ರಾಜ್ಯದಲ್ಲೂ ಕರೆಂಟ್ ಫ್ರೀ ಯೋಜನೆಯ ನಡುವೆ ಈ ತಿಂಗಳ ಕರೆಂಟ್ ಬಿಲ್ ಜನರನ್ನ ರೊಚ್ಚಿಗೇಳುವಂತೆ ಮಾಡಿದೆ. ಜೊತೆಗೆ ಹೊಟೇಲ್, ಅಂಗಡಿ ಮುಂಗಟ್ಟುಗಳ ಬಿಲ್ ಕಂಡು ಸ್ವತಃ ಮಾಲಿಕರು ಕಂಗಾಲಾಗಿದ್ದಾರೆ. ಈ ನಡುವೆ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವೂ ವಿದ್ಯುತ್ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದು, ಈ ಬಾರಿ 5 ಲಕ್ಷಕ್ಕೂ ಅಧಿಕ ಬಿಲ್ ಬಂದಿದ್ದು, ಬಿಲ್ ಕಂಡು ಸ್ವತಃ ಕುಲಪತಿಗಳೇ ಶಾಕ್‌ಗೆ ಒಳಗಾಗಿದ್ದಾರೆ.
ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಜೂ. 22) : ರಾಜ್ಯದಲ್ಲೂ ಕರೆಂಟ್ ಫ್ರೀ ಯೋಜನೆಯ ನಡುವೆ ಈ ತಿಂಗಳ ಕರೆಂಟ್ ಬಿಲ್ ಜನರನ್ನ ರೊಚ್ಚಿಗೇಳುವಂತೆ ಮಾಡಿದೆ. ಜೊತೆಗೆ ಹೊಟೇಲ್, ಅಂಗಡಿ ಮುಂಗಟ್ಟುಗಳ ಬಿಲ್ ಕಂಡು ಸ್ವತಃ ಮಾಲಿಕರು ಕಂಗಾಲಾಗಿದ್ದಾರೆ. ಈ ನಡುವೆ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವೂ ವಿದ್ಯುತ್ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದು, ಈ ಬಾರಿ 5 ಲಕ್ಷಕ್ಕೂ ಅಧಿಕ ಬಿಲ್ ಬಂದಿದ್ದು, ಬಿಲ್ ಕಂಡು ಸ್ವತಃ ಕುಲಪತಿಗಳೇ ಶಾಕ್‌ಗೆ ಒಳಗಾಗಿದ್ದಾರೆ.
ಅಕ್ಕಮಹಾದೇವಿ ವಿವಿಯ ಕರೆಂಟ್ ಬಿಲ್ ಕಂಡು ಶಾಕ್..!
ದೊಡ್ಡ ಕ್ಯಾಂಪಸ್ ಹೊಂದಿರುವ ಮಹಿಳಾ ವಿಶ್ವವಿದ್ಯಾಲಯದಲ್ಲಿ ಕರೆಂಟ್ ಬಿಲ್ ಸರಾಸರಿ 3 ಲಕ್ಷದ ಆಸುಪಾಸಿರುತ್ತೆ. ಹಾಗೇ ಏಪ್ರಿಲ್ ತಿಂಗಳ ವಿದ್ಯುತ್ ಬಿಲ್ 3,39,313 ರೂ. ಬಂದಿತ್ತು. ಆದ್ರೆ ಕಳೆದ ಮೇ ತಿಂಗಳ ವಿದ್ಯುತ್ ಬಿಲ್ ಕಂಡ ವಿವಿ ಕುಲಪತಿಗಳಿಗೆ ಶಾಕ್ ಆಗಿದೆ ಯಾಕಂದ್ರೆ, ಸರಾಸರಿ 3 ಲಕ್ಷದ ಆಸುಪಾಸು ಬರ್ತಿದ್ದ ಕರೆಂಟ್ ಬಿಲ್ ಮೇ ತಿಂಗಳಲ್ಲಿ 5,06,302 ಲಕ್ಷ ರೂ. ಬಿಲ್ ಬಂದಿದೆ. ಇದು ವಿವಿ ಆಡಳಿತ ಮಂಡಳಿಯನ್ನು ಶಾಕ್ ಆಗುವಂತೆ ಮಾಡಿದೆ, ಮನೆಗಳ ಕರೆಂಟ್ ಬಿಲ್ ಅಧಿಕ ಎನ್ನುವಾಗಲೇ ವಿವಿಯಲ್ಲು ಕರೆಂಟ್ 5 ಲಕ್ಷ ದಾಟಿದ್ದು, ಅಚ್ಚರಿಯ ಜೊತೆಗೆ ಶಾಕ್ ಆಗೊ ಹಾಗೇ ಮಾಡಿದೆ.
