ರಾಹುಲ್‌ ಗಾಂಧಿ ವಿಚಾರಣೆ: ಕ್ರಿಮಿನಲ್ ಆಫೆನ್ಸ್ ಮಾಡಿದವರನ್ನು ತನಿಖೆ ಮಾಡಬಾರದು ಅಂದ್ರೆ ಏನರ್ಥ?: ರವಿ

By Girish Goudar  |  First Published Jun 14, 2022, 9:36 PM IST

*  ಭ್ರಷ್ಟಾಚಾರ ಮುಚ್ಚಿಹಾಕಿಕೊಳ್ಳಲು ಚಳುವಳಿ ಮಾಡ್ತಾರೆ
*  ಚಳುವಳಿ ಮೂಲಕ ಭ್ರಷ್ಟಚಾರದ ತನಿಖೆ ಅಗಬಾರದು ಅಂತಾ ಬಯಸುತ್ತಾರೆ
*  ಸಂವಿಧಾನದಲ್ಲಿ ನೆಹರು ಕುಟುಂಬ ಏನೂ ಮಾಡಿದ್ರೂ ಪ್ರಶ್ನೆ ಮಾಡುವ ಹಾಗಿಲ್ಲವಾ?
 


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಜೂ.14):  ಇಡಿ ವಿಚಾರಣೆ ಎದುರಿಸುತ್ತಿರುವ ರಾಹುಲ್ ಗಾಂಧಿ ಪರವಾಗಿ ಕಾಂಗ್ರೆಸ್ಸ್ ಪಕ್ಷದಿಂದ ಕಾರ್ಯಕರ್ತರು ದೇಶದ್ಯಾಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಲೇವಡಿ ಮಾಡಿದ್ದಾರೆ. 

Latest Videos

undefined

ಇಂದು(ಮಂಗಳವಾರ) ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿ ಸಂವಿಧಾನ, ಕಾನೂನಿಗಿಂತ ನಾವು ಮೇಲಿದ್ದೇವೆ ಎಂದು ಕಾಂಗ್ರೆಸ್ನ ಒಂದು ಕುಟುಂಬ ಬಾವಿಸಿರುವುದೆ ಇ.ಡಿ ವಿರುದ್ದದ ಪ್ರತಿಭಟನೆಗೆ ಕಾರಣವಾಗಿದ್ದು ರಾಜಕೀಯ ದೊಂಬರಾಟದಿಂದ ಇಡಿ ತನಿಖೆಯಿಂದ ಬಚಾವಾಗಬಹುದು ಎಂದು ತಿಳಿದಿದ್ದಾರೆ ಇದು ಅವರ ಮಾನಸೀಕತೆಯಲ್ಲಿರುವ ದೌರ್ಬಲ್ಯ ಎಂದು ಲೇವಡಿ ಮಾಡಿದ್ದಾರೆ. 

ರಾಹುಲ್‌ ವಿಚಾರಣೆ ವಿರುದ್ಧ ಕಾಂಗ್ರೆಸ್‌ ಕಿಚ್ಚು: ದಿಲ್ಲಿ ಸೇರಿ ದೇಶದ ವಿವಿಧ ಕಡೆ ಪ್ರತಿಭಟನೆ

ಕಾಂಗ್ರೆಸ್‌ನಿಂದ ಬೀದಿ ನಾಟಕ 

ನರೇಂದ್ರ ಮೋದಿಯವರು ಒಂದು ರೋಲ್ ಮಾಡೆಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಸದ್ದುಗದ್ದಲವಿಲ್ಲದೆ 9 ಗಂಟೆಗಳ ಕಾಲ ಎಸ್ಐಟಿ ಮುಂದೆ ಹಾಜರಾಗಿದ್ದರು. ಇವರ ರೀತಿ ರಾಜಕೀಯದ ದೊಂಬರಾಟಮಾಡಲಿಲ್ಲಲಾ. ಪ್ರಾಮಾಣಿಕವಾಗಿದ್ದರೆ ಏಕಾಂಗಿಯಾಗಿ ಹೋಗಿ ತನಿಖೆಯನ್ನು ಎದುರಿಸುತ್ತಿದ್ದರು. ಇವರು ಭ್ರಷ್ಟರಾಗಿರುವುದರಿಂದ ಅದನ್ನು ಮುಚ್ಚಿಹಾಕಿಕೊಳ್ಳಲು ಬೀದಿ ನಾಟಕ ವಾಡುತ್ತಿದ್ದಾರೆ. ಈ ಕೇಸು ದಾಖಲಾಗಿರುವುದು 2012ರಲ್ಲಿ ಅಂದು ಕಾಂಗ್ರೆಸ್ ಸರ್ಕಾರವೇ ಇತ್ತು, ಕೋರ್ಟ್ ಮುಂದೆ ತಡೆಯಾಜ್ಞೆ ಕೇಳಿದರು.

