MNREGA ಯೋಜನೆಯಡಿ ಬರೋಬ್ಬರಿ ₹93 ಲಕ್ಷ ನುಂಗಿದ ಸರಕಾರಿ ಅಧಿಕಾರಿಗಳು!

By Suvarna NewsFirst Published Jun 21, 2024, 3:02 PM IST
Highlights

 ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 2022-2023 ನೆಯ ಸಾಲಿನಲ್ಲಿ ಅರಣ್ಯ ಇಲಾಖೆಯ ನಿಯಮಗಳನ್ನು ಮೀರಿ ಹಣವನ್ನ ಸಂದಾಯ ಮಾಡಿದ್ದಾರೆ ಅನ್ನೋ ಆರೋಪ ಸದ್ಯ ಈಗ ಒಂಬಡ್ಸಮನ್ ವರದಿಯಿಂದ ಬೆಳಕಿಗೆ ಬಂದಿದೆ.

ಧಾರವಾಡ (ಜೂ.21) : ಸರಕಾರದ ಕೆಲಸ ದೇವರ ಕೆಲಸ ಅಂತಾರೆ ಆದರೆ ಇಲ್ಲಿ ಸರಕಾರಿ ಕೆಲಸವನ್ನ ಮಾಡಿವ ಅಧಿಕಾರಳೇ ಸರಕಾರದ ಹಣವನ್ನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 2022-2023 ನೆಯ ಸಾಲಿನಲ್ಲಿ ಅರಣ್ಯ ಇಲಾಖೆಯ ನಿಯಮಗಳನ್ನು ಮೀರಿ ಹಣವನ್ನ ಸಂದಾಯ ಮಾಡಿದ್ದಾರೆ ಅನ್ನೋ ಆರೋಪ ಸದ್ಯ ಈಗ ಒಂಬಡ್ಸಮನ್ ವರದಿಯಿಂದ ಬೆಳಕಿಗೆ ಬಂದಿದೆ.

ಆದರೆ 2024 ಪ್ರೆಬ್ರುವರಿ 7 ರಂದು ಒಂಬುಡ್ಸಮನ್ ಧಾರವಾಡ(Dharwad ombudsman) ಇವರು ತನಿಖೆ ಮಾಡಿ ಅರಣ್ಯ ಇಲಾಖೆ(forest department)ಯ 8 ಅಧಿಕಾರಿಗಳು ಉದ್ಯೋಗ ಖಾತ್ರಿ ಯೋಜನೆಯಡಿ(MNREGA Yojana)ಯಲ್ಲಿ ನಿಯಮಗಳನ್ನ ಗಾಳಿಗೆ ತೂರಿ 93 ಲಕ್ಷ ಹಣವನ್ನ ಲೂಟಿ ಮಾಡಿದ್ದಾರೆ ಎಂದು ಒಂಬಡ್ಸಮನ್ ವರದಿಯನ್ನ ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ಕೊಟ್ಟಿದ್ದಾರೆ..

Latest Videos

ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಧಾರವಾಡ ಮೂಲದ ಯೋಧ!

ಸದ್ಯ ಪೆಬ್ರವರಿ 7 2024 ರಂದು ವರದಿ ಸಲ್ಲಿಕೆಯಾದ್ರೂ ಭ್ರಷ್ಟ ಅಧಿಕಾರಿಗಳ ಮೇಲೆ‌ ಯಾವುದೇ ಕ್ರಮವನ್ನ ಕೈಗೊಂಡಿಲ್ಲ ಎಂದು ದೂರುದಾರ ಪರಿಸರವಾದಿ ಸುರೇಂದ್ರ ಉಗಾರೆ(Surendra ugare) ಅವರು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ದ ಮತ್ತು ಸಿಇಓ ಅವರ ಮೆಲೆ ಗಂಭಿರವಾದ ಆರೋಪವನ್ನ ಮಾಡುತ್ತಿದ್ದಾರೆ.

