
ಬೆಂಗಳೂರು (ಫೆ.10) : ಪ್ರೇಮಿಗಳ ದಿನಾಚರಣೆ ಅಂದ್ರೆ ಪ್ರೀತಿಯಲ್ಲಿ ಬಿದ್ದ ತರುಣರಿಗೆ ಇನ್ನಿಲ್ಲದ ಸಂತಸ. ಆದ್ರೆ ಇದಕ್ಕೆ ಬ್ರೇಕ್ ಹಾಕಲು ಹಿಂದೂ ಪರ ಸಂಘಟನೆಗಳು ಮುಂದಾಗಿವೆ..
ಪ್ರೇಮಿಗಳ ದಿನಾಚರಣೆ ಅನ್ನೋದು ಪಾಶ್ಚಾತ್ಯ ಸಂಸ್ಕೃತಿಯಾಗಿದ್ದು ಸಂಸ್ಕಾರವಿಲ್ಲದ ಇಂಥ ಆಚರಣೆಗಳಿಂದ ಭಾರತದ ಸಂಸ್ಕೃತಿಗೆ ಧಕ್ಕೆಯಾಗಿದೆ ಎಂದು ಹಿಂದೂ ಪರ ಸಂಘಟನೆಗಳು ವಿರೋಧಿಸಲು ಮುಂದಾಗಿವೆ..
ಭಾರತದ ಉಜ್ವಲ ಭವಿಷ್ಯವನ್ನ ರೂಪಿಸಬೇಕಾದ ಈ ದೇಶದ ಯುವಕರು ಶ್ರೇಷ್ಠ ಭಾರತೀಯ ಸಂಸ್ಕೃತಿಯನ್ನು ಮರೆತು 'ಪ್ರೇಮಿಗಳ ದಿನಾಚರಣೆ'ಯಂತಹ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸಲು ಉತ್ಸುಕರಾಗಿದ್ದಾರೆ. ಹೀಗಾಗಿ ಹಿಂದೂ ಸಂಘಟನೆಗಳು ಈಬಾರಿಯ ಪ್ರೇಮಿಗಳ ದಿನಾಚರಣೆಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ..
ಇನ್ನೂ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ(Animal Welfare Board of India) ಫೆ.14 ರಂದು ಗೋ ಹಗ್ ಡೇ(Cow Hug Day) ಆಚರಣೆ ಮಾಡುವಂತೆ ಕರೆ ಕೊಟ್ಟಿದ್ದು.. ಹಸು ಅಪ್ಪುಗೆಯ ದಿನ ತಾಯಿ ಹಸುವಿನ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಜೀವನವನ್ನ ಸಂತೋಷದಿಂದ ಮತ್ತು ಸಕಾರಾತ್ಮಕ ಶಕ್ತಿಯಿಂದ ನಡೆಸಬಹುದಾಗಿದೆ. ಹೀಗಾಗಿ ಹಸು ಅಪ್ಪುಗೆಯ ದಿನ ಯೋಗದಿನದಂತೆಯೇ ಫೆ.14 ಆಚರಿಸುವಂತೆ ಕರೆ ಕೊಟ್ಟಿದ್ದಾರೆ..
Hug Day : ತಬ್ಬಿ ಕೊಳ್ಳಲೂ ದಿನವೊಂದಿದೆ, ದಿನಾ ತಬ್ಬಿಕೊಂಡ್ರೆ ಲಾಭ ಅಪಾರ!
ಇನ್ನೂ ಇದರ ಬಗ್ಗೆ ಇಂಟೆಲಿಜೆನ್ಸ್ ನಿಂದ ಮಾಹಿತಿ ಪಡೆದುಕೊಂಡಿರುವ ನಗರ ಪೊಲೀಸರು ಪ್ರೇಮಿಗಳು ಸ್ಥಳಗಳಲ್ಲಿ ಹೆಚ್ಚಿನ ಬಂದೋಬಸ್ತ್ ಗೆ ಸೂಚಿಸಲಾಗಿದೆ.. ಪಾರ್ಕ್ ಗಳು, ಬಸ್ ಸ್ಟಾಪ್, ಕಾಲೇಜಿನ ಸುತ್ತಮುತ್ತ ಪೊಲೀಸರಿಗೆ ಗಸ್ತು ತಿರುಗುವಂತೆ ಸೂಚಿಸಿದ್ದು.. ಆಯಾ ಠಾಣೆಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಚನೆ ಗಳನ್ನ ಕೊಟ್ಟಿದ್ದಾರೆ.
Cow Hug Day:ತಮಾಷೆಯಲ್ಲ ಗೋವನ್ನು ಅಪ್ಪಿಕೊಳ್ಳುವುದರಿಂದ ಇದೆ ಹಲವು ಪ್ರಯೋಜನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