮಿ ಆಗಿಲ್ಲ. ಈಗಾಗಲೇ ಅನೇಕ ದಾಖಲೆಗಳನ್ನು ಮಾಡಿರುವ ಕಾಂತಾರ ಇದೀಗ ಮತ್ತೊಂದು ರೆಕಾರ್ಡ್ ಮಾಡಿ ಬೀಗಿದೆ. ಸಿನಿಮಾ ರಿಲೀಸ್ ಆಗಿ ಒಂದೂವರೆ ತಿಂಗಳು ಕಳೆದರೂ ಇನ್ನೂ ಅನೇಕ ಕಡೆ  ಕಾಂತರಾ ಉತ್ತಮ ಪ್ರದರ್ಶನ ಕಾಣುತ್ತಿದೆ. ರಿಷಬ್​ ಶೆಟ್ಟಿ ನಟನೆ ಮತ್ತು ನಿರ್ದೇಶನಕ್ಕೆ ಪ್ರೇಕ್ಷಕರು ಫುಲ್​ ಮಾರ್ಕ್ಸ್​ ನೀಡಿದ್ದಾರೆ. ಈಗಾಗಲೇ ಕೋಟಿ ಕೋಟಿ ಬಾಚಿಕೊಳ್ಳುವ ಮೂಲಕ ಕಾಂತಾರ ಹೊಂಬಾಳೆ ಫಿಲ್ಸ್‌ಗೆ ದೊಡ್ಡ ಲಾಭ ತಂದುಕೊಟ್ಟಿದೆ. ಇದೀಗ ಸಿನಿಮಾತಂಡ ಮತ್ತೊಂದು ಸಂತಸದ ವಿಚಾರವನ್ನು ಹಂಚಿಕೊಂಡಿದೆ. 

ಕರ್ನಾಟಕದಲ್ಲಿ ಕಾಂತಾರ ಸಿನಿಮಾದ 1 ಕೋಟಿ ಟಿಕೆಟ್ ಮಾರಾಟವಾಗಿದೆ. ಈ ಮೂಲಕ ಅತೀ ಹೆಚ್ಚು ಟಿಕೆಟ್ ಮಾರಾಟವಾದ ಸಿನಿಮಾ ಕಾಂತಾರ ಎನ್ನುವ ಹೆಗ್ಗಳಿಕೆ ಗಳಿಸಿದೆ. ಈಗಾಗಲೇ ದೇಶ-ವಿದೇಶಗಳಲ್ಲಿ ಸದ್ದು ಮಾಡುತ್ತಿರುವ ಕಾಂತಾರಗೆ ಈ ದಾಖಲೆ ಮತ್ತಷ್ಟು ಖುಷಿ ತಂದಿದೆ. ಈ ಬಗ್ಗೆ ಹೊಂಬಾಳೆ ಫಿಲ್ಸ್ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ಇತ್ತೀಚಿಗಷ್ಟೆ ಸಿನಿಮಾತಂಡ ಕರ್ನಾಟಕದಲ್ಲಿ ಅತೀ ಹೆಚ್ಚು ಜನ ವೀಕ್ಷಿಸಿದ ಹೊಂಬಾಳೆ ಫಿಲ್ಮ್ಸ್‌ನ ಮೊದಲ ಸಿನಿಮಾ ಎನ್ನುವ ಮಾಹಿತಿ ಬಹಿರಂಗ ಪಡಿಸಿದ್ದರು. ಬರೋಬ್ಬರಿ 1 ಕೋಟಿ ಟಿಕೆಟ್ ಮಾರಾಟವಾದ ಸಿನಿಮಾ ಎನ್ನುವ ಹೆಗ್ಗಳಿಕೆ ಸಿಕ್ಕಿದೆ. 

Kantara; ರಶ್ಮಿಕಾ ಮಂದಣ್ಣ 'ಪುಷ್ಪ' ಚಿತ್ರದ ಕಲೆಕ್ಷನ್ ಬ್ರೇಕ್ ಮಾಡಿದ ರಿಷಬ್ ಶೆಟ್ಟಿ ಸಿನಿಮಾ

ಕಾಂತಾರ ಸಿನಿಮಾ ಸೆಪ್ಟಂಬರ್ 30ರಂದು ರಿಲೀಸ್ ಆಗಿದೆ. ಕನ್ನಡದಲ್ಲಿ ಮಾತ್ರ ರಿಲೀಸ್ ಆದ ಕಾಂತಾರ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣುತ್ತಿದ್ದಂತೆ ಬೇರೆ ಬೇರೆ ಭಾಷೆಗೆ ಡಬ್ ಆಗಿ ರಿಲೀಸ್ ಆಯಿತು. ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಕಾಂತಾರ ರಿಲೀಸ್ ಆಗಿದೆ. ಪರಭಾಷೆಯಲ್ಲೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕೇವಲ ಅಭಿಮಾನಿಗಳು ಮಾತ್ರವಲ್ಲದೇ ಸಿನಿಮಾ ಗಣ್ಯರು ಸಹ ಮೆಚ್ಚುಗೆ ವ್ಯಕ್ತಪಡಿಸಿದರು. ಸೂಪರ್ ಸ್ಟಾರ್ ರಜನಿಕಾಂತ್, ಧನುಷ್, ಅನುಷ್ಕಾ ಶೆಟ್ಟಿ, ಪ್ರಭಾಸ್, ಕಾರ್ತಿ, ನಾನಿ, ಕಂಗನಾ ರಣಾವತ್ ಸೇರಿದಂತೆ ಅನೇಕ ಕಲಾವಿದರೂ ಹಾಡಿಹೊಗಳಿದರು. 

click me!