ಬೆಂಗ್ಳೂರಲ್ಲಿ ಡೆಂಘೀ ಅಬ್ಬರ ಹೆಚ್ಚಳ: 8 ದಿನದಲ್ಲೇ 697 ಕೇಸ್‌

By Kannadaprabha NewsFirst Published Jun 30, 2024, 12:31 PM IST
Highlights

ಬೆಂಗಳೂರಿನಲ್ಲಿ ಮಳೆ ಮತ್ತು ಬಿಸಿಲ ವಾತಾವರಣ ಎರಡೂ ಇರುವುದರಿಂದ ಡೆಂಘೀ ಹರಡುವ ಸೊಳ್ಳೆಗಳ ಉತ್ಪತ್ತಿಗೆ ಅನುಕೂಲ ಪರಿಸರ ಸೃಷ್ಟಿಯಾಗಿದೆ. ಇದರ ಪರಿಣಾಮ ನಗರದಲ್ಲಿ ಡೆಂಘೀ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿದೆ. ಕಳೆದ ಜೂ.20ರಂದು ನಗರದಲ್ಲಿ 1,046 ಪ್ರಕರಣ ಮಾತ್ರ ಇದ್ದವು. ಕೇವಲ ಎಂಟು ದಿನದಲ್ಲಿ (ಜೂ.28) ಈ ಸಂಖ್ಯೆ 1,743ಕ್ಕೆ ಏರಿಕೆಯಾಗಿದೆ. ಪ್ರತಿ ದಿನ ನಗರದಲ್ಲಿ ಸರಾಸರಿ ನೂರು ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ.

ಬೆಂಗಳೂರು(ಜೂ.30):  ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಡೆಂಘೀ ಅಬ್ಬರ ಹೆಚ್ಚಾಗುತ್ತಿದ್ದು, ಕೇವಲ ಎಂಟು ದಿನದಲ್ಲಿ ಬರೋಬ್ಬರಿ 697 ಡೆಂಘೀ ಪ್ರಕರಣ ಕಾಣಿಸಿಕೊಂಡಿರುವುದು ಆತಂಕ ಹೆಚ್ಚಿಸಿದೆ.

ಬೆಂಗಳೂರಿನಲ್ಲಿ ಮಳೆ ಮತ್ತು ಬಿಸಿಲ ವಾತಾವರಣ ಎರಡೂ ಇರುವುದರಿಂದ ಡೆಂಘೀ ಹರಡುವ ಸೊಳ್ಳೆಗಳ ಉತ್ಪತ್ತಿಗೆ ಅನುಕೂಲ ಪರಿಸರ ಸೃಷ್ಟಿಯಾಗಿದೆ. ಇದರ ಪರಿಣಾಮ ನಗರದಲ್ಲಿ ಡೆಂಘೀ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿದೆ. ಕಳೆದ ಜೂ.20ರಂದು ನಗರದಲ್ಲಿ 1,046 ಪ್ರಕರಣ ಮಾತ್ರ ಇದ್ದವು. ಕೇವಲ ಎಂಟು ದಿನದಲ್ಲಿ (ಜೂ.28) ಈ ಸಂಖ್ಯೆ 1,743ಕ್ಕೆ ಏರಿಕೆಯಾಗಿದೆ. ಪ್ರತಿ ದಿನ ನಗರದಲ್ಲಿ ಸರಾಸರಿ ನೂರು ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ.

ಬೆಂಗಳೂರಿನಲ್ಲಿ ಡೆಂಘೀಗೆ ಇಬ್ಬರು ಬಲಿ..!

43 ಸಾವಿರ ಮನೆ ಸರ್ವೆ:

ಡೆಂಘೀ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ಮನೆ ಮನೆ ಸರ್ವೇ ನಡೆಸಲು ಸೂಚನೆ ನೀಡಲಾಗಿದ್ದು, ಶುಕ್ರವಾರ ಮತ್ತು ಶನಿವಾರ ಎರಡು ದಿನ ಆರೋಗ್ಯ ವಿಭಾಗದ ಸಿಬ್ಬಂದಿ ನಗರದ 44 ಸಾವಿರ ಮನೆಗಳಿಗೆ ಭೇಟಿ ನೀಡಿ ಡೆಂಘೀ ಬಗ್ಗೆ ಜಾಗೃತಿ ಮೂಡಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಡೆಂಘೀ ಪ್ರಕರಣಗಳ ವಿವರ

ವಲಯ ಜೂ.20 ಜೂ.28 ಹೆಚ್ಚಳ
ಬೊಮ್ಮನಹಳ್ಳಿ 113 163 50
ದಾಸರಹಳ್ಳಿ 6 8 2
ಪೂರ್ವ 236 450 213
ಮಹದೇವಪುರ 328 482 154
ಆರ್.ಆರ್ ನಗರ 83 122 39
ದಕ್ಷಿಣ 113 259 146
ಪಶ್ಚಿಮ 77 145 68
ಯಲಹಂಕ 90 114 24
ಒಟ್ಟು 1046 1743 697

click me!