ದರ್ಶನ್‌ ಕೇಸ್ ತನಿಖೆ ಅರೇಬಿಯನ್ ನೈಟ್ಸ್ ಕತೆಯಂತಿದೆ: ವಕೀಲ ಸಿ.ವಿ.ನಾಗೇಶ್ ವಾದ!

By Kannadaprabha NewsFirst Published Oct 6, 2024, 6:48 AM IST
Highlights

ರೆಸ್ಟೋರೆಂಟ್‌ನಲ್ಲಿ ಊಟಕ್ಕೆ ಸೇರಿದರೆ ಸಂಚು ಎಂದು ಭಾವಿಸಿಬಹುದೆ? ಶೆಡ್‌ಗೆ ಹೋಗುವಾಗ ದರ್ಶನ್ ಚಪ್ಪಲಿ ಧರಿಸಿದ್ದಾಗಿ ಹೇಳಿಕೆಯಲ್ಲಿ ಇದೆ. ಆದರೆ, ಪೊಲೀಸರು ದರ್ಶನ್ ಅವರ ಶೂ ವಶಕ್ಕೆ ಪಡೆದಿದ್ದಾರೆ. 

ಬೆಂಗಳೂರು (ಅ.06): ರೆಸ್ಟೋರೆಂಟ್‌ನಲ್ಲಿ ಊಟಕ್ಕೆ ಸೇರಿದರೆ ಸಂಚು ಎಂದು ಭಾವಿಸಿಬಹುದೆ? ಶೆಡ್‌ಗೆ ಹೋಗುವಾಗ ದರ್ಶನ್ ಚಪ್ಪಲಿ ಧರಿಸಿದ್ದಾಗಿ ಹೇಳಿಕೆಯಲ್ಲಿ ಇದೆ. ಆದರೆ, ಪೊಲೀಸರು ದರ್ಶನ್ ಅವರ ಶೂ ವಶಕ್ಕೆ ಪಡೆದಿದ್ದಾರೆ. ದರ್ಶನ್ ಸಾಕ್ಷಿಗಳಿಗೆ ಕೊಡಲೆಂದೇ ಹಣ ಸಂಗ್ರಹಿಸಿಟ್ಟಿದ್ದರು ಎನ್ನಲು ಹೇಗೆ ಸಾಧ್ಯ? ಪೊಲೀಸರ ತನಿಖಾ ವರದಿ ಮಲಗುವಾಗ ಓದಬಹುದಾದ ಅರೇಬಿಯನ್ ನೈಟ್ಸ್ ಕಥೆಯಂತಿದೆ. 

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಪರ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ 57ನೇ ಸಿಸಿಎಚ್ ನ್ಯಾಯಾ ಲಯದ ಎದುರು ಮಂಡಿಸಿದ ಸುದೀರ್ಘ ವಾದದ ಅಂಶಗಳಿವು. ದರ್ಶನ್‌ಗೆ ಯಾಕಾಗಿ ಜಾಮೀನು ಕೊಡಬೇಕು ಎಂದು ವಾದ ಮುಂದುವರಿಸುವುದರ ಜೊತೆಗೆ ದೋಷಾ ರೋಪ ಪಟ್ಟಿಯಲ್ಲಿ ನ್ಯೂನ್ಯತೆಗಳಿವೆ ಎಂದು ಪ್ರಬಲ ವಾದ ಮಂಡಿಸಿದರು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ ಪ್ರಸನ್ನ ಕುಮಾರ್‌ ವಾದ ಮಂಡಿಸಲು ಸಮಯ ಕೋರಿದರು. ನ್ಯಾಯಾಲಯವು ಅರ್ಜಿ ವಿಚಾರಣೆ ಯನ್ನು ಆ.8ಕ್ಕೆ ಮುಂದೂಡಿದೆ. 

