ಕಟ್ಟಿಗೆ ತರಲು ಕಾಡಿಗೆ ಹೋದ ವ್ಯಕ್ತಿಯೊಬ್ಬ ತಲೆ ಸುತ್ತು ಬಂದು ನಿರ್ಜನ ಪ್ರದೇಶದಲ್ಲಿ ಬಿದ್ದಿದ್ದು, ಕೊನೆಗೆ ಸಾಕು ನಾಯಿಯಿಂದ ಪತ್ತೆಯಾಗಿ, ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹೊಸನಗರ ತಾಲೂಕಿನ ಸೂಡೂರಿನಲ್ಲಿ ನಡೆದಿದೆ.
ಶಿವಮೊಗ್ಗ (ನ.14): ಕಟ್ಟಿಗೆ ತರಲು ಕಾಡಿಗೆ ಹೋದ ವ್ಯಕ್ತಿಯೊಬ್ಬ ತಲೆ ಸುತ್ತು ಬಂದು ನಿರ್ಜನ ಪ್ರದೇಶದಲ್ಲಿ ಬಿದ್ದಿದ್ದು, ಕೊನೆಗೆ ಸಾಕು ನಾಯಿಯಿಂದ ಪತ್ತೆಯಾಗಿ, ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹೊಸನಗರ ತಾಲೂಕಿನ ಸೂಡೂರಿನಲ್ಲಿ ನಡೆದಿದೆ. ಸೂಡೂರಿನ ಶೇಖರಪ್ಪ ಎಂಬವರು ಆಯನೂರಿನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ಬೆಳಗ್ಗೆ ಸುಮಾರು 6 ಗಂಟೆಗೆ ಕಟ್ಟಿಗೆ ತರೋದಿಕ್ಕೆ ಕಾಡಿಗೆ ಹೋಗಿದ್ದಾರೆ. 10 ಗಂಟೆಗೆ ಮನೆಗೆ ವಾಪಸ್ಸಾಗುತ್ತಿದ್ದರು. ಆದರೆ, ಎಷ್ಟೊತ್ತಾದರೂ ಮನೆಗೆ ಮರಳಿರಲಿಲ್ಲ. ಹೀಗಾಗಿ, ಕುಟುಂಬದವರು ಊರಿನ ಒಂದಿಷ್ಟು ಜನರಿಗೆ ವಿಚಾರ ತಿಳಿಸಿದ್ದಾರೆ.
ಊರಿನವರು ಶೇಖರಪ್ಪ ಅವರನ್ನು ಹುಡುಕಲು ಕಾಡಿಗೆ ಹೋಗಿದ್ದಾರೆ. ಕಾಡಿನಲ್ಲಿ ಎಷ್ಟುಹುಡುಕಿದರು ಶೇಖರಪ್ಪ ಅವರ ಸುಳಿವು ಸಿಗಲೇ ಇಲ್ಲ. ಆದರೆ, ಈತ ಸಾಕಿದ್ದ ನಾಯಿಯೊಂದು ಶೇಖರಪ್ಪ ಇರುವ ಜಾಗ ಪತ್ತೆ ಹಚ್ಚಿದೆ. ಶ್ವಾನವು ಸುಮಾರು 4 ಗಂಟೆ ಸುಮಾರಿಗೆ ಶೇಖರಪ್ಪ ಇರುವ ಜಾಗಕ್ಕೆ ಊರಿನವರನ್ನು ಕರೆ ತಂದಿದೆ. ಅಸ್ವಸ್ಥಗೊಂಡಿದ್ದ ಶೇಖರಪ್ಪ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಈ ನಾಯಿ ಪ್ರತಿನಿತ್ಯ ಮಾಲೀಕನ ಜೊತೆಯಲ್ಲಿ ಹೋಗುತ್ತಿತ್ತಂತೆ. ಹಾಗಾಗಿಯೇ, ಶೇಖರಪ್ಪ ಅವರನ್ನು ಕಾಡಿನಲ್ಲಿ ಪತ್ತೆ ಮಾಡಿದೆ ಎನ್ನಲಾಗಿದೆ.
Shivamogga: 268 ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿದ ಅಧಿಕಾರಿಗಳು
ಯುವಜನರು ಸಂವಿಧಾನ ಮುಖೇನ ಕಾನೂನು ಅರಿಯಲಿ: ಯುವ ಸಮುದಾಯ ಸಂವಿಧಾನವನ್ನು ಓದುವ ಜತೆಗೆ ಅರಿತುಕೊಳ್ಳಬೇಕಾದ ಅಗತ್ಯವಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಹೇಳಿದರು. ಪಟ್ಟಣದ ಸುರಭಿ ಭವನದಲ್ಲಿ ತಾಲೂಕು ವಾಲ್ಮೀಕಿ ನಾಯಕ ಸಮಾಜ ಹಾಗೂ ಪರಿಶಿಷ್ಟಜಾತಿ ವರ್ಗಗಳ ಆಶ್ರಯದಲ್ಲಿ ಸಂವಿಧಾನದ ಆಶಯಗಳ ಕುರಿತು ನಡೆದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ದೇಶದ ಯುವಜನರು ಸಂವಿಧಾನವನ್ನು ಅಧ್ಯಯನ ಮಾಡುವ ಮೂಲಕ ಸಾಕಷ್ಟುತಿಳಿದುಕೊಳ್ಳುವ ಹಾಗೂ ಇತರರಿಗೂ ತಿಳಿಸುವ ಕೆಲಸ ಮಾಡಬೇಕಾಗಿದೆ.