ಮೇಲ್ನೋಟಕ್ಕೆ ಇದರಲ್ಲ ಸಮ್ಥಿಂಗ್ ಈಸ್ ಹ್ಯಾಪನ್ಡ್ ಎಂದು ಕೋರ್ಟ್ ತಿರಸ್ಕರಿಸಿತು. ಸುಬ್ರಹ್ಮಣ್ಯನ್ ಸ್ವಾಮಿ ಬೆನ್ನುಬಿದ್ದು ಇವರ ಅಕ್ರಮಗಳನ್ನು ಬಯಲಿಗೆಳೆದರು. ಮಹಾತ್ಮ ಗಾಂಧಿ ರೀತಿ ಸೋನಿಯಾ, ರಾಹುಲ್ ಗಾಂಧಿಯವರು ಅರೆ ಬೆತ್ತಲೆ ಪಕೀರರ ಇವರು ಗಾಂಧಿ ಹೆಸರಿಟ್ಟುಕೊಳ್ಳುವುದೆ ಒಂದು ಅಪಮಾನ. ಭ್ರಷ್ಠಾಚಾರ, ಅತ್ಯಾಚಾರ ಮಾಡಿದವರಿಗೂ ಸಿಂಪತಿ ಸಿಗುತ್ತದೆ ಎಂದು ಭಾವಿಸಿ ದೇಶದಲ್ಲಿ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದ್ದರೆ ಮೂರ್ಖರು ಮಾತ್ರ ಹಾಗೆ ಭಾವಿಸುವುದು ಎಂದರು. ನಮ್ಮನ್ನು ಯಾರೂ ಮಾತನಾಡಿಸುವಹಾಗಿಲ್ಲ, ನಾವು ಏನು ಮಾಡಿದರೂ ನಡೆಯುತ್ತದೆ ಅಂಬೇಡ್ಕರ್ ಕೊಟ್ಟಂತ ಸಂವಿಧಾನಕ್ಕಿಂತ ನಾವು ದೊಡ್ಡವರು ಎಂದುಕೊಳ್ಳುವ ಮಾನಸೀಕತೆ ದೇಶ ಹಿತಕ್ಕೆ ಪೂರಕವಲ್ಲ. ಯಾರು ಅವರ ಪರವಾಗಿ ಇಡಿ, ಸಿಬಿಐ, ಐಟಿ, ಇನ್ಕಂ ಟ್ಯಾಕ್ಸ್ ಅಧಿಕಾರಿಗಳ ವಿರುದ್ದ , ನರೇಂದ್ರ ಮೋದಿ ಸರ್ಕಾರದ ವಿರುದ್ದ ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಕಾಂಗ್ರೆಸ್ಸಿಗರು ದಿಕ್ಕಾರ ಕೂಗಿದರಲ್ಲ ಒಂದು ಪ್ರಶ್ನೆಗೆ ಉತ್ತರ ನೀಡಲಿ.