Latest Videos

ಸರ್ಫಲ್ಲಿ ಒಗೆದ ಬಟ್ಟೆಯಲ್ಲಿ ಸಾಕ್ಷ್ಯ ಸಿಕ್ಕಿದ್ದು ಹೇಗೆ: ದರ್ಶನ್ ಸಿಕ್ಕಿಸಲು ಕಲ್ಪಿತ ಕತೆ ಕಟ್ಟಲಾಗಿದೆ ಎಂದ ವಕೀಲ

ನಾಗೇಶ್ ವಾದ: 2ನೇ ದಿನ ತಮ್ಮ ವಾದ ಮುಂದುವರಿಸಿದ ನಾಗೇಶ್, ರೇಣುಕಾಸ್ವಾಮಿ ಮೃತದೇಹ ಜೂ.9ರಂದು ಪತ್ತೆ ಆಗಿದ್ದಾಗಿ ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ನೀಡಿರುವ ದೂರಿನಲ್ಲಿದೆ. ಆದರೆ, ಪೊಲೀಸರು ಜೂ.11ರಂದು ಮಧ್ಯಾಹ್ನ 2.45ರ ಸುಮಾರಿಗೆ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ.  ಹೀಗೇಕೆ ಮಾಡಿದರು ಎಂಬುದೂ ಮಿಲಿಯನ್ ಡಾಲರ್‌ಪ್ರಶ್ನೆ. ಮೃತನ ವಿವರ ಲಭ್ಯವಾಗದ ಕಾರಣ ಮರಣೋತ್ತರ ಪರೀಕ್ಷೆವಿಳಂಬವಾಗಿದೆ ಎಂದು ಪೊಲೀಸರು ಕಾರಣ ನೀಡಿದ್ದಾರೆ. ಆದರೆ, ಯಾವುದೇ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಲು ಮೃತನ ವಿವರ ಲಭ್ಯವಿರ ಬೇಕು ಎಂದಿಲ್ಲವೆಂದು ಕಾನೂನು ಸ್ಪಷ್ಟವಾಗಿ ಹೇಳಿದೆ. 

ಹಾಗಾದರೆ ಪೊಲೀಸರು ಮೃತ ದೇಹದ ಮರಣೋತ್ತರ ಪರೀಕ್ಷೆ ಮಾಡಿಸಲು ಮಾಡಿರುವುದೇಕೆ ಎಂದು ವಿಳಂಬ ವಾದಿಸಿದರು. ಜೂ.18ರಂದು ದರ್ಶನ್ ಮನೆಯಲ್ಲಿ ಕೆ37.5 ಲಕ್ಷ ಹಣವನ್ನ ಜಪ್ತಿ ಮಾಡಿರುವ ಪೊಲೀಸರು, ಪ್ರಕರಣದ ಇತರೆ ಆರೋಪಿಗಳಿಗೆ ನೀಡಲು ಹಣ ಸಂಗ್ರಹಿಸಿಟ್ಟಿದ್ದಾಗಿ ಹೇಳಿಕೆ ಪಡೆದಿರುವುದಾಗಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ಮೋಹನ್ ರಾಜ್ ಎಂಬುವರು ತಮ್ಮ ಪುತ್ರಿಯ ಆಲ್ಬಂ ಸಾಂಗ್ ಮಾಡಿಸಲು ದರ್ಶನ್ ಅವರಿಂದ ಫೆಬ್ರವರಿ ಯಲ್ಲಿ ಹಣ ಪಡೆದಿದ್ದರು. ಆ ಸಾಲದ ಹಣ ಮೇ 2ರಂದೇ ವಾಪಸ್ ನೀಡಿದ್ದಾಗಿ ಮೋಹನ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಹೀಗಿದ್ದಾಗ ರೇಣುಕಾಸ್ವಾಮಿ ಕೊಲೆ ಬಳಿಕ ದರ್ಶನ್ ಹಣ ಸಂಗ್ರಹಿಸಿದ್ದರೆಂದು ಹೇಳು ವುದು ಹೇಗೆ? ಎಂದು ನಾಗೇಶ್ ಶಂಕಿಸಿದರು. 

