ಆದಾಯ ಮೀರಿ ಆಸ್ತಿ : ಫಾರೆಸ್ಟ್ ಆಫೀಸರ್ ಗೆ ಲೋಕಾಯುಕ್ತ ಶಾಕ್!

Published : Feb 10, 2023, 01:31 PM IST
ಆದಾಯ ಮೀರಿ ಆಸ್ತಿ : ಫಾರೆಸ್ಟ್ ಆಫೀಸರ್ ಗೆ  ಲೋಕಾಯುಕ್ತ ಶಾಕ್!

ಸಾರಾಂಶ

ಬೆಳ್ಳಂ ಬೆಳಗ್ಗೆ ಫಾರೆಸ್ಟ್ ಆಫೀಸರ್ ಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಬೆಂಗಳೂರಿನ ವಿಜಯನಗರದ ನಿವಾಸಿಯಾಗಿರುವ ವೆಂಕಟೇಶ್ ಜಿ KFS ಅಧಿಕಾರಿಯ ಮನೆ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿರುವ ಅಧಿಕಾರಿಗಳು. ಅಪಾರ ಆಸ್ತಿ ಪತ್ತೆ

ಬೆಂಗಳೂರು (ಫೆ.10) : ಬೆಳ್ಳಂ ಬೆಳಗ್ಗೆ ಫಾರೆಸ್ಟ್ ಆಫೀಸರ್ ಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ. 

ಬೆಂಗಳೂರಿನ ವಿಜಯನಗರದ ನಿವಾಸಿಯಾಗಿರುವ ವೆಂಕಟೇಶ್ ಜಿ KFS ಆಫೀಸರ್‌ ಆಗಿದ್ದು ಕೋಲಾರದ ಸೋಷಿಯಲ್ ಫಾರೆಸ್ಟ್(Kolar Social Forest) ನಲ್ಲಿ DCF (ಡೆಪ್ಯೂಟಿ ಕನ್ಸರ್ವೇಟರ್ ಆಫ್ ಫಾರೆಸ್ಟ್ ) ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.. ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಮಾಡಿರುವ ವೆಂಕಟೇಶ್(Venkatesh G KFS) ಮೇಲೆ ಹಲವು ದೂರುಗಳು ಬಂದಿದ್ದವು.

 ಈ ಹಿನ್ನೆಲೆ ಇಂದು ಬೆಳಗ್ಗೆ ಲೋಕಾಯುಕ್ತ(Karnataka Lokayukta) ಏಕಕಾಲದಲ್ಲಿ ಎಂಟು ಕಡೆ ದಾಳಿ ನಡೆಸಿದ್ದಾರೆ. ಎಂಟು ಕಡೆ ದಾಳಿಯಲ್ಲಿ ಮೂರು ಕಡೆ ಶ್ರೀಮಂತಿಕೆಯ ಫಾರ್ಮ್ ಹೌಸ್(Farm House) ಹೊಂದಿದ್ದಾನೆ ಎಂಬ ಮಾಹಿತಿಯಿತ್ತು. ಈ ಹಿನ್ನೆಲೆ ಕೋಲಾರದ ಮನೆ, ರಾಮನಗರದ ಮಾಗಡಿಯಲ್ಲಿ ಫಾರ್ಮ್ ಹೌಸ್  , ಬೆಂಗಳೂರಿನಲ್ಲಿ ಫ್ಲಾಟ್ ಸೇರಿದಂತೆ 8 ಕಡೆ ದಾಳಿ ನಡೆಸಿದ್ದಾರೆ. 

ದಾಳಿ ವೇಳೆ ಸಿಕ್ಕ 12 ಲಕ್ಷ ವಾಪಸ್‌ ನೀಡಿ: ಲೋಕಾ ಕೋರ್ಟ್‌ಗೆ ಹೈಕೋರ್ಟ್ ಸೂಚನೆ

ಬೆಳಗ್ಗೆ 5 ಗಂಟೆಗೆ ಲೋಕಾಯುಕ್ತ ದಾಳಿ ನಡೆಸಿದ ವೇಳೆ ವೆಂಕಟೇಶ್ ಕೊಲಾರಕ್ಕೆ ತೆರಳಲು ರೈಲು ನಿಲ್ದಾಣದಲ್ಲಿ ರೈಲಿಗೆ ಕಾಯುತಿದ್ದರು ಈ ವೇಳೆ ಮನೆ ಬಾಗಿಲು ತಟ್ಟಿದ ಲೋಕಾಯುಕ್ತ ಅಧಿಕಾರಿಗಳನ್ನ ನೋಡಿದ ವೆಂಕಟೇಶ್ ಪತ್ನಿ ಶಾಕ್ ಆಗಿ ವೆಂಕಟೇಶ್ ಗೆ ಕರೆ ಮಾಡಿದ್ದಾರೆ. ಮಾಹಿತಿ ತಿಳಿದ ವೆಂಕಟೇಶ್ ಮನೆಗೆ ದೌಡಾಯಿಸಿದ್ದು ಲೋಕಾಯುಕ್ತ ಅಧಿಕಾರಿಗಳು ಕೇಳಿರುವ ಎಲ್ಲಾ ದಾಖಲೆಗಳನ್ನ ಆತಂಕದಲ್ಲೇ ನೀಡಿದ್ದಾರೆ. 

ಲೋಕಾಯುಕ್ತ ದಾಳಿಯಲ್ಲಿ ವೆಂಕಟೇಶ್ ಗೆ ಸಂಬಂಧಿಸಿದ ಮೂರು ಕಡೆ ಕೋಟ್ಯಂತರ ರೂ. ಬೆಲೆ ಬಾಳುವ ಫಾರ್ಮ್ ಹೌಸ್, ಕೃಷಿ ಭೂಮಿಯನ್ನ ಹೊಂದಿರುವ ದಾಖಲೆಗಳು ಸಿಕ್ಕಿದೆ. ಇನ್ನೂ ರಿಯಲ್ ಎಸ್ಟೇಟ್(Real estate) ನಲ್ಲೂ ಪಾಲುದಾರಿಕೆ ಹೊಂದಿರುವ ವೆಂಕಟೇಶ್ ತನ್ನ ಐಟಿ ರಿಟರ್ನ್ಸ್ ತೋರಿಸಬೇಕಾಗುತ್ತದೆ ಈ ಹಿನ್ನೆಲೆ ತನ್ನ ತಂಗಿ ಹಾಗೂ ಸ್ನೇಹಿತನ ಹೆಸರಲ್ಲಿ ಪ್ರಾಪರ್ಟಿ ಹಾಗೂ ಹಣದ ವಹಿವಾಟು ನಡೆಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

 ಸದ್ಯ ದಾಳಿ ವೇಳೆ ಮನೆಯಲ್ಲಿ ಚಿನ್ನಾಭರಣ ಪತ್ತೆಯಾಗಿದ್ದು ಮೌಲ್ಯಮಾಪನ ಮಾಡಲು ಲೋಕಾಯುಕ್ತ ಅಧಿಕಾರಿಗಳು ಮುಂದಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!