ಬೆಳಗಾವಿ: ವಿಟಿಯುಗೆ ಬಂದಿದ್ದು 35 ಲಕ್ಷ ವಿದ್ಯುತ್ ಬಿಲ್, ಹೌಹಾರಿದ ಕುಲಪತಿ..!
ಸೋಲಾರ್ ವಿದ್ಯುತ್ ಸೌಲಭ್ಯದ ನಡುವೆಯು ಕರೆಂಟ್ ದುಪ್ಪಟ್ಟು..!
ಇನ್ನು ಅಕ್ಕ ಮಹಾದೇವಿ ವಿವಿ(Akkamahadevi university)ಯಲ್ಲಿ ಕರೆಂಟ್ ಕನೆಕ್ಷನ್ ಜೊತೆ ಜೊತೆಗೆ ಸೋಲಾರ್ ಸೌಲಭ್ಯವು ಇದೆ. ಈ ನಡುವೆ ವಿದ್ಯುತ್ ಬಿಲ್ ಮಿತಿಮೀರಿ ಬಂದಿರುವುದು ವಿವಿ ಆಡಳಿತ ಮಂಡಳಿ ಅಚ್ಚರಿಗೆ ಕಾರಣವಾಗಿದೆ.
ಬಿಲ್‌ನಲ್ಲಿ ಎಷ್ಟೆಷ್ಟು ಹೆಚ್ಚಳ..!?
ಜೂನ್ ತಿಂಗಳ ಬಿಲ್ ವೀಕ್ಷಿಸಿದರೆ ಹಲವು ಏರಿಕೆಗಳು ಕಂಡುಬಂದಿದೆ. ಮೊದಲು ಒಂದು ಕೆವಿ ವ್ಯಾಟ್‌ಗೆ ನಿಗದಿತ ಶುಲ್ಕ 260 ರೂ. ಇದ್ದದ್ದು ಈಗ ಅದನ್ನು 300 ರೂ.ಗೆ ಏರಿಸಲಾಗಿದೆ. ನಿಗದಿತ ಸ್ಲ್ಯಾಬ್ ಮೌಲ್ಯವೂ ಯೂನಿಟ್‌ಗೆ 7.50 ರೂ. ಗೆ ಏರಿದೆ. ಜೊತೆಗೆ ಎಫ್‌ಎಸಿ ದರವನ್ನೂ ಯೂನಿಟ್‌ಗೆ 2.55 ರೂ. ಗೆ ಏರಿಸಲಾಗಿದೆ. ಇದೆಲ್ಲದರ ಪರಿಣಾಮ 5,06,302 ಲಕ್ಷ ರೂ. ಬಂದಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗೆ ಕರೆಂಟ್ ಶಾಕ್: ಬಿಲ್ ನೋಡಿ ಹೌಹಾರಿದ ವಿಟಿಯು ಕುಲಪತಿ !
ಮಹಿಳಾ ವಿ.ವಿ ರಜಿಸ್ಟ್ರಾರ್ ಹೇಳೋದೇನು.!?
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಕ್ಕಮಹಾದೇವಿ ಮಹಿಳಾ ವಿವಜ ರಿಜಿಸ್ಟರ್ ಬಿ. ಎಸ್‌ನಾವಿ ಮಹಿಳಾ ವಿಶ್ವವಿದ್ಯಾಲಯ ದೊಡ್ಡ ಕ್ಯಾಂಪಸ್ ಹೊಂದಿದೆ. ಹೆಸ್ಕಾಂನಿಂದ ವಿದ್ಯುತ್ ಪಡೆಯುವುದರ ಜತೆಗೆ ಸೋಲಾರ ಮೂಲಕವೂ ನೈಸರ್ಗಿಕವಾಗಿ ವಿದ್ಯುತ್ ಪಡೆದು ಬಳಸಿಕೊಳ್ಳಲಾಗುತ್ತಿದೆ. ಪ್ರತಿ ತಿಂಗಳು 2-3 ಲಕ್ಷ ರೂ. ವಿದ್ಯುತ್ ಬಿಲ್ ಬರುತ್ತಿತ್ತು. ಆದರೆ ಈ ಬಾರಿ 5,63,302 ರೂ. ಬಿಲ್ ಬಂದಿದೆ. ಸೋಲಾರ್ ಕಂಪನಿ ಮತ್ತು ಹೆಸ್ಕಾಂ ನಡುವೆ ಯಾವ ರೀತಿಯ ಒಪ್ಪಂದ ಆಗಿದೆ ಎನ್ನುವುದರ ಬಗ್ಗೆ ನಮ್ಮ ವಕೀಲರ ಬಳಿ ಕಾನೂನು ಸಲಹೆ ಪಡೆದುಕೊಂಡು ಮುಂದೆ ವಿದ್ಯುತ್ ಬಿಲ್ ತುಂಬುವ ಬಗ್ಗೆ ವಿಚಾರ ಮಾಡಲಾಗುವುದು ಎಂದಿದ್ದಾರೆ.