ಪ್ರತಿಷ್ಠಿತ ಅಕ್ಕಮಹಾದೇವಿ ಮಹಿಳಾ ವಿ.ವಿಯಲ್ಲಿ ನೌಕರಿ ಕೊಡಿಸುವುದಾಗಿ ವಂಚನೆ!

By Ravi Janekal  |  First Published Jul 16, 2023, 1:08 PM IST

 ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾನಿಲಯ ಎನಿಸಿಕೊಂಡಿರೋ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ವಂಚನೆ ಆರೋಪ ಕೇಳಿ ಬಂದಿದೆ. ವಿವಿಯಲ್ಲಿ ನೌಕರಿ ಕೊಡಿಸುವುದಾಗಿ ನಕಲಿ ಲೆಟರ್ ಹೆಡ್ ಗಳನ್ನು ಬಳಸಿಕೊಂಡು ಅಮಾಯಕರಿಂದ ಹಣ ಸುಲಿಗೆ ಮಾಡಲಾಗಿದೆ. ಇಂಥ ಗಂಭೀರ ಆರೋಪ ಮಾಡಿದವರು ಸ್ವತಃ ವಿಶ್ವ ವಿದ್ಯಾಲಯದ ಕುಲಪತಿಗಳು. 


- ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಜು.16) :  ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾನಿಲಯ ಎನಿಸಿಕೊಂಡಿರೋ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ವಂಚನೆ ಆರೋಪ ಕೇಳಿ ಬಂದಿದೆ. ವಿವಿಯಲ್ಲಿ ನೌಕರಿ ಕೊಡಿಸುವುದಾಗಿ ನಕಲಿ ಲೆಟರ್ ಹೆಡ್ ಗಳನ್ನು ಬಳಸಿಕೊಂಡು ಅಮಾಯಕರಿಂದ ಹಣ ಸುಲಿಗೆ ಮಾಡಲಾಗಿದೆ. ಇಂಥ ಗಂಭೀರ ಆರೋಪ ಮಾಡಿದವರು ಸ್ವತಃ ವಿಶ್ವ ವಿದ್ಯಾಲಯದ ಕುಲಪತಿಗಳು. 

Tap to resize

Latest Videos

ವಿವಿಯಲ್ಲಿ ಯಾವುದೇ ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿಲ್ಲ, ಯಾರೂ ಕೂಡ ಮೋಸ ಹೋಗಬೇಡಿ ಎಂದು ವಿವಿ ಪ್ರಕಟಣೆ ನೀಡುವ ಮೂಲಕ ಉದ್ಯೋಗದ ಆಸೆಗೆ ಹಣ ನೀಡಿದವರಿಗೆ ಬಿಗ್ ಶಾಕ್ ನೀಡಿದೆ.

 

ಅಕ್ಕಮಹಾದೇವಿ ‌ಮಹಿಳಾ ವಿವಿಗೆ ಬಂತು 5 ಲಕ್ಷಕ್ಕೂ ಅಧಿಕ ಬಿಲ್, ಕುಲಪತಿಗಳೇ ಶಾಕ್!

ಮಹಿಳಾ ವಿ.ವಿಯಲ್ಲಿ ನೌಕರಿ ಕೊಡಿಸೋದಾಗಿ ವಂಚನೆ!

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಬೋಧಕೇತರ ಹುದ್ದೆಗಳಿಗೆ ನೌಕರಿ ಕೊಡಿಸೋದಾಗಿ ಸಾಕಷ್ಟು ಜನ್ರಿಂದ ಹಣ ಪಡೆದು ವಂಚನೆ ಮಾಡಿರುವ ಪ್ರಕರಣ ಬೆಳೆಕಿಗೆ ಬಂದಿದೆ. ಸ್ವತಃ ವಿ.ವಿಯ ಕುಲಪತಿಗಳಾದ ಪ್ರೋ. ತುಳಸಿಮಾಲಾ ವಂಚನೆ ಪ್ರಕರಣವನ್ನ ಬಯಲು ಮಾಡಿದ್ದಾರೆ. ಅಮಾಯಕರಿಗೆ ಕೆಲವರು ನೌಕರಿ ಕೊಡಿಸುವ ಆಮೀಷವೊಡ್ಡಿ ಅವರಿಗೆ ನಕಲಿ ಲೆಟರ್ ಹೆಡ್, ನಕಲಿ ಸಹಿ, ಲಾಂಛನ ಇರುವ ಪತ್ರಗಳನ್ನ ನೀಡಿದ್ದಾರೆ ಎನ್ನುವ ಗಂಭೀರವಾದ ಆರೋಪವನ್ನು ಕುಲಪತಿ ತುಳಸಿಮಾಲಾ‌ ಮಾಡಿದ್ದಾರೆ‌.

