ನೂತನ ಲೋಕಾಯಕ್ತರಾಗಿ ