
ಬಾಗಲಕೋಟೆ(ಡಿ.25): ಕಳೆದ ಕೆಲವು ದಿನಗಳಿಂದ ಸುಮ್ಮನಿದ್ದ ಕೇಂದ್ರ ಸಚಿವ, ಬಿಜೆಪಿ ಫೈರ್ ಬ್ರ್ಯಾಂಡ್ ನಾಯಕ ಅನಂತ್ ಕುಮಾರ್ ಹೆಗಡೆ, ಇದೀಗ ಮತ್ತೆ ಗುಡುಗಲು ಶುರು ಮಾಡಿದ್ದಾರೆ.
ಶತಮಾನಗಳ ಕಾಲ ನಮ್ಮ ರಕ್ತಕ್ಕೆ ಗೌರವ ಸಿಗಬೇಕಾದರೆ ಮತ್ತೊಮ್ಮೆ ಪ್ರಧಾನಿ ಮೋದಿ ಅವರನ್ನು ಗೆಲ್ಲಿಸಬೇಕೆಂದು ಅನಂತ್ ಕುಮಾರ್ ಹೆಗಡೆ ಬಾಗಲಕೋಟೆಯಲ್ಲಿ ಹೇಳಿಕೆ ನೀಡಿದ್ದಾರೆ.
ನಗರದ ಬಸವೇಶ್ವರ ಮಿನಿ ಆಡಿಟೋರಿಯಂ ಹಾಲ್‌ನಲ್ಲಿ ನಡೆದ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮಾತನಾಡಿದರು.
ಈ ದೇಶದ ಸಂಸ್ಕೃತಿ ಬೇರುಗಳು ಗಟ್ಟಿಯಾಗಬೇಕು, ಈ ದೇಶದ ಮಣ್ಣಿಗೆ ಗೌರವ ಕೊಡುವ ಸರ್ಕಾರ ಬರಬೇಕು.ಮೋದಿ ಮತ್ತೊಮ್ಮೆ ಪ್ರದಾನಮಂತ್ರಿ ಆಗಬೇಕೇನ್ನುವದು ಇಡೀ ಜಗತ್ತೀನ ಅಪೇಕ್ಷೆ. ಅದು ನಮಗಿಂತಲೂ ಜಗತ್ತಿಗೆ ಬೇಕಾಗಿದೆ ಎಂದು ಹೆಗಡೆ ಹೇಳಿದರು.
"
ನಮ್ಮ ದೇಶದಲ್ಲಿ ನಮಗೆ ಬೇಕಾದಂತ ಸರ್ಕಾರ ರಚನೆಯಾಗಬೇಕು. ವಿರೋಧ ಪಕ್ಷ ,-ಆಡಳಿತ ಪಕ್ಷ ಇರೋದು ಸಹಜ. ಈ ದೇಶದಲ್ಲಿ ಕೆಲವೇ ಕೆಲವು ಮಹಿನೀಯರನ್ನು ನೆನಪಿಸಿಕೊಳ್ಳಬೇಕು.ಲಾಲ್ ಬಹದ್ದೂರ್ ಶಾಸ್ತ್ರಿ ಸೇರಿ ನಮ್ಮ ಸಿದ್ದಾಂತ ಗೌರವಿಸಿದ ಮಹಿನೀಯರನ್ನು ನೆನಪಿಸಿಕೊಳ್ಳಬೇಕು. ಕಾಂಗ್ರೆಸ್ಸೇತರ ಮಹಿನೀಯರನ್ನು ನೆನಪಿಸಿಕೊಳ್ಳಬೇಕು ಎಂದು ಹೆಗಡೆ ನುಡಿದಿದ್ದಾರೆ.
ಅಟಲ್ ದೇಶ ಕಂಡ ಮಹಾನ್ ನಾಯಕ. ದೇಶಕ್ಕಾಗಿ ಸ್ವಂತ ಬದುಕಿಗೆ ಮಿಡಿಯದೇ ದುಡಿದವರು ಅವರು. ಅವರಿಗೆ ಕಪಟ, ಕಲ್ಮಶ ಇರಲಿಲ್ಲ.ಬಾಲ್ಯದಲ್ಲಿರೋ ಮಗುವಿನಂತೆ ವಾಜಪೇಯಿ ಇದ್ದರು ಎಂದು ಹೆಗಡೆ ತಮ್ಮ ನಾಯಕನನ್ನು ನೆನೆದರು.
ಟಿಪ್ಪು ಜಯಂತಿ ಆಮಂತ್ರಣದಲ್ಲಿ ನನ್ನ ಹೆಸರು ಬೇಡ: ಅನಂತ್ ಹೆಗಡೆ
ನೆಹರು ವಿರುದ್ಧ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ
ರಾಹುಲ್ ಗಾಂಧಿ ಅಪ್ರಬುದ್ಧತೆಯ ಪ್ರತೀಕ : ಅನಂತ್ ಕುಮಾರ್ ಹೆಗಡೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