
ಕೊಡಗಿನಲ್ಲಿ ಕೆಲ ದಿನಗಳಿಂದ ಮಳೆಗಾಲದ ಮಾಮೂಲಿ ಮಳೆಯಂತೆ ಧಾರಾಕಾರ ಮಳೆಯಾಗುತ್ತಿದ್ದು, ಈ ವೇಳೆ ಕಾಡಿಗೆ ಮೇಯಲು ಬಿಟ್ಟ ಹಸುಗಳಿಗೆ ಹಸುಗಳ ಮಾಲೀಕರು ಅವುಗಳು ಒದ್ದೆಯಾಗದಂತೆ ಪ್ಲಾಸ್ಟಿಕ್ ರೈನ್‌ಕೋಟ್ ಹಾಕಿದಂತಹ ವಿಶೇಷ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Coorgthekashmirofkarnataka ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ವೀಡಿಯೋದಲ್ಲಿ ಬಯಲಿನಲ್ಲಿ ಮೇಯುತ್ತಿರುವ ಎರಡು ಹಸುಗಳಿಗೆ ಒದ್ದೆಯಾಗದಂತೆ ಪ್ಲಾಸ್ಟಿಕ್ ಗೊರಬೆಯನ್ನು ಹಾಕಿರುವುದನ್ನು ಕಾಣಬಹುದಾಗಿದೆ.
ಮೇಯಲು ಬಿಟ್ಟ ಹಸುವಿಗೆ ಪ್ಲಾಸ್ಟಿಕ್ ಹೊದಿಕೆ:
ನಾಪೋಕ್ಲು ಭಾಗಮಂಡಲ ರಸ್ತೆಯ ಬಲ್ಲಮಾವಟಿಯಲ್ಲಿ ಅತಿಯಾದ ಮಳೆಯ ಕಾರಣ ಮೇಯಲು ಬಿಟ್ಟ ಹಸುಗಳಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಿ ಮಳೆಯಿಂದ ನೆನೆಯುವುದನ್ನು ತಪ್ಪಿಸಿದ ಮಾಲಿಕ ಎಂದು ಬರೆದು ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಸಾಮಾನ್ಯವಾಗಿ ಹಸುಗಳಿಗೆ ಈ ಮಳೆಗಾಲದ ಮಳೆಯಿಂದ ಅಂತ ಹಾನಿಯೇನು ಆಗುವುವುದಿಲ್ಲ, ಮಳೆಯಲ್ಲೇ ನೆನೆದರು ಆರೋಗ್ಯಕ್ಕೆ ಹಾನಿಯಾಗದಂತೆ ಅವು ಪ್ರಕೃತಿದತ್ತವಾಗಿ ಸಾಮರ್ಥ್ಯವನ್ನು ಹೊಂದಿವೆ. ಆದರೆ ಇಲ್ಲಿ ಅವುಗಳ ಮಾಲೀಕ ಅವುಗಳ ಮೇಲೆ ತೋರಿಸಿರುವ ಪ್ರೀತಿ ಎದ್ದು ಕಾಣುತ್ತದೆ. ಸಾಮಾನ್ಯವಾಗಿ ಮನುಷ್ಯರಿಗೆ ಮಳೆಯಲ್ಲಿ ನಿರಂತರ ನೆನೆದರೆ ಚಳಿ ಜ್ವರ ಬರುವುದುಂಟು, ಸೋ ಅದೇ ರೀತಿ ಇಲ್ಲಿ ಮಾಲೀಕ ತನ್ನ ಹಸುಗಳಿಗೆ ಹುಷಾರು ತಪ್ಪಬಹುದೇನೋ ಅಥವಾ ಮಳೆಗೆ ನೆನೆದು ಚಳಿಯಾಗಬಹುದೇನೋ ಎಂಬ ಕಾಳಜಿಯಿಂದ ಅವುಗಳಿಗೆ ಪ್ಲಾಸ್ಟಿಕ್ ಗೊರಬೆಯನ್ನು ಹಾಕಿದ್ದು, ಈ ವೀಡಿಯೋ ಭಾರಿ ವೈರಲ್ ಆಗಿದೆ.
ಅನೇಕರು ಮಾಲೀಕನಿಗೆ ಹಸುವಿನ ಮೇಲಿರುವ ಪ್ರೀತಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕರಾವಳಿ, ಮಲೆನಾಡು ಭಾಗದಲ್ಲಿ ಈ ಪ್ಲಾಸ್ಟಿಕ್ ಗೊರಬೆಯನ್ನು ಮಳೆಯ ಸಮಯದಲ್ಲಿ ಹೊಲದಲ್ಲಿ ಕೆಲಸ ಮಾಡುವ ಜನರು ಮಳೆಯಿಂದ ಪಾರಾಗುವುದಕ್ಕೆ ಬಳಸುತ್ತಾರೆ. ಈ ವಿಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.
