
ನವದೆಹಲಿ(ಡಿ.14): ರಾಜ್ಯ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಚರ್ಚಿಸಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಿಳಿಸಿದರು. ಮಂಗಳವಾರ ದೆಹಲಿಯ ಸಂಸತ್ ಭವನದಲ್ಲಿ ಪ್ರಧಾನಿ ಮಂದಿಯನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮತನಾಡಿದ ಗೌಡರು, ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಾದ ಕೃಷ್ಣ, ಕಾವೇರಿ ಹಾಗೂ ಮಹದಾಯಿಗಳಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ನ್ಯಾಯಾಧೀಕರಣಗಳಿಂದ ತೀರ್ಪು ಹೊರಬಿದ್ದರೂ ನೀರು ಬಳಕೆ ಮಾಡಿಕೊಳ್ಳಲು ಅಗುತ್ತಿಲ್ಲ. ಈ ಬಗ್ಗೆ ಸವಿವರವಾಗಿ ಪ್ರಧಾನಿಗಳಿಗೆ ವಿವರಿಸಿದ್ದೇನೆ ಎಂದರು.
ನೀರಿನ ವ್ಯಾಜ್ಯಗಳು ಎಲ್ಲಾ ರಾಜ್ಯಗಳಲ್ಲೂ ಇವೆ. ಪ್ರಧಾನಿಯಾಗಿ ಈ ಜಾಗದಲ್ಲಿ ಕೂತು ತೀರ್ಮಾನಿಸುವುದು ಕಷ್ಟವಾಗುತ್ತಿದೆ. ಸಾಧ್ಯವಾದಷ್ಟುಪರಿಹಾರ ಮಾಡುತ್ತಿರುವುದಾಗಿ ಮೋದಿ ಉತ್ತರ ಕೊಟ್ಟರು ಎಂದು ದೇವೇಗೌಡರು ಹೇಳಿದರು.
ಮೋದಿ ಅಧ್ಯಕ್ಷತೆಯಲ್ಲಿ G20 ಪೂರ್ವಭಾವಿ ಸಭೆ, ಅನಾರೋಗ್ಯದಲ್ಲೂ ಮಾಜಿ ಪ್ರಧಾನಿ ದೇವೇಗೌಡ ಭಾಗಿ!
ಕುಂಚಿಟಿಗರಿಗೆ ನ್ಯಾಯ ಕೊಡಿ:
ಕುಂಚಿಟಿಗ ಸಮುದಾಯಕ್ಕೆ ಅನ್ಯಾಯ ಆಗಿರುವ ಬಗ್ಗೆ ವಿವರವಾಗಿ ಮೋದಿಯವರಿಗೆ ಹೇಳಿದ್ದೇನೆ. ಕುಂಚಿಟಿಗ ಸಮಯದಾಯ 6,7 ತಾಲೂಕುಗಳಲ್ಲಿದೆ. ಕುಂಚಿಟಿಗ ಸಮುದಾಯವನ್ನು ಪ್ರತ್ಯೇಕವಾಗಿ ಗುರುತಿಸಬೇಕಿದೆ. ಕೇಂದ್ರ ಒಬಿಸಿ ಪಟ್ಟಿಗೆ ಈ ಸಮುದಾಯವನ್ನು ಸೇರಿಸಬೇಕಿದೆ ಅಂತ ಮನವಿ ಮಾಡಿರುವುದಾಗಿ ತಿಳಿಸಿದರು.
ಬಿಎಸ್‌ವೈ ಅಡ್ಡಗಾಲು:
ಹಾಸನ ಏರ್‌ಪೋರ್ಟ್ ವಿಚಾರವನ್ನು ಪ್ರಸ್ತಾಪ ಮಾಡಿದ್ದೇನೆ. ಏರ್‌ಪೋರ್ಟ್‌ಗೆ ಯಡಿಯೂರಪ್ಪ ಅಡ್ಡಗಾಲು ಹಾಕುತ್ತಿದ್ದರು, ಸಣ್ಣ ಸಹಾಯವನ್ನೂ ಮಾಡಲಿಲ್ಲ. ಏನೇ ಆದ್ರೂ ಏರ್‌ಪೋರ್ಟ್ ಕೆಲಸ ಮಾಡಲಿಲ್ಲ. ಹಾಗಾಗಿ ನೀವೇ ತೀರ್ಮಾನ ಮಾಡಿ ಎಂದು ಪ್ರಧಾನಿ ಮೋದಿಯವರಿಗೆ ಹೇಳಿರುವುದಾಗಿ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