ಜೂ.18 ಹಾಗೂ 19ರಂದು ಎರಡೆರಡು ಸ್ವಇಚ್ಛಾ ಹೇಳಿಕೆ ಪಡೆದುಕೊಳ್ಳಲಾಗಿದೆ. ಆದರೆ ಎರಡೂ ಸ್ವಣಚ್ಛಾ ಹೇಳಿಕೆಗಳಲ್ಲಿ ಕೆಲ ಅಂಶಗಳು ವ್ಯತಿರಿಕ್ತವಾಗಿವೆ. ಪೊಲೀಸರಿಗೆ ಮಿಡ್ ನೈಟ್ ಹೇಳಿಕೆ ದಾಖಲಿಸುವ ಅಭ್ಯಾಸವಿದೆ. ಇವು ಮಲಗುವಾಗ ಓದಬಹುದಾದ ಅರೇಬಿಯನ್ ನೈಟ್ಸ್' ಕಥೆಯ ರೀತಿಯಿದೆ. ಸಾಕ್ಷಿದಾರರಾಗಿ ನಟ ಚಿಕ್ಕಣ್ಣ, ನವೀನ್ ಅವರು ಪೊಲೀಸರ ಮುಂದಿನ ಹೇಳಿಕೆ ಹಾಗೂ ನ್ಯಾಯಾಲಯದ ಮುಂದಿನ ಹೇಳಿಕೆಗಳು ವ್ಯತಿರಿಕ್ತವಾಗಿವೆ ಎಂದು ದರ್ಶನ್ ಪರ ವಕೀಲರು ವಾದ ಮಂಡಿಸಿದರು.  ಮಹಜರು ಹಾಗೂ ಆರೋಪಿಗಳ ಹೇಳಿಕೆಗಳಲ್ಲಿ ವ್ಯತ್ಯಾಸಗಳಿವೆ. ಘಟನಾ ಸ್ಥಳದಲ್ಲಿದ್ದ ಮಣ್ಣನ್ನು ಸಂಗ್ರಹಿಸಲಾಗಿದೆ. ಅದನ್ನು ಎಫ್ ಎಸ್‌ಎಲ್‌ಗೆ ಕಳುಹಿಸಿದಾಗ ಅದರಲ್ಲಿ ರಕ್ತದ ಕಲೆ ಇದೆ ಎಂದಿದೆ. 

ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್: ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದ ವೈದ್ಯರು

ಪಂಚನಾಮದಲ್ಲಿ ಇಲ್ಲದ್ದು ಎಫ್‌ಎಸ್‌ಎಲ್ ವರದಿಯಲ್ಲಿ ಹೇಗೆ ಬಂತು? ಇದೆಲ್ಲವೂ ಪೊಲೀಸರುಸಾಕ್ಷಿತಿರುಚಿರುವುದನ್ನು ತೋರಿಸುತ್ತದೆ ಎಂದರು. ದರ್ಶನ್ ಚಪ್ಪಲಿಯೇ ಶೂ ಆಗಿರುವಾಗ ಇದರಲ್ಲೇನೂ ವಿಶೇಷವಿಲ್ಲ ಎಂದು ವ್ಯಂಗ್ಯವಾ ಡಿದ ವಕೀಲರು, 'ಶೆಡ್‌ಗೆ ಹೋಗುವಾಗ ದರ್ಶನ್ ಚಪ್ಪಲಿ ಧರಿಸಿದ್ದಾಗಿ ಹೇಳಿಕೆಯಲ್ಲಿ ಇತ್ತು. ಆದರೆ, ಪೊಲೀಸರು ಮನೆಗೆ ಹೋಗಿ ದರ್ಶನ್ ಅವರ ಶೂ ವಶಪಡಿಸಿಕೊಂಡಿದ್ದರು. ಶೂ ಮೇಲೆ ರಕ್ತದ ಕಲೆ ಇದೆ ಎಂದಿದ್ದಾರೆ' ಎಂದರು. 'ಸಾವಿನ ಸಮಯ ನಿಖರವಾಗಿ ಹೇಳಲು ಸಾಧ್ಯವಿಲ್ಲವೆಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಹೇಳಲಾಗಿದೆ. ಶವವನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇರಿಸಿದ್ದರಿಂದ ಸಮಯ ಅಂದಾಜಿಸಲಾಗಲ್ಲ, ಜು.7 ರಂದು ನೀಡಿರುವ ವರದಿಯಲ್ಲಿ ಫೋಟೋ ನೋಡಿ ಸಾವಿನ ಸಮಯ ಅಂದಾಜು ಮಾಡಲಾಗಿದೆ. ಇದು ಸೂಕ್ತವಾದ ಕ್ರಮವಲ್ಲ' ಎಂದು ವಾದ ಮಂಡಿಸಿದರು.

click me!