ಶೇ.10 ರಷ್ಟು ಮೀಸಲು: ದೊಡ್ಡ ಗೌಡರು ಬೇಕೆಂದರು!

By Web DeskFirst Published Jan 8, 2019, 1:35 PM IST
Highlights

ಉನ್ನತ ವರ್ಗದ ಬಡವರಿಗಾಗಿ ಶೇ.10ರಷ್ಟು ಮೀಸಲು| ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಜೆಡಿಎಸ್ ಬೆಂಬಲ| ಟ್ವಿಟ್ಟರ್ ನಲ್ಲಿ ಪ್ರಸ್ತಾವನೆಗೆ ಬೆಂಬಲ ಸೂಚಿಸಿದ ಮಾಜಿ ಪ್ರಧಾನಿ| ‘ಜೆಡಿಎಸ್ ಯಾವಾಗಲೂ ಸಾಮಾಜಿಕ, ಆರ್ಥಿಕ ಸಮಾನತೆಗೆ ಬದ್ಧ’| ಮೋದಿ ನಿರ್ಧಾರ ಬೆಂಬಲಿಸಿದ ಹೆಚ್‌.ಡಿ. ದೇವೇಗೌಡ

ಬೆಂಗಳೂರು(ಜ.08): ಉನ್ನತ ವರ್ಗದ ಬಡವರಿಗಾಗಿ ಶೇ.10 ರಷ್ಟು ಮೀಸಲು ನೀಡುವ ಕೇಂದ್ರ ಸರ್ಕಾರದ ಪ್ರಸ್ತಾವವನ್ನು ಜೆಡಿಎಸ್ ರಾಷ್ಟ್ರಾಧ್ಯಕ್ಷ, ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಬೆಂಬಲಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ದೇವೇಗೌಡ, ಜೆಡಿಎಸ್ ಯಾವಾಗಲೂ ಸಾಮಾಜಿಕ, ಆರ್ಥಿಕ ಸಮಾನತೆಗೆ ಬದ್ಧವಾಗಿದ್ದು, ಉನ್ನತ ವರ್ಗದ ಬಡವರಿಗಾಗಿ ಶೇ. 10ರಷ್ಟು ಮೀಸಲಾತಿಯನ್ನು ಬೆಂಬಲಿಸಲಿದೆ ಎಂದು ಹೇಳಿದ್ದಾರೆ.

Janata Dal (Secular) supports the 10% reservation in jobs and educational institutions for economically weaker sections of the upper castes.

We have always stood for, and will continue to stand for betterment of the underprivileged and weaker sections of the society.

— H D Devegowda (@H_D_Devegowda)

ಜೆಡಿಎಸ್ ಮೊದಲಿನಿಂದಲೂ ಬಡವರ ಧ್ವನಿಯಾಗಿ ಕೆಲಸ ಮಾಡುತ್ತಿದ್ದು, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಯಾವುದೇ ವರ್ಗವನ್ನು ಮೇಲೆತ್ತುವ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಎಂದು ದೇವೇಗೌಡ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
 

ಮೇಲ್ಜಾತಿ ಬಡವರಿಗೂ ಉದ್ಯೋಗದಲ್ಲಿ ಮೀಸಲಾತಿ, ಮೋದಿ ಘೋಷಣೆ..!

ಶೇ.10 ಮೀಸಲು: ಸೋಶಿಯಲ್ ಮೀಡಿಯಾ ಭರ್ಜರಿ ರಿಯಾಕ್ಷನ್

ಮೋದಿ ಮೀಸಲು ಮೊದಲು ಪ್ರಕಟ ಮಾಡಿದ್ದು ಏಷ್ಯಾನೆಟ್ ನ್ಯೂಸ್

ಮೀಸಲಾತಿ ನೀಡದೇ ಇಂದಿರಾ ಗಾಂಧಿ ಉತ್ತಮ ಆಡಳಿತ ಗಡ್ಕರಿ ಶ್ಲಾಘನೆ!

click me!