ರೇಣುಕಾಸ್ವಾಮಿ ಮೊಬೈಲ್‌ ಪತ್ತೆಗೆ ಪೌರ ಕಾರ್ಮಿಕರ ಬಳಕೆ: ನೋಟಿಸ್‌

By Kannadaprabha NewsFirst Published Jun 21, 2024, 12:15 PM IST
Highlights

ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾ ಸ್ವಾಮಿಗೆ ವಿದ್ಯುತ್ ಶಾಕ್ ನೀಡಲು ಎಲೆಕ್ನಿಕ್ ಚಾರ್ಜ ಟಾರ್ಚ್ ಅನ್ನು ಎಲ್ಲಿ ಆರೋಪಿ ಧನರಾಜ್ ಅಲಿಯಾಸ್ ರಾಜು ಖರೀದಿಸಿದ್ದ ಎಂಬ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಡಿವೈಸ್ ರಾಜು ಬಳಿ ಪತ್ತೆಯಾಗಿದೆ.

ಬೆಂಗಳೂರು(ಜೂ.21):  ಕೊಲೆಯಾದ ರೇಣುಕಾಸ್ವಾಮಿ ಮೊಬೈಲ್‌ಫೋನ್ ಪತ್ತೆ ಮಾಡಲು ರಾಜಕಾಲುವೆಗೆ ಬಿಬಿಎಂಪಿ ಪೌರ ಕಾರ್ಮಿಕರನ್ನಿಳಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸಮಾಜ ಕಲ್ಯಾಣ ಇಲಾಖೆ ನೋಟಿಸ್ ಜಾರಿ ಮಾಡಿದೆ. 

ಪ್ರಕರಣದಲ್ಲಿ ಮೊಬೈಲ್‌ ಫೋನ್ ಹುಡುಕಲು ಪೌರಕಾರ್ಮಿಕರನ್ನು ಬಳಸಿರುವ ಬಗ್ಗೆ ಕನ್ನಡಪ್ರಭ ವರದಿ ಮಾಡಿತ್ತು. ಈ ಕಾರ್ಯಾಚರಣೆ ನಿಯಮಗಳ ಉಲ್ಲಂಘನೆಯಾಗಿದೆ. ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗಕ್ಕೆ ದೂರು ನೀಡಿತ್ತು. ಅದರಂತೆ ತುರ್ತು ನೋಟಿಸ್ ಜಾರಿ ಮಾಡಿದ್ದಾರೆ.

Latest Videos

ದರ್ಶನ್‌ ಕ್ರೌರ್ಯದ ಬಗ್ಗೆ ಸಿಎಂ ಟೀಕೆ ಬರೀ ವದಂತಿ: ಸಂಪುಟ ಸಭೆಯಲ್ಲಿ ರೇಣುಕಾಸ್ವಾಮಿ ಕೊಲೆ ವಿಚಾರ ಚರ್ಚೆಯಾಗಿಲ್ಲ..!

ಶಾಕ್ ಡಿವೈಸ್‌ ಖರೀದಿಸಿದ್ದು ಎಲ್ಲಿ?: 

click me!