ರಾಹುಲ್ ಗಾಂಧಿ ಆಪ್ತನಿಂದ ಕರ್ನಾಟಕ ಗ್ಯಾರೆಂಟಿ ಅಸಲಿಯತ್ತು ಬಯಲು, ಖಾಸಗಿ ಕಂಪನಿಗೆ ಹೊಣೆ!

Published : Jun 21, 2024, 02:41 PM IST
ರಾಹುಲ್ ಗಾಂಧಿ ಆಪ್ತನಿಂದ ಕರ್ನಾಟಕ ಗ್ಯಾರೆಂಟಿ ಅಸಲಿಯತ್ತು ಬಯಲು,  ಖಾಸಗಿ ಕಂಪನಿಗೆ ಹೊಣೆ!

ಸಾರಾಂಶ

ಉಚಿತ ಗ್ಯಾರೆಂಟಿಯಿಂದ ಕರ್ನಾಟಕ ಖಜಾನೆ ಖಾಲಿಯಾಗಿದೆ. ಬೆಲೆ ಏರಿಕೆ ಮಾಡಿದರೂ ವಾರ್ಷಿಕವಾಗಿ 1 ಲಕ್ಷ ಕೋಟಿ ರೂಪಾಯಿ ಹೊಂದಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಖಾಸಿಗಿ ಕಂಪನಿಗೆ ಆದಾಯದ ಮೂಲ ಹುಡಿಕೊಡಲು 10 ಕೋಟಿ ರೂಪಾಯಿಗೆ ಗುತ್ತಿಗೆ ನೀಡಿದೆ. ಇದು ರಾಹುಲ್ ಗಾಂಧಿ ಆಪ್ತ ಪ್ರವೀಣ್ ಚಕ್ರವರ್ತಿ ಬಿಚ್ಚಿಟ್ಟ ಸ್ಫೋಟಕ ಮಾಹಿತಿ ಇಲ್ಲಿದೆ.

ಬೆಂಗಳೂರು(ಜೂ.21)ಕರ್ನಾಟಕದ ಆರ್ಥಿಕವಾಗಿ ದಿವಾಳಿಯಾಗುತ್ತಿದೆಯಾ? ರಾಹುಲ್ ಗಾಂಧಿ ಆಪ್ತ ಸಲಹೆಗಾರ ಪ್ರವೀಣ್ ಚಕ್ರವರ್ತಿ ಇದೀಗ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮಾಡಿರುವ ಎಡವಟ್ಟುಗಳನ್ನು ಬಿಚ್ಚಿಟ್ಟಿದ್ದಾರೆ. ಪೆಟ್ರೋಲ್, ಮುದ್ರಾಂಕ, ನೋಂದಣಿ ಶುಲ್ಕ ಸೇರಿದಂತೆ ಹಲವು ಏರಿಕೆ ಬಳಿಕ ಬೇರೆ ದಾರಿ ಕಾಣದ ಸರ್ಕಾರ ಇದೀಗ ಖಾಸಗಿ ಕಂಪನಿಗೆ 10 ಕೋಟಿ ರೂಪಾಯಿಗೆ ಗುತ್ತಿಗೆ ನೀಡಿದೆ. ಈ ಕಂಪನಿ ಇದೀಗ ಆದಾಯ ಕ್ರೋಢೀಕರಿಸಲು ಸಿದ್ದರಾಮಯ್ಯ ಸರ್ಕಾರಕ್ಕೆ ಮಾರ್ಗಗಳನ್ನು ಸೂಚಿಸಲಿದೆ. 

ಕಾಂಗ್ರೆಸ್ ಅಧಿಕಾರಕ್ಕೇರಲು ಕರ್ನಾಟಕದಲ್ಲಿ 5 ಉಚಿತ ಗ್ಯಾರೆಂಟಿ ಭರವಸೆ ನೀಡಿತ್ತು. ಇದರಂತೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇದೀಗ 5 ಉಚಿತ ಗ್ಯಾರೆಂಟಿಯಿಂದ ಹೈರಾಣಾಗಿದೆ. ಕೇವಲ ಗ್ಯಾರೆಂಟಿಗಾಗಿ ವಾರ್ಷಿಕ 50 ರಿಂದ 60 ಸಾವಿರ ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. ಸರ್ಕಾರದ ಇತರ ವೆಚ್ಚ, ವೇತನ ಸೇರಿದಂತೆ ಇತರ ಖರ್ಚು ವೆಚ್ಚಗಳಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕವಾಗಿ 1 ಲಕ್ಷ ಕೋಟಿ ರೂಪಾಯಿ ಕ್ರೋಢಿಕರಿಸಬೇಕಾಗಿದೆ. ಆದರೆ ರಾಜ್ಯದ ಆದಾಯ ಈ ಮಟ್ಟಕ್ಕಿಲ್ಲ. ಇದಕ್ಕಾಗಿ ಸಿದ್ದರಾಮಯ್ಯ ಸರ್ಕಾರ ಖಾಸಗಿ ಬೋಸ್ಟನ್ ಕನ್ಸಲ್ಟೆಂಗ್ ಗ್ರೂಪ್ ಕಂಪನಿಯ ಮೊರೆ ಹೋಗಿದೆ.

ಕಾಂಗ್ರೆಸ್ ಪಾಳಯದಲ್ಲೇ ಗ್ಯಾರಂಟಿ ವಿರುದ್ಧ ಅಪಸ್ವರ: ಯೋಜನೆಗಳಿಗೆ ಷರತ್ತು ಹಾಕಿ ಎಂದು ಶಾಸಕರ ಪಟ್ಟು!