ಅಕ್ಕಮಹಾದೇವಿ ವಿವಿಯಿಂದ ವಂಚನೆಯ ಪ್ರಕಟಣೆ!

ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಬೋಧಕೇತರ ಸಿಬ್ಬಂದಿಗಳ ನೇಮಕಾತಿಗೆ ಸಂಬಂಧಿಸಿದ ಯಾವುದೇ ಅಧಿಸೂಚನೆ ಹೊರಡಿಸಿರುವುದಿಲ್ಲ ಮತ್ತು ನೇಮಕಾತಿ ಪ್ರಕ್ರಿಯೆ ನಡೆಯುತ್ತಿಲ್ಲವೆಂದು ಸ್ವತಃ ವಿವಿಯೇ ಪ್ರಕಟಣೆ ನೀಡಿದೆ. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ನೌಕರಿ ಕೊಡಿಸುವುದಾಗಿ ವಿಶ್ವವಿದ್ಯಾನಿಲಯದ ಲಾಂಛನ ಮತ್ತು ಕವರಗಳನ್ನು ಬಳಸಿಕೊಂಡು ಅನಾಮಿಕ ವ್ಯಕ್ತಿಗಳು ಹಿಂದಿನ ಮತ್ತು ಪ್ರಸ್ತುತ ಕುಲಸಚಿವರು ಮತ್ತು ಸಹಾಯಕ ಕುಲಸಚಿವರ ಸಹಿಯೊಂದಿಗೆ ಸುಳ್ಳು ಪತ್ರಗಳನ್ನು ನೀಡುತ್ತಿದ್ದಾರೆ. ಈ ಕುರಿತು ವಿವಿ ಗಮನಕ್ಕೆ ಬಂದಿದ್ದು ಇಂಥ ವ್ಯಕ್ತಿಗಳ ಮೋಸದ ಜಾಲದ ಬಗೆಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಕುಲಸಚಿವ ಪ್ರೊ.ಬಿ.ಎಸ್.ನಾವಿ ಪ್ರಕಟಣೆ ಹೊರಡಿಸಿದ್ದಾರೆ. 

ದೂರು ನೀಡಿದರೆ ಶಿಸ್ತುಕ್ರಮ ; ಎಸ್ಪಿ ಆನಂದಕುಮಾರ್!

ವಿವಿ ಪ್ರಕಟಣೆ ಹೊರಡಿಸಿದ ಬೆನ್ನಲ್ಲೆ ವಿಜಯಪುರ ಎಸ್ಪಿ ಡಾ. ಹೆಚ್ ಡಿ‌ ಆನಂದಕುಮಾರ್ ಸಹ ಪ್ರತಿಕ್ರಿಯೆ ನೀಡಿದ್ದಾರೆ. ವಂಚನೆಯ ಬಗ್ಗೆ ಅಕ್ಕಮಹಾದೇವಿ ವಿವಿ ಹೊರಡಿಸಿರುವ ಪ್ರಕಟಣೆ ಗಮನಕ್ಕೆ ಬಂದಿದೆ.‌  ಈ ರೀತಿ ಯಾರೇ ವಂಚನೆಗೆ ಒಳಗಾಗಿದ್ರೆ ದೂರು ನೀಡಿದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗು ದೂರು ಸಲ್ಲಿಸಬಹುದು ಎಂದು ಮಾಹಿತಿ ನೀಡಿದ್ದಾರೆ. 

ಕುಲಪತಿ, ಕುಲಸಚಿವರ ಸಹಿ ಪೋರ್ಜರಿ!

ರಾಜ್ಯದ ಏಕೈಕ ಹಾಗೂ ಅತಿದೊಡ್ಡ ವಿವಿ ಆಗಿರುವುದರಿಂದ ಇಲ್ಲಿ ಸಾಕಷ್ಟು ನೌಕರಿಗಳ ಹುದ್ದೆಗಳು ಖಾಲಿ ಇದ್ದೇ ಇರುತ್ತವೆ. ಹಾಗೇ ಇಲ್ಲಿಯೇ ನೇಮಕಾತಿ ನಡೆಯುತ್ತವೆ ಎನ್ನುವ ಭ್ರಮೆಯು ಕೆಲವರಲ್ಲಿರುತ್ತೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಇಲ್ಲಿನ ಕುಲಸಚಿವರು, ಸಹಾಯಕ ಕುಲಸಚಿವರ ಸಹಿಯನ್ನು ಫೋರ್ಜರಿ ಮಾಡಿ ನಕಲಿ ಪತ್ರಗಳೊಂದಿಗೆ ವಂಚಿಸಿದ್ದಾರೆ ಎನ್ನಲಾಗಿದೆ.

ವಂಚಕರ‌ ಹೆಸರು ತಿಳಿಸದ ಮೋಸ ಹೋದವರು!

