ಬೋಗಿಬೀಲ್ ಸೇತುವೆ ಉದ್ಘಾಟನೆಗಿಲ್ಲ ಆಹ್ವಾನ: ದೊಡ್ಡ ಗೌಡರ ಅಪಸ್ವರ!

By Web DeskFirst Published Dec 25, 2018, 6:35 PM IST
Highlights

ದೇಶದ ಅತಿ ಉದ್ದದ ಬೋಗಿಬೀಲ್ ಸೇತುವೆ ಲೋಕಾರ್ಪಣೆ| 4.9 ಕಿ.ಮೀ. ಉದ್ದದ ರೈಲ್ ರೋಡ್ ಉದ್ಘಾಟಿಸಿದ ಪ್ರಧಾನಿ ಮೋದಿ| ಉದ್ಘಾಟನೆಗೆ ಆಹ್ವಾನ ನೀಡದ್ದಕ್ಕೆ ಮಾಜಿ ಪ್ರಧಾನಿ ದೇವೇಗೌಡ ಅಪಸ್ವರ| ದೇವೇಗೌಡ ಪ್ರಧಾನಿಯಾಗಿದ್ದ ಕಾಲದಲ್ಲಿ ಸೇತುವೆ ನಿರ್ಮಾಣಕ್ಕೆ ಮಂಜೂರಾತಿ| ಸಮಾರಂಭಕ್ಕೆ ಆಹ್ವಾನಿಸದಿರುವುದು ನೋವುಂಟು ಮಾಡಿದೆ ಎಂದ ದೇವೇಗೌಡ

ಬೆಂಗಳೂರು(ಡಿ.25): ಇಂದು ಪ್ರಧಾನಿ ನರೇಂದ್ರ ಮೋದಿ ದೇಶದ ಅತಿ ಉದ್ದದ ರೖಲ್ ರೋಡ್ ಆದ ಬೋಗಿಬೀಲ್ ಸೇತುವೆಯನ್ನು ಉದ್ಘಾಟಿಸಿದ್ದಾರೆ. ಈ ಮಧ್ಯೆ ಉದ್ಘಾಟನೆಗೆ ತಮ್ಮನ್ನು ಆಹ್ವಾನಿಸದ ಕಾರಣಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅಪಸ್ವರ ಎತ್ತಿದ್ದಾರೆ.

‘ನಾನು ಅಡಿಗಲ್ಲು ಹಾಕಿದ ಸೇತುವೆ ಉದ್ಘಾಟನೆಗೆ ನನಗೆ ಅಹ್ವಾನ ನೀಡಿಲ್ಲ..’ ಎಂದು ದೇವೇಗೌಡ ಅಸಮಾಧಾನ ಹೊರ ಹಾಕಿದ್ದಾರೆ. ‘ನನ್ನನ್ನು ಯಾರು ಉದ್ಘಾಟನೆಗೆ ಕರೆದಿಲ್ಲ.ನಾವು ಮಾಡಿದ ಕೆಲಸ ಯಾರು ನೆನಪು ಇಟ್ಟುಕೊಳ್ತಾರೆ ಹೇಳಿ.ಅದೇನೂ ದೊಡ್ಡ ವಿಷಯ ಅಲ್ಲ ಬಿಡಿ..’ಎಂದು ಮಾಜಿ ಪ್ರಧಾನಿ ಮುಗುಳ್ನಕ್ಕರು. 

ಕಾಶ್ಮೀರ ರೈಲ್ವೆ ಯೋಜನೆ, ದೆಹಲಿ ಮೆಟ್ರೋ ಯೋಜನೆಗಳಿಗೆಲ್ಲಾ ತಾವು ಪ್ರಧಾನಿಯಾಗಿದ್ದಾಗಲೇ ಮಂಜೂರಾತಿ ದೊರಕಿದ್ದು ಎಂದೂ ದೇವೇಗೌಡ ಹೇಳಿದ್ದಾರೆ. ಆದರೆ ಕೇಂದ್ರ ಸರ್ಕಾರ ಅದೆಲ್ಲವನ್ನೂ ಮರೆತು ಕೇವಲ ಪ್ರಧಾನಿ ಮೋದಿ ಅವರನ್ನು ವಿಜೃಂಭಿಸುತ್ತಿದೆ ಎಂದು ದೇವೇಗೌಡರು ಹರಿಹಾಯ್ದರು.

ಪ್ರಧಾನಿ ಮೋದಿಯಿಂದ ದೇಶದ ಉದ್ದದ ರೈಲ್ ರೋಡ್ ಲೋಕಾರ್ಪಣೆ!

ಗೌಡರು ಶಂಕು ಸ್ಥಾಪನೆ ಮಾಡಿದ್ದ ಅತಿ ಉದ್ದನೆ ಸೇತುವೆ ಲೋಕಾರ್ಪಣೆಗೆ ಸಿದ್ಧ

click me!