ಈಗಾಗಲೇ ಸಿದ್ದರಾಮಯ್ಯ ಸರ್ಕಾರ ಗ್ಯಾರೆಂಟಿ ವಿತರಣೆಗೆ ಹಣ ಹೊಂದಿಸಲು ಬೆಲೆ ಏರಿಕೆ ಮಾಡಿದೆ.  ಪೆಟ್ರೋಲ್ ಡೀಸೆಲ್ ಬೆಲೆ 3 ರೂಪಾಯಿ. ಮುದ್ರಾಂಕ ಶುಲ್ಕಾ ಶೇಕಡಾ 500ರಷ್ಟು ಏರಿಕೆ, ಹೊಸ ವಾಹನ ಖರೀದಿಗೆ ಹೆಚ್ಚುವರಿ ತೆರಿಗೆ ಮಾಡಲಾಗಿದೆ. ಇನ್ನು ನೀರಿನ ದರ ಏರಿಕೆ ಹಾಗೂ ಆಸ್ತಿ ತೆರಿಗೆ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಯತ್ನದ ಹೊರತಾಗಿಯೂ ಸಿದ್ದರಾಮಯ್ಯ ಸರ್ಕಾರ ಹಣದ ಕೊರತೆ ಅನುಭವಿಸುತ್ತಿದೆ. ಹೀಗಾಗಿ ಬೋಸ್ಟನ್ ಕನ್ಸೆಲ್ಟಿಂಗ್ ಗ್ರೂಪ್(BCG) ಕಂಪನಿಗೆ ಗುತ್ತಿಗೆ ನೀಡಿದೆ ಎಂದು ಪ್ರವೀಣ್ ಚಕ್ರವರ್ತಿ ಹೇಳಿದ್ದಾರೆ.

ರಾಹುಲ್ ಗಾಂಧಿ ಆಪ್ತ ಸಲಹೆಗಾರರಿಗಾರುವ ಪ್ರವೀಣ್ ಚಕ್ರವರ್ತಿ ಇದೀಗ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ನಡೆಗೆ ಅಸಮಾಧಾನಗೊಂಡಿದ್ದಾರೆ. ಒಂದು ರಾಜ್ಯ ಸರಿಯಾದ ಮಾರ್ಗದಲಿಲ್ಲ ಅನ್ನೋದನ್ನು ಒತ್ತಿ ಹೇಳಿದ್ದಾರೆ. ಬೋಸ್ಟನ್ ಕನ್ಸೆಲ್ಟಿಂಗ್ ಗ್ರೂಪ್ ಕಂಪನಿ ಸಿದ್ದರಾಮಯ್ಯ ಸರ್ಕಾರ ಆದಾಯ ಕ್ರೋಢಿಕರಣಕ್ಕೆ ಮಾರ್ಗಗಳನ್ನು ಹುಡಿಕೊಡಲಿದೆ. ಇದೇ ವೇಳೆ ರಾಜ್ಯದ ಖರ್ಚು ವೆಚ್ಚ ಕಡಿಮೆ ಮಾಡಿ, ಆದಾಯ ಹೆಚ್ಚಿಸಲು ಮೂಲಗಳನ್ನು ಹುಡುಕಿಕೊಡಲಿದೆ. ಪಬ್ಲಿಕ್-ಪ್ರವೈಟ್ ಪಾರ್ಟ್ನರ್‌ಶಿಪಿ(ಪಿಪಿಪಿ ಮಾಡೆಲ್), ಸೋರಿಕೆ ತಡೆಗಟ್ಟುವಿಕೆ, ಆಸ್ತಿಗಳಿಂದ ಆದಾಯ ಕ್ರೋಢಿಕರಣ, ವಿವಿಧ ಇಲಾಖೆಗಳಲ್ಲಿ ಆದಾಯ ಹೆಚ್ಚಳಕ್ಕೆ ಮಾರ್ಗ, ಮೈನಿಂಗ್, ಅರಣ್ಯ ಸೇರಿದಂತೆ ಹಲವು ಮೂಲಗಳಿಂದ ಆದಾಯ ಹೆಚ್ಚಿಸುವ ಮಾರ್ಗಗಳನ್ನು ಪತ್ತೆ ಹಚ್ಚುವ ಜವಾಬ್ದಾರಿಯನ್ನು ಬಿಸಿಜಿ ಹೊತ್ತುಕೊಂಡಿದೆ. ಹಾಗಾಂತ ಈ ಕಂಪನಿ ಸುಮ್ಮನೆ ಈ ಹೊಣೆ ಹೊತ್ತುಕೊಂಡಿಲ್ಲ. ಸಿದ್ದರಾಮಯ್ಯ ಸರ್ಕಾರ ಕಳೆದ 6 ತಿಂಗಳಲ್ಲಿ ಬೋಸ್ಟನ್ ಗ್ರೂಪ್ ಕಂಪನಿಗೆ ಬರೋಬ್ಬರಿ 9.5 ಕೋಟಿ ರೂಪಾಯಿ ಪಾವತಿಸಿದೆ ಎಂದು ಪ್ರವೀಣ್ ಚಕ್ರವರ್ತಿ ಹೇಳಿದ್ದಾರೆ.  

 

 

ಗ್ಯಾರಂಟಿಗಾಗಿ ಅಲ್ಲ, ರಾಜ್ಯದ ಅಭಿವೃದ್ಧಿಗಾಗಿ ತೈಲ ಬೆಲೆ ಏರಿಕೆ: ಸಿಎಂ ‌ಸಿದ್ದರಾಮಯ್ಯ
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: 24,300 ಹುದ್ದೆ ಭರ್ತಿಗೆ ಅಂಕಿತ! ಇಲಾಖಾವಾರು ಮಾಹಿತಿ ಇಲ್ಲಿದೆ!
ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!