ಬಡವರಿಗೆ ರೇಶನ್‌ ನಿರಾಕರಿಸುವುದು ಅಪರಾಧ: ಹೈಕೋರ್ಟ್

By Kannadaprabha News  |  First Published Dec 14, 2022, 12:36 AM IST
  • ಬಡವರಿಗೆ ರೇಶನ್‌ ನಕಾರ ಅಪರಾಧ: ಹೈಕೋರ್ಟ್
  •  ಪಡಿತರ ಕೊಡದ ರೇಶನ್‌ ಅಂಗಡಿ ರದ್ದು ಸರಿ
  •  ರಾಮನಗರ ರೇಶನ ಅಂಗಡಿ ರದ್ದು ಆದೇಶಕ್ಕೆ ಅಸ್ತು

ಬೆಂಗಳೂರು (ಡಿ.14) ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ (ಪಿಡಿಎಸ್‌) ಪಡಿತರ ಸರಬರಾಜು ಮಾಡದಿರುವುದು ಗಂಭೀರ ಸ್ವರೂಪದ ಅಪರಾಧವಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಇದೇ ಆರೋಪದ ಮೇಲೆ ವ್ಯಕ್ತಿಯೊಬ್ಬರ ನ್ಯಾಯ ಬೆಲೆ ಅಂಗಡಿ ಪರವಾನಗಿ ರದ್ದುಪಡಿಸಿದ ಕ್ರಮವನ್ನು ಎತ್ತಿಹಿಡಿದಿದೆ.

ಹೆಚ್ಚಿನ ಬೆಲೆಗೆ ಪಡಿತರ ವಿತರಿಸಿದ ಹಾಗೂ ಕೆಲ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ವಿತರಿಸದ ಆರೋಪದ ಮೇಲೆ ರಾಮನಗರ ಜಿಲ್ಲಾ ವಾಜರಹಳ್ಳಿ ನಿವಾಸಿ ವಿ.ಎಂ. ಸಜೀವಯ್ಯ ಅವರ ನ್ಯಾಯಬೆಲೆ ಅಂಗಡಿ ಪರವಾನಗಿ ರದ್ದುಪಡಿಸಿದ್ದ ಆಹಾರ ಇಲಾಖೆ ಉಪ ಆಯುಕ್ತರ ಕ್ರಮವನ್ನು ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ಪುರಸ್ಕರಿಸಿತ್ತು. ಈ ಆದೇಶ ರದ್ದು ಕೋರಿ ಸಂಜೀವಯ್ಯ ಅವರ ಪತ್ನಿ ಜಯಮ್ಮ (ವಿ.ಎಂ. ಸಂಜೀವಯ್ಯ ಮೃತಪಟ್ಟಿದ್ದಾರೆ) ಮತ್ತವರ ಕಟುಂಬ ಸದಸ್ಯರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

Tap to resize

Latest Videos

ಕೋರ್ಟ್‌ ಆದೇಶ ಪಾಲಿಸದ ತಹಶೀಲ್ದಾರ್‌ಗೆ 3 ಲಕ್ಷ ರು. ದಂಡ

ಈ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ, ಏಕ ಸದಸ್ಯ ನ್ಯಾಯಪೀಠದ ಆದೇಶವನ್ನು ಎತಿ ್ತಹಿಡಿದಿದೆ.

ಅಲ್ಲದೆ, ಆರ್ಥಿಕವಾಗಿ ದುರ್ಬಲ ಮತ್ತು ಬಡತನದ ರೇಖೆಗಿಂತ ಕೆಳಗಿರುವವರಿಗೆ ಆಹಾರ ಧಾನ್ಯ ಮತ್ತು ಸೀಮೆ ಎಣ್ಣೆ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ನಿಗದಿತ ಬೆಲೆಗೆ ವಿತರಿಸುವುದೇ ಸಾರ್ವಜನಿಕ ವಿತರಣಾ ಯೋಜನೆಯ ಧ್ಯೇಯೋದ್ದೇಶವಾಗಿದೆ. ಅಂತಹ ವ್ಯಕ್ತಿಗಳಿಗೆ ಆಹಾರ ಧಾನ್ಯ ವಿತರಿಸದಿರುವುದು ಗಂಭೀರ ಸ್ವರೂಪದ ಅಪರಾಧ ಎಂದು ಪೀಠ ಅಭಿಪ್ರಾಯಪಟ್ಟಿತು.

ಪ್ರಕರಣವೇನು?:

ಸಂಜೀವಯ್ಯ ನ್ಯಾಯಬೆಲೆ ಅಂಗಡಿ ಪರವಾನಗಿ ಪಡೆದುಕೊಂಡಿದ್ದರು. ಹೆಚ್ಚಿನ ಬೆಲೆಗೆ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಕೆಲ ಪಡಿತರ ದಾರರಿಗೆ ಪಡಿತರ ಲಭ್ಯವಾಗುತ್ತಿಲ್ಲ. ಪಡಿತರ ವಿತರಿಸಿದ ನಂತರ ಕಾರ್ಡುದಾರರಿಗೆ ರಸೀದಿ ನೀಡುತ್ತಿಲ್ಲ ಎಂಬ ಆರೋಪ ಸಂಬಂಧ ವಿವರಣೆ ನೀಡುವಂತೆ ಸೂಚಿಸಿ ಸಂಜೀವಯ್ಯಗೆ 2008ರ ಜು.22ರಂದು ರಾಮನಗರ ಜಿಲ್ಲಾ ಆಹಾರ ಇಲಾಖೆ ಉಪ ಆಯುಕ್ತರು ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದ್ದರು. ನಂತರ ವಿಚಾರಣೆ ನಡೆಸಿ ಸಂಜೀವಯ್ಯ ಪರವಾನಗಿ ರದ್ದುಪಡಿಸಿದ್ದರು.

ಮಗು ಹುಟ್ಟುವ ಮುನ್ನವೇ ದತ್ತು ಸ್ವೀಕಾರ ಸಲ್ಲ: ಹೈಕೋರ್ಟ್‌

ಆ ಆದೇಶವನ್ನು ಮೆಲ್ಮನವಿ ಪ್ರಾಧಿಕಾರ ಮತ್ತು ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ಪುರಸ್ಕರಿಸಿತ್ತು. ಇದರಿಂದ ಜಯಮ್ಮ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿ, ಪ್ರಕರಣದಲ್ಲಿ ಮಾಡಲಾಗಿರುವ ಆರೋಪಗಳು ಗಂಭೀರ ಸ್ವರೂಪದಲ್ಲ ಎಂದು ವಾದಿಸಿದ್ದರು. ಅದನ್ನು ಒಪ್ಪದ ವಿಭಾಗೀಯ ಪೀಠ ಮೇಲ್ಮನವಿಯನ್ನು ವಜಾಗೊಳಿಸಿದೆ.

click me!