ಮೋಸ‌ಹೋದ ನಾಲ್ಕರಿಂದ ಐವರು ಕುಲಸಚಿವರನ್ನ ಭೇಟಿ ವಂಚನೆಯ ಜಾಲ ಬಿಚ್ಚಿಟ್ಟಿದ್ದಾರೆ‌. ಆದ್ರೆ ಯಾವುದೇ ದಾಖಲಾತಿಗಳನ್ನ ಮೋಸ ಹೋಗಿದ್ದೇವೆ ಎನ್ನುವವರು ನೀಡಿಲ್ಲ.‌ ಬದಲಿಗೆ ನಮಗೆ ಬೇರೆ ಜಿಲ್ಲೆಯ ಅಪರಿಚಿತ ವ್ಯಕ್ತಿ ಮೋಸ ಮಾಡಿ ಪತ್ರ ನೀಡಿ ಹಣ ಪಡೆದಿದ್ದಾನೆ ಎಂದು ದೂರಿದ್ದಾರೆ‌. ಯಾರು? ಏನು ದಾಖಲಾತಿ ಇದೆ? ಮಾಹಿತಿ ಕೊಡಿ ಎಂದಾಗ ದೂರು ಹೇಳಲು ಬಂದವರೇ ಸ್ವತಃ ವಿವಿಯಿಂದ ಕಾಲ್ಕಿತ್ತಿದ್ದಾರಂತೆ. ಹೀಗಾಗಿ ಇಡೀ ಪ್ರಕರಣದಲ್ಲಿ ಹತ್ತಾರು ಅನುಮಾನಗಳಿವೆ ಎನ್ನಲಾಗ್ತಿದೆ. ಈ ನಡುವೆ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ನೇಮಕಾತಿ ಮಾಡಿಸುವುದಾಗಿ ಯಾರಾದರೂ ಹೇಳುತ್ತಿದ್ದಲ್ಲಿ ಅಂಥವರ ಹೆಸರನ್ನು ವಿಶ್ವವಿದ್ಯಾನಿಲಯದ ಗಮನಕ್ಕೆ ತರಬೇಕು. ಅಲ್ಲದೆ ಸಮೀಪದ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಬಹುದಾಗಿದೆ. ಯಾರಾದರೂ ಇಂತಹ ಮೋಸದ ಜಾಲದಲ್ಲಿ ಸಿಲುಕಿದ್ದರೆ ಅದಕ್ಕೆ ವಿಶ್ವವಿದ್ಯಾನಿಲಯವು ಹೊಣೆಯಾಗುವುದಿಲ್ಲವೆಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Vijayapura: ಅಕ್ಕಮಹಾದೇವಿ ವಿವಿ ಘಟಿಕೋತ್ಸವ: 4 ಚಿನ್ನದ ಪದಕ ಮುಡಿಗೇರಿಸಿಕೊಂಡ ಗರ್ಭಿಣಿ

ವಂಚಕ ಯಾರು? ಗೊಂದಲ ಸೃಷ್ಟಿರುವ ಪ್ರಕರಣ!

ಪ್ರಕಟಣೆಯಲ್ಲಿ ವಿಶ್ವವಿದ್ಯಾನಿಲಯದ ಲಾಂಛನ ಮತ್ತು ಕವರಗಳನ್ನು ಬಳಸಿಕೊಂಡು ಅನಾಮಿಕ ವ್ಯಕ್ತಿಗಳು ಹಿಂದಿನ ಮತ್ತು ಪ್ರಸ್ತುತ ಕುಲಸಚಿವರು ಮತ್ತು ಸಹಾಯಕ ಕುಲಸಚಿವರ ಸಹಿಯೊಂದಿಗೆ ಸುಳ್ಳು ಪತ್ರಗಳನ್ನು ನೀಡುತ್ತಿದ್ದಾರೆ ಎಂದು ಬರೆಯಲಾಗಿದೆ. ಹಾಗಿದ್ರೆ ಈ ವಂಚನೆಯನ್ನು ವಿವಿಯಲ್ಲಿ ಇರುವವರೇ ಮಾಡಿದ್ದಾರೋ ಅಥವಾ ಹೊರಗಿನವರು ಮಾಡಿದ್ದಾರೋ ಎಂಬುದು ಗೊಂದಲ ಶುರುವಾಗಿದೆ. ಇನ್ನು ಈ‌ ಕುರಿತು ಪ್ರತಿಕ್ರಿಯಿಸಿದ ವಿವಿ ಕುಲಪತಿಗಳು ತಾವು ಸಹ ಕಾನೂನು ತಜ್ಞರನ್ನು ಸಂಪರ್ಕಿಸಿ,‌ ದೂರು ನೀಡುವುದಾಗಿ ತಿಳಿಸಿದ್ದಾರೆ.

click me!