ವಿವಿಧ ಬೇಡಿಕೆಗಳ ಪೂರೈಕೆಗಾಗಿ ಕಾರ್ಮಿಕ ಸಂಘಟನೆಗಳು ಕರೆದಿರುವ ಭಾರತ್ ಬಂದ್ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಯಾವೆಲ್ಲಾ ವ್ಯವಸ್ಥೆಗಳು ಸಿಗಲಿವೆ ಎಂಬ ವಿಚಾರ ಗೊಂದಲ ಮೂಡಿಸಿದೆ. ಮತ್ತೊಂದೆಡೆ ವಿದ್ಯಾರ್ಥಿಗಳು ಕೂಡಾ ಶಾಲಾ ಕಾಲೇಜುಗಳಿಗೆ ಹೋಗಬೇಕಾ? ಎಂದು ತಿಳಿಯದೇ ಕಂಗಾಲಾಗಿದ್ದಾರೆ. ಹಾಗಾದ್ರೆ ರಾಜ್ಯದ ಯಾವೆಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಅಧಿಕೃತ ರಜೆ ಘೋಷಿಸಿದ್ದಾರೆ? ಇಲ್ಲಿದೆ ಪಟ್ಟಿ
ಬೆಂಗಳೂರು[ಜ.08]: ಮೋಟಾರು ವಾಹನ ತಿದ್ದುಪಡಿ ಮಸೂದೆ, ಕಾರ್ಮಿಕ ಕಾನೂನು ತಿದ್ದುಪಡಿ ಸೇರಿದಂತೆ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಕಾರ್ಮಿಕ ಸಂಘಟನೆಗಳು ಮಂಗಳವಾರದಿಂದ ಎರಡು ದಿನ ನಡೆಸಲಿರುವ ದೇಶವ್ಯಾಪಿ ಭಾರತ್ ಬಂದ್‌ಗೆ ರಾಜ್ಯದ ಹಲವು ಸಂಘಟನೆಗಳು, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಬೆಂಬಲ ವ್ಯಕ್ತಪಡಿಸಿವೆ. ಹೀಗಿರುವಾಗ ಶಾಲಾ ಕಾಲೇಜುಗಳು ತೆರೆಯುತ್ತವಾ? ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾ? ಎಂಬ ಗೊಂದಲದಲ್ಲಿದ್ದಾರೆ. ಈಗಾಗಲೇ ಕೆಲ ಜಿಲ್ಲಾಧಿಕಾರಿಗಳು ಅಧಿಕೃತವಾಗಿ ರಜೆ ಘೋಷಿಸಿದ್ದಾರೆ. ಹಾಗಿದ್ದರೆ ರಾಜ್ಯದ ಯಾವೆಲ್ಲ ಜಿಲ್ಲೆಗಳಲ್ಲಿ ಡಿಸಿಗಳು ಅಧಿಕೃತ ರಜೆ ಘೋಷಿಸಿವೆ? ಇಲ್ಲಿದೆ ಪಟ್ಟಿ
ಭಾರತ್ ಬಂದ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲೆಗಳ ಪಟ್ಟಿ.
ಬೆಂಗಳೂರು ನಗರ
ಮಂಡ್ಯ
ತುಮಕೂರು
ಉತ್ತರ ಕನ್ನಡ
ಚಿಕ್ಕಬಳ್ಳಾಪುರ
ದಾವಣಗೆರೆ
ಕೊಪ್ಪಳ
ಕೋಲಾರ
ಮೈಸೂರು
ಬಳ್ಳಾರಿ
ಧಾರವಾಡ
ಚಾಮರಾಜನಗರ
ರಾಯಚೂರು
ಗದಗ
ದಕ್ಷಿಣ ಕನ್ನಡ
ಚಿತ್ರದುರ್ಗ
ಉಡುಪಿ
ಹೀಗಿದ್ದರೂ ಕೆಲ ಜಿಲ್ಲಾಧಿಕಾರಿಗಳು ಪರಿಸ್ಥಿತಿ ನೋಡಿಕೊಂಡು ರಜೆ ಘೋಷಣೆ ಮಾಡಲಿದ್ದಾರೆ. ಶಾಲಾ ಕಾಲೇಜುಗಳಿಗೆ ಅಧಿಕೃತ ರಜೆ ಘೋಷಿಸದ ಜಿಲ್ಲೆಗಳು.
ಮಡಿಕೇರಿ
ಶಿವಮೊಗ್ಗ
ಚಿಕ್ಕಮಗಳೂರು
ಇನ್ನು ಮಕ್ಕಳು ಭಾರತ್ ಬಂದ್ ಪ್ರಯುಕ್ತ ರಜೆ ಸಿಕ್ಕಿದೆ ಎಂದು ಖುಷಿ ಪಡುವತ್ಲಿಲ. ಯಾಕೆಂದರೆ ಜಿಲ್ಲಾಧಿಕಾರಿಗಳು ಎರಡು ದಿನದ ತರಗತಿಗಳನ್ನು ಶನಿವಾರ ಹಾಗೂ ಭಾನುವಾರದಂದು ನಡೆಸಬೇಕೆಂದು ಶಾಲಾ ಕಾಲೇಜುಗಳಿಗೆ ಸೂಚಿಸಿದ್ದಾರೆ.