1057 ಜನ ಸ್ವಾತಂತ್ರ್ಯ ಹೋರಾಟಗಾರರು 1937 ರಲ್ಲಿ ಅವರು ಶೇರು ಹಾಕಿ ಕಟ್ಟಿದ ಒಂದು ಸಂಸ್ಥೆ ಇದು. ಅದನ್ನು ಇನ್ನೊಂದು ಕಂಪನಿಗೆ ವರ್ಗಾಯಿಸಬೇಕಾದರೆ ಆ ಶೇರುದಾರರ ಅನುಮತಿ ಪಡೆದಿದ್ದೀರಾ? ಅಸೋಸಿಯೇಟೆಡ್ ಜರ್ನಲ್ ಲಿಗೆ ದೇಶದ ವಿವಿಧ ನಗರಗಳಲ್ಲಿ ಉಚಿತ, ರಿಯಾಯಿತಿ ದರದಲ್ಲಿ ಸಾವಿರಾರು ಕೋಟಿ ಬೆಲೆ ಬಳುವ ಭೂಮಿ ನೀಡಿದೆ. ವರ್ಗಾಯಿಸುವ ಮುನ್ನ ಅದನ್ನು ಅಸೆಸ್ ಮಾಡಿಸಿದ್ದೀರಾ? ಆಗ ಸಾಲ ಕಳೆದು ಹೆಚ್ಚಿನ ಮೊತ್ತಕ್ಕೆ ಸಾರ್ವಜನಿಕವಾಗಿ ಇನ್ನೊಂದು ಪಬ್ಲಿಕ್ ಲಿ ಕಂಪನಿಗೆ ಕೊಡಬೇಕಾಗುತ್ತದೆ ಹೊರತು ಖಾಸಗಿ ಕಂಪನಿಗೆ ನೀಡಲು ಕೊಡಲು ಬರುವುದಿಲ್ಲ. ಯಂಗ್ ಇಂಡಿಯಾ ಪಬ್ಲಿಕ್ ಲಿ ಕಂಪನಿನಾ? ರಾಹುಲ್ ಗಾಂಧಿ ಶೇ.38 ಸೋನಿಯಾಗಾಂಽಯ ಶೇ.38 ಶೇರು. ಎಜೆಎಲ್ ಪಬ್ಲಿಕ್ ಲಿ ಶೇರುದಾರರು ಶೇರು ಹಾಕಿದ್ದರು. ರಾಹುಲ್ ಗಾಂಽಯವರ ಮುತ್ತಾತ ಜವಾಹರ್ ಲಾಲ್ ನೆಹರು ಅವರ ಶೇರು ಕೇವಲ ಶೇ.3, 2ಶೇರಿರುವಂತದ್ದು ಯಂಗ್ ಇಂಡಿಯಾ ಎಂದು ಪ್ರವೈಟ್ ಲಿ ಆರಂಭಿಸಿ ಅದಕ್ಕೆ ಕೊಟ್ಯಂತರ ರೂ ಆಸ್ತಿ ವರ್ಗಾವಣೆ ಮಾಡೋದು ಕ್ರಿಮಿನಲ್ ಅ-ನ್ಸ್ ಅಲ್ಲವಾ? ಅಕ್ರಮ ಹಣ ವರ್ಗಾವಣೆ ಅಲ್ಲವಾ? ಕನಿಷ್ಟ ಎರಡು ಸಾವಿರದಿಂದ 5 ಸಾವಿರ ಕೋಟಿ ವ್ಲ್ಯೂವೇಷನ್ ಇದೆ ಎಂದು ಮಾತನಾಡುತ್ತಾರೆ ಅಷ್ಟು ಇರುವಂತದ್ದನ್ನು ಯಂಗ್ ಇಂಡಿಯಾ ಪ್ರವೈಟ್ ಕಂಪನಿಗೆ  ವರ್ಗಾಯಿಸಿದರೆ ಎಂದರೆ ಹಗಲು ದರೋಡೆ ಎನ್ನದೆ ಮತ್ತೇನನ್ನಲು ಸಾಧ್ಯ ಎಂದು ಪ್ರಶ್ನೆಸಿದ್ದಾರೆ.

ರಾಹುಲ್ ಗಾಂಧಿ ಅಲ್ಲ, ರಾಹುಲ್ ದಾದಾ ಫಿರೋಜ್ ಗ್ಯಾಂಡಿ

ರಾಹುಲ್ ಗಾಂಧಿಯವರ ದಾದಾ ಫಿರೋಜ್ ಗ್ಯಾಂಡಿ, ಇವರು ಗಾಂಧಿ ಎಂದು ಹೆಸರಿಟ್ಟಿಕೊಂಡು ಜನ ನೋಡಿದವರು ಏನು ಅಂದುಕೊಳ್ಳುತ್ತಾರೆ ? ಮಹಾತ್ಮಗಾಂಧೀ ಇವರು ಒಂದೆ ಕುಟುಂಬ ಅನ್ನುಕೊಳ್ಳುತ್ತಾರೆ.  ಗಾಂಧಿ ಸತ್ಯದ ಪರವಾಗಿ ಸತ್ಯಾಗ್ರಹ ಮಾಡಿದರೆ ಇವರು ಅಕ್ರಮ, ಭ್ರಷ್ಟಾಚಾರ ಮುಚ್ಚಿಕೊಳ್ಳಲು ಬೀದಿ ನಿಂತು ಚಳವಳಿ ಮಾಡುತ್ತಾರೆಂದರೆ ಚಳವಳಿ ಮೂಲಕ ಭ್ರಷ್ಟಾಚಾರವನ್ನು ತನಿಖೆಯಾಗಬಾರದೆಂದು ಬಯಸುತ್ತಾರಾ ಇವರ ಹುನ್ನಾರ ಏನೆಂದು ಉತ್ತರ ನೀಡಲಿ ಎಂದು ಸಿ.ಟಿ ರವಿ ಕಾಂಗ್ರೇಸ್ ಮುಖಂಡರಿಗೆ ಸವಾಲು ಹಾಕಿದ್ದಾರೆ.

