ಸಿಎಂ-ಡಿಸಿಎಂ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಇದ್ದಂತೆ: ವಚನಾನಂದ ಶ್ರೀ

By Ravi Janekal  |  First Published Jun 30, 2024, 12:42 PM IST

'ರಾಜ್ಯದಲ್ಲಿ ಸಿಎಂ ಬದಲಾವಣಗೆ ವಿಚಾರ ಅಪ್ರಸ್ತುತ' ಎನ್ನುವ ಮೂಲಕ 'ಡಿಕೆ ಶಿವಕುಮಾರಗೆ ಸಿಎಂ ಸ್ಥಾನ ನೀಡಬೇಕೆಂಬ ಚಂದ್ರಶೇಖರ್ ಶ್ರೀ ಹೇಳಿಕೆಗೆ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ ಟಾಂಗ್ ನೀಡಿದರು.


ಚಿತ್ರದುರ್ಗ (ಜೂ.30): 'ರಾಜ್ಯದಲ್ಲಿ ಸಿಎಂ ಬದಲಾವಣಗೆ ವಿಚಾರ ಅಪ್ರಸ್ತುತ' ಎನ್ನುವ ಮೂಲಕ 'ಡಿಕೆ ಶಿವಕುಮಾರಗೆ ಸಿಎಂ ಸ್ಥಾನ ನೀಡಬೇಕೆಂಬ ಚಂದ್ರಶೇಖರ್ ಶ್ರೀ ಹೇಳಿಕೆಗೆ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ ಟಾಂಗ್ ನೀಡಿದರು.

ಇಂದು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ಸಿಎಂ ಸಿದ್ದರಾಮಯ್ಯ(CM Siddaramaiah), ಡಿಸಿಎಂ ಡಿಕೆ ಶಿವಕುಮಾರ(DCM DK Shivakumar) ನಡುವೆ ಉತ್ತಮ ಹೊಂದಾಣಿಕೆ ಇದೆ. ಹೀಗಿರುವಾಗ ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವೇ ಅಪ್ರಸ್ತುತ. ಒಂದು ವೇಳೆ ಸಿಎಂ ಬದಲಾವಣೆ ಮಾಡಬೇಕೆಂದರೆ ಅಥವಾ ಅದರ ಬಗ್ಗೆ ಚಿಂತನೆ ಮಾಡಬೇಕಿರುವುದು ಹೈಕಮಾಂಡ್. ಬಾರದು ಬಪ್ಪದು, ಬಪ್ಪದು ತಪ್ಪದು ಎಂಬ ವಚನವಾಣಿಯಂತೆ ನಡೆಯಲಿದೆ ಎಂದರು.

Latest Videos

undefined

 

'ಯತ್ನಾಳ್ ಎಂದರೆ ಕಾಮಿಡಿ ಮುತ್ಯಾ, ಹುಚ್ಚು ಮುತ್ಯಾ, ಪಾಗಲ್ ಮುತ್ಯಾ..' ವಚನಾನಂದಶ್ರೀ ವ್ಯಂಗ್ಯ

ಸ್ವಾಮೀಜಿಗಳು ಹೇಳಿದ ತಕ್ಷಣ ಸಿಎಂ ಬದಲಾವಣೆ ಆಗದಿರುವ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಸ್ವಾಮೀಜಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿ ಟಿ 20 ವಿಶ್ವಕಪ್ ಗೆಲುವು ಆಗಿದೆ. ಕರ್ನಾಟಕಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ ವಿರಾಟ್ ಕೊಹ್ಲಿ-ಶರ್ಮಾ ಜೋಡಿ ಇದ್ದಂತೆ. ಪಕ್ಷ ಗೆಲ್ಲುವಲ್ಲಿ ಇಬ್ಬರ ಶ್ರಮವಿದೆ. ತತ್ವ ಸಿದ್ಧಾಂತದ ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯ ಇದೆ.

ಚುನಾವಣೆಗೆ ಡಿಕೆಶಿ ಹಣ ಖರ್ಚು ಮಾಡಿದ್ದಾರೆ, ಒಮ್ಮೆ ಮುಖ್ಯಮಂತ್ರಿ ಆಗಲಿ: ಚಂದ್ರಶೇಖರ ಸ್ವಾಮೀಜಿ

ಹಿಂದೆ ಅನೇಕ ಲಿಂಗಾಯತರು ಮುಖ್ಯಮಂತ್ರಿ ಆಗಿದ್ದಾರೆ. ಈಗ ಸಿದ್ದರಾಮಯ್ಯ ಸಿಎಂ, ಮುಂಬರುವ ದಿನಗಳಲ್ಲಿ ಡಿಕೆ ಶಿವಕುಮಾರಗೆ ಸಹ ಅವಕಾಶ ಸಿಗಲಿದೆ. ಅದೇ ರೀತಿ ಪರಮೇಶ್ವರ್, ಸತೀಶ್ ಜಾರಕಿಹೊಳಿ ಇದ್ದಾರೆ ಎಂದರು. ಮುಂದುವರಿದು, ಇಂದು ದಲಿತ ಸಿಎಂ ಎಂಬ ಮಾತುಗಳನ್ನು ನಾವು ಕೇಳುತ್ತಿದ್ದೇವೆ. ಎಸ್ಸಿ, ಎಸ್ಟಿ ಸಮುದಾಯಕ್ಕೂ ಪ್ರಾತಿನಿಧ್ಯ ಕೊಡಬೇಕಾಗುತ್ತದೆ. ಸಮಯ ಬಂದಾಗ ಲಿಂಗಾಯತರು ಸಿಎಂ ಆಗುವ ಯೋಗ ಬಂದೇ ಬರುತ್ತದೆ ಎಂದ ಶ್ರೀಗಳು ಭರವಸೆ ವ್ಯಕ್ತಪಡಿಸಿದರು.

click me!