ಬೇಟೆಯ ಬಗ್ಗೆ ಸ್ಪಷ್ಟನೋಟ ಪಡೆಯಲು ಚಿರತೆಯ ಕಸರತ್ತು
ಪ್ರಾಣಿಗಳ ಲೋಕ ಒಂದು ಅದ್ಭುತ ಪ್ರಪಂಚ ಅಲ್ಲಿನ ಅಪರೂಪದ ದೃಶ್ಯಗಳು ಆಗಾಗ ವೈರಲ್ ಆಗ್ತಿರ್ತವೆ. ಅದೇ ರೀತಿ ಇಲ್ಲೊಂದು ಕಡೆ ನಾಲ್ಕು ಕಾಲಿನಲ್ಲಿ ನಡೆಯುವ ಚಿರತೆ ತನ್ನ ಬೇಟೆಯ ಬಗ್ಗೆ ಸ್ಪಷ್ಟಚಿತ್ರಣ ಪಡೆಯುವುದಕ್ಕಾಗಿ ಮನುಷ್ಯರಂತೆ ಎರಡು ಕಾಲಿನಲ್ಲಿ ನಿಂತು ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದ್ದು, ಚಿರತೆಯ ಈ ಅಪರೂಪದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಈ ದೃಶ್ಯವನ್ನು ಪ್ರವಾಸಿಗರೊಬ್ಬರು ಸೆರೆ ಹಿಡಿದಿದ್ದಾರೆ.
ದಕ್ಷಿಣ ಆಫ್ರಿಕಾದ ಸತಾರ ರೆಸ್ಟ್ ಕ್ಯಾಂಪ್ ಸಮೀಪ ಬರುವ ಕ್ರೂಗರ್ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಬರುವ ಕುಮನಾ ಡ್ಯಾಂ ಬಳಿ ಈ ಅಪರೂಪದ ದೃಶ್ಯ ಸೆರೆಯಾಗಿದೆ. ಈ ಪ್ರದೇಶವು ವನ್ಯಜೀವಿಗಳ ಮಹತ್ವದ ಸ್ಥಳವಾಗಿದ್ದು, ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಇಲ್ಲಿ ಸಿಂಹಗಳು, ಜಿಂಕೆಗಳು, ಜಿರಾಫೆಗಳು, ಇಂಪಾಲ್‌ಗಳು ಹೆಚ್ಚಾಗಿ ಕಾಣಸಿಗುತ್ತವೆ. ಈ ಪ್ರದೇಶದಲ್ಲಿ ಈ ಕುಮನಾ ಡ್ಯಾಂ ಒಂದು ಪ್ರಮುಖ ಜೀವಸೆಲೆಯಾಗಿ ಕಾರ್ಯನಿರ್ವಹಿಸುತ್ತಾ ವೈವಿಧ್ಯಮಯ ಪ್ರಾಣಿಗಳನ್ನು ಆಕರ್ಷಿಸುತ್ತದೆ. ಇಂತಹ ಪ್ರದೇಶದಲ್ಲಿ ಪ್ರವಾಸಿಗರೊಬ್ಬರು ಈ ಚಿರತೆಯ ಅಪರೂಪದ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ಮನುಷ್ಯರಂತೆ 2 ಕಾಲಲ್ಲಿ ನಿಂತು ಚಿರತೆಯಿಂದ ಅವಲೋಕನ
ಈ ದೃಶ್ಯ ಈಗ ಪ್ರಾಣಿಪ್ರಿಯರನ್ನು ವ್ಯಾಪಕವಾಗಿ ಸೆಳೆದಿದೆ. ಇಲ್ಲಿ ಚಿರತೆಗಳು ಹೆಚ್ಚಾಗಿ ಇಂಪಾಲಾಗಳನ್ನು(ಜಿಂಕೆಯಂತಹ ಪ್ರಾಣಿ) ಬೇಟೆಯಾಡುತ್ತವೆ. ಈ ಚಿರತೆ ಇಂಪಾಲಾ ಮೇಲೆ ಹೊಂಚು ಹಾಕುತ್ತಿದ್ದು, ಉತ್ತಮ ನೋಟವನ್ನು ಪಡೆಯಲು ಅದು ಇದ್ದಕ್ಕಿದ್ದಂತೆ ತನ್ನ ಹಿಂಗಾಲುಗಳ ಮೇಲೆ ಕುಳಿತುಕೊಂಡಿತು. ನಂತರ, ಇನ್ನಷ್ಟು ಸ್ಪಷ್ಟವಾಗಿ ತನ್ನ ಬೇಟೆಯ ಮೇಲೆ ಗಮನ ನೀಡುವುದಕ್ಕೆ ಅದು ತನ್ನ ಹಿಂಗಾಲುಗಳ ಮೇಲೆ ಸಂಪೂರ್ಣವಾಗಿ ನೇರವಾಗಿ ಮನುಷ್ಯರಂತೆ ನಿಂತಿದೆ. ಈ ರೀತಿ ನಿಂತರೂ ಅದು ಬಹಳ ಆರಾಮವಾಗಿ ನಿಂತುಕೊಂಡು ತನ್ನ ಬೇಟೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿತ್ತು ಎಂದು ವೀಡಿಯೋ ಪೋಸ್ಟ್ ಮಾಡಿ ಬರೆಯಲಾಗಿದೆ.
ಇದನ್ನೂ ಓದಿ: ಬೀದಿಯಿಂದ ಬಂದು ಭದ್ರತಾ ಪಡೆ ಸೇರಿದ ಬೀದಿ ನಾಯಿ ಟೆಂಗಾನ ಕತೆ
ಇದನ್ನೂ ಓದಿ: ದಂತವೈದ್ಯರ ಇಕ್ಕಳ ನೋಡಿ ಓಟಕಿತ್ತ ಬಾಲಕ: ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಭಾರಿ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