ಕಾಂಗ್ರೆಸ್ಸಿಂದ ಸರ್ಕಾರಿ ಕಚೇರಿ ಬಂದ್‌ ಎಚ್ಚರಿಕೆ: ಕೇಂದ್ರಕ್ಕೆ ಸಿದ್ದು, ಡಿಕೆಶಿ ಆಗ್ರಹ

ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ರವಿ ವಾಗ್ದಾಳಿ 

ಸಿದ್ದರಾಮಯ್ಯನವರೆ ಇದು ನಿಮ್ಮ ಲೆಕ್ಕದಲ್ಲಿ ಹಗಲು ದರೋಡೆಯಲ್ಲವಾ? ನೀವು ಭ್ರಷ್ಟಾಚಾರವನ್ನು ಸಮರ್ಥನೆ ಮಾಡೋದಕ್ಕಾಗಿ ಡಿಕೆಶಿ ಚಳವಳಿ ಮಾಡಿದ್ದೀರಾ? ಹಾಗಿದ್ದರೆ ನೀವು ಭ್ರಷ್ಟಾಚಾರ ಮಾಡುತ್ತಿರಬೇಕು ಯಾರು ಏನು ಕ್ರಮ ತೆಗೆದುಕೊಳ್ಳಬಾರದು ಎಂಬ ಮೆಸೇಜ್ ನೀಡುತ್ತಾರಾ ಸಿದ್ದರಾಮಯ್ಯನವರು ಲಾ ಓದಬೇಕಾದರೆ ಇದನ್ನೆ ಕಲಿತದ್ದಾ. ವಿಧಾನಸಭೆಯಲ್ಲಿ ಸಂವಿಧಾನದ ಪಾಠ ಮಾಡುತ್ತಿದ್ದರಲ್ಲಾ, ಭ್ರಷ್ಟರನ್ನು ರಕ್ಷಣೆ ಕೊಡಿ ಎಂದು ಅಂಬೇಡ್ಕರ್ ಹೇಳಿದ್ದಾರಾ? ದೊಡ್ಡ ದೊಡ್ಡವರು ಭ್ರಷ್ಟಾಚಾರ ಮಾಡಿದರೆ ಅವರ ರಕ್ಷಣೆಗೆ ನಿಲ್ಲಬೇಕು ಎಂದು ಅವರ ಮೇಷ್ಟ್ರು ಪಾಠ ಹೇಳಿಕೊಟ್ಟಿದ್ದಾರ. ಭ್ರಷ್ಟಾಚಾರ ಮಾಡಿದವರ ಸಮರ್ಥನೆ ಮಾಡಿದಾಗ ಮಾತ್ರ ನಿಮ್ಮ ರಾಜಕೀಯ ಭವಿಷ್ಯ ಉಜ್ವಲವಾಗುತ್ತದೆ ಎಂದು ಯಾರಾದರೊ ಜ್ಯೋತಿಷಿ ಸಿದ್ದರಾಮಯ್ಯನವರಿಗೆ ಹೇಳಿದ್ದಾರಾ? ಇವರು ಆಡುತ್ತಿರುವುದು ನೋಡಿದರೆ ಅದೇಪರಿಯಿದೆ ಎಂದರು.

ಕಾಂಗ್ರೆಸ್ ಪಕ್ಷ ಎಜೆಎಲ್ಗೆ 90 ಕೋಟಿ ಸಾಲ ಕೊಡುತ್ತದೆ 50 ಲಕ್ಷ ರೂ ಗೆ ಯಂಗ್ ಇಂಡಿಯಾ ಕೊಂಡುಕೊಳ್ಳುತ್ತದೆ ಅಂದರೆ ಯಾವ ಲೆಕ್ಕಾಚಾರಕ್ಕೂ ಸಿಗುವುದಿಲ್ಲ. ಕ್ರಮಿನಲ್ ಅ-ನ್ಸ್ ಮಾಡಿದವರನ್ನು ನೆಹರು ಕುಟುಂಬ ಏನು ಮಾಡಿದರೂ ಪ್ರಶ್ನೆ ಮಾಡುವಂತಿಲ್ಲಂದು ತನಿಖೆ ಮಾಡಬಾರದೆಂದರೆ ಹೇಗೆ. ಮಹಾತ್ಮ ಗಾಂಧಿ ಹೆಸರಿಟ್ಟುಕೊಂಡು ಅವರ ವ್ಯಕ್ತಿತ್ವಕ್ಕೆ ಅಪಚಾರ ಬಳಿಯುತ್ತಿದ್ದಾರಲಾ ಇವರು ನಿಜವಾಗಿಯೂ ಗಾಂಽಯಲ್ಲ ವರ್ಜಿನಲಿ ಇವರು ಗ್ಯಾಂಡಿ ಎಂದು ವ್ಯಂಗ್ಯವಾಡಿದರು.

click me!