ಸಂವಿಧಾನ ಎಲ್ಲ ಭಾರತೀಯರಿಗೂ ಮಹಾನ್ ಗ್ರಂಥವಾಗಿದೆ. ದೇಶವನ್ನು ಅರ್ಥ ಮಾಡಿಕೊಳ್ಳದೇ ಸಂವಿಧಾನ ಅರ್ಥವಾಗುವುದಿಲ್ಲ. ಸಂವಿಧಾನ ಬದುಕಿದರೆ ದೇಶಕ್ಕೂ, ನಮಗೂ ಒಳಿತಾಗುತ್ತದೆ. ಎಲ್ಲ ರಂಗದಲ್ಲಿಯೂ ದಲಿತ ಸಮುದಾಯದ ಜನರ ಪ್ರವೇಶವಾಗಿದೆ. ರಾಷ್ಟ್ರಪತಿ ಹುದ್ದೆ ಯಂತಹ ಮಹಾನ್ ಹುದ್ದೆ ಅಲಂಕರಿಸಿರುವ ಮಹಿಳೆ ದ್ರೌಪದಿ ಮುರ್ಮ ಇದಕ್ಕೆ ಸಾಕ್ಷಿಯಾಗಿದ್ದಾರೆ. ಇಂತಹದೊಂದು ಶಕ್ತಿ ಇರುವುದು ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಎಂಬುದು ನಾವೆಲ್ಲರೂ ಹೆಮ್ಮೆಪಡಬೇಕಾದ ಸಂಗತಿ ಎಂದರು. ಮೀಸಲಾತಿ ಸೌಲಭ್ಯವನ್ನು ಪರಿಶಿಷ್ಟಜಾತಿ ಪಂಗಡದ ಮಕ್ಕಳು ಉತ್ತಮವಾಗಿ ಬಳಕೆ ಮಾಡಿಕೊಂಡಾಗ ಮಾತ್ರ ಹುದ್ದೆಗಳು ಲಭಿಸಲು ಸಾಧ್ಯವಾಗುತ್ತದೆ.
Shivamogga: ಅಂಗನವಾಡಿ ನೌಕರರಿಗೆ ಸಂಬಳ ಕೊಡದ ಸರ್ಕಾರ?!
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವ ಮೂಲಕ ವಿವಿಧ ಸ್ಥರದ ಹುದ್ದೆಗಳನ್ನು ಅಲಂಕರಿಸುವ ಅವಕಾಶ ದೊರೆಯುತ್ತದೆ. ಆ ನಿಟ್ಟಿನಲ್ಲಿ ವಿಶೇಷ ಆಸಕ್ತಿ ವಹಿಸುವ ಅಗತ್ಯವಿದೆ ಎಂದರು. ತಳ ಸಮುದಾಯದ ಏಳಿಗೆಗೆ ಶ್ರಮಿಸಿದ ದೇವರಾಜ ಅರಸು, ಎಲ್.ಜಿ. ಹಾವನೂರು ಮುಂತಾದ ನಾಯಕರು ನಮಗೆ ಮಾರ್ಗದರ್ಶಿ ಆಗುತ್ತಾರೆ. ಡಾ.ಅಂಬೇಡ್ಕರ್ ನಮಗೆ ನೀಡಿದ ಸಂವಿಧಾನ ಎಲ್ಲ ಕಾಲಕ್ಕೂ ಸಲ್ಲುವಂತಹ ಮಹಾನ್ ಗ್ರಂಥವಾಗಿದೆ. ಇದನ್ನು ಅಧ್ಯಯನ ಮಾಡಬೇಕಾಗಿರುವುದು ಎಲ್ಲರ ಕರ್ತವ್ಯ ಎಂದರು. ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಟಿ. ಬಳಿಗಾರ ಮಾತನಾಡಿ, ನಾಗಮೋಹನದಾಸ್ ಅವರು ನೀಡಿದ ವರದಿ ಪರಿಶಿಷ್ಟಜಾತಿ, ವರ್ಗ ಎಂದಿಗೂ ಮರೆಯಲಾರದಂತಹ ಕೊಡುಗೆಯಾಗಿದೆ. ನಾಗಮೋಹನ್ ದಾಸ್ ಅವರು ಆಧುನಿಕ ಅಂಬೇಡ್ಕರ್ ಎಂದು ಪ್ರಶಂಶಿಸಿದರು.