ಏನಿದು ಪ್ರಕರಣ : ಧಾರವಾಡ ಅರಣ್ಯ ಇಲಾಖೆ(Dharwad forest department)ಯ ಅಧಿಕಾರಿಗಳು ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸಾಮಗ್ರಿಗಳ ಖರೀದಿಯಲ್ಲಿ ನಿಯಮ ಮಿರಿ ಹಣ ಸಂದಾಯ ಮಾಡಿ ಕೆ ಟಿ ಪಿ ಪಿ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆಂದು ಒಟ್ಟು ಐದು ಪ್ರಕರಣಗಳಲ್ಲಿ ಒಂಬಡ್ಸಮನ್ ಜಿಲ್ಲಾ ಪಂಚಾಯತ ಧಾರವಾಡ ಇವರು ತಪ್ಪಿತಸ್ಥರೆಂದು 7.2.2024 ರಂದು ಆದೇಶ ಮಾಡಿ 8 ಅಧಿಕಾರಿಗಳು ಮೇಲೆ ನಿಯಮಬಾಹಿರವಾಗಿ ಗುತ್ತಿಗೆದಾರರಿಗೆ ಹಣ ಸಂದಾಯ ಮಾಡಿದ ಹಣವನ್ನು ವಸೂಲಿ ಮಾಡಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳ ಮೇಲೆ  ಶಿಸ್ತು ಕ್ರಮ ಆಗಬೇಕು ಎಂದು ಒಂಬಡ್ಸಮನ್ ಅವರು ವರದಿಯನ್ಮ ಹಿರಿಯ ಅಧಿಕಾರಿಗಳಿಗೆ ನೀಡಿದ್ದಾರೆ.

ಯಾವ ಯಾವ ಅಧಿಕಾರಿಗಳಿಂದ ಎಷ್ಟೆಷ್ಟು ಹಣ ವಸೂಲಿ ಮಾಡಬೇಕಾದ ವಿವಿರ : ವಿವೇಕ್ ಕವರಿ ಉಪ ಅರಣ್ಯ ಸಂರಕ್ಷಾಣಾಧಿಕಾರಿ 23,52,904 ರೂ, ಅಶೋಕ ಚೌಗುಲಾ ಸಹಾಯಕ ಅರಣ್ಯ ಸಂರಕ್ಷಕರು  ಸಾಮಾಜಿಕ ವಲಯ 15,85,113 ರೂ, ಕೆ ಡಿ ನಾಯಿಕ, ಸಹಾಯಕ ಸಂರಕ್ಷಕ ಸಾಮಾಜಿಕ ಅರಣ್ಯ ವಲಯ 7,62,791 ರೂ,ಶರರಣಬಸಪ್ಪ ಹೊಸಳ್ಳಿ, ವಲಯ ಅಧಿಕಾರಿ,ಸಾಮಾಜಿಕ ಅರಣ್ಯ 3,11,231ರೂ, ಶಿವಾನಂದ ಪೂಜಾರ,ಸಾಮಾಜಿಕ ವಲಯ 3,05156 ರೂ,ಸಂತೋಷ್ ಸೂರಿಮಠ, ಸಾಮಾಜಿಕ ವಲಯ 5,36053 ರೂ,ರಜಾಕಸಾಬ್ ನಧಾಪ್,ಸಾಮಾಜಿಕ ವಲಯ 4,32,673 ರೂ,ಈರೇಶ ಕಬ್ಬಿನ್ ಸಾಮಾಜಿಕ ವಲಯ 7,62,991 ರೂ,ಒಟ್ಟು 93 ಲಕ್ಷ ಹಣವನ್ನ ವಸೂಲಿ ಮಾಡಬೇಕಿರುವ ಜಿಲ್ಲಾ ಪಂಚಾಯತ ಸದ್ಯ ಈ 8 ಜನ ಅಧಿಕಾರಿಗಳ ವಿರುದ್ದ ಯಾವುದೆ ವಸೂಲಿ ಮಾಡದೆ ಶಿಸ್ತು ಕ್ರಮ ಕೈಗೊಳ್ಳದಿರಲು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

 

ಫೋಟೊಶೂಟ್, ರೀಲ್ಸ್‌ ಹುಚ್ಚಿಗೆ ಹೊಂಡದಲ್ಲಿ ಬಿದ್ದು ಪ್ರಾಣ ಕಳೆದುಕೊಂಡ ಬಾಲಕರು!

