
ಬೆಳಗಾವಿ(ಡಿ.25): ಜನರಿಗೆ ಈತ ಮಾಹಿತಿ ಹಕ್ಕು ಹೋರಾಟಗಾರ ಎಂದೇ ಚಿರಪರಿಚಿತ. ಆದರೆ ಈತನ ಮನೆಯಲ್ಲಿ ಖೊಟಾ ನೋಟುಗಳ ರಾಶಿ ಸಿಕ್ಕಾಗ ಇಡೀ ನಗರ ಬೆಚ್ಚಿ ಬಿದ್ದಿದೆ.
ಹೌದು, ಬೆಳಗಾವಿಯಲ್ಲಿ ಬೃಹತ್ ಖೋಟಾ ನೋಟು ಜಾಲವನ್ನು ಹೆಡೆಮುರಿ ಕಟ್ಟಿರುವ ಪೊಲೀಸರು, ಆರ್‌ಟಿಐ ಕಾರ್ಯಕರ್ತ ಎಂದು ಸೋಗು ಹಾಕಿಕೊಂಡಿದ್ದ ಖದೀಮನೋರ್ವನನ್ನು ಆತನ ಸಹಚರನೊಂದಿಗೆ ಬಂಧಿಸಿದ್ದಾರೆ.
ಇಲ್ಲಿನ ರಫೀಕ್ ದೇಸಾಯಿ ಎಂಬಾತ ಆರ್‌ಟಿಐ ಕಾರ್ಯಕರ್ತ ಎಂದು ಹೇಳಿಕೊಂಡು ತನ್ನ ಮನೆಯಲ್ಲಿ ಖೋಟಾ ನೋಟು ಮುದ್ರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ರಫೀಕ್ ಜೊತೆ ಆತನ ಸಹಚರ ಆಸೀಫ್ ಶೇಖ್ ಎಂಬಾತನನ್ನೂ ಬಂಧಿಸಲಾಗಿದೆ.
"
ದಾಳಿ ವೇಳೆ ರಫೀಕ್ ಮನೆಯಲ್ಲಿ 1 ಕೋಟಿ, 81 ಸಾವಿರ ಖೋಟಾ ನೋಡು ಪತ್ತೆಯಾಗಿದ್ದು, 2,000 ಮುಖಬೆಲೆಯ 4969 ಖೋಟಾ ನೋಟುಗಳು ಮತ್ತು 500 ರೂ. ಮುಖಬೆಲೆಯ 195 ನೋಟುಗಳನ್ನು ಜಪ್ತಿ ಮಾಡಲಾಗಿದೆ.
ಇದೇ ವೇಳೆ ಖೊಟಾ ನೋಟುಗಳನ್ನು ಸಾಗಾಟ ಮಾಡಲು ಬಳಸುತ್ತಿದ್ದ 2 ದ್ವಿಚಕ್ರ ವಾಹನಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಬೆಳಗಾವಿ ಪೊಲೀಸ್ ಆಯುಕ್ತ ರಾಜಪ್ಪ, ಪ್ರಕರಣವನ್ನು ಸಿಐಡಿಗೆ ವಹಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