ಸದ್ಯ ಇಂತಹ ಅಧಿಕಾರಿಗಳ ವಿರುದ್ದ ಒಂಬಡ್ಸಮನ್ ಆದೇಶವನ್ನ ಸಿಇಓ ಅವರು ಅರಣ್ಯ ಇಲಾಖೆಯ ಪಿ ಸಿ ಸಿ ಎಪ್ ಅವರಿಗೆ ಪತ್ರ ಬರೆದು ಇಂತಹ ಅಧಿಕಾರಿಗಳ ಮೇಲೆ ಯಾವುದೆ ದೂರು ದಾಖಲು ಮಾಡಿಲ್ಲ ಜೊತೆಗೆ ಈ ಅಧಿಕಾರಿಗಳನ್ನ ಹಿರಿಯ ಅಧಿಕಾರಿಗಳು ರಕ್ಷಣೆ ಮಾಡುತ್ತಿದ್ದಾರೆ ಎಂದು ಪರಿಸರವಾದಿ ಮತ್ತು ವಕೀಲ ಸುರೇಂದ್ರ ಉಗಾರೆ ಅವರು ಆರೋಪವನ್ನ ಮಾಡುತ್ತಿದ್ದಾರೆ. ಇನ್ನು ಪ್ರಕರಣವನ್ನದ ವಿರುದ್ದ ಆ 8 ಜನ ಅಧಿಕಾರಿಗಳು ಮೇಲ್ಮನವಿ ಸಲ್ಲಿಸಿದ್ದಾರೆ. ಮೇಲ್ಮನವಿ ಬಗ್ಗೆ ವರದಿ ಬರೋವರೆಗೆ ಆ ಎಲ್ಲ ಅಧಿಕಾರಿಗಳನ್ನ ಅಮಾನತಿನಲ್ಲಿಡಬೇಕು ಎಂಬ ಆದೇಶ ವಿದ್ರು ಅವರನ್ನ ಅಮಾನತಿನಲ್ಲಿಟ್ಟಿಲ್ಲ ಸದ್ಯ ಪ್ರಕರಣದ ಅಕ್ರಮಗಳ ಬಗ್ಗೆ ಮಾಹಿತಿ ಇದ್ರು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ನಿಯಮ ಮೀರಿ ಹಣ ಸಂದಾಯ ಮಾಡಿದಕ್ಕೆ ಕೆ ಟಿ ಪಿ ಪಿ ಆ್ಯಕ್ಟ್ 1999 ರ ಪ್ರಕಾರ ಪ್ರಕರಣವನ್ನ ದಾಖಲು ಮಾಡಬೇಕು ಪ್ರಕರಣವನ್ನ ಗಂಭಿರವಾಗಿ ಪರಿಗಣಿಸಿ ಈ 8 ಜನ ಅರಣ್ಯ ಇಲಾಖೆಯ ಅಧಿಕಾರಿಗಳನ್ನ ಅಮಾನತು ಮಾಡಬೇಕು ಎಂದು ಸುರೇಂದ್ರ ಉಗಾರೆ ಅವರು ಸಂಭಂದಪಟ್ಟ ಇಲಾಖೆಯ ಅಧಿಕಾರಿಗಳಿಗೆ ವಿನಂತಿ ಮಾಡಿಕೊಂಡಿದ್ದಾರೆ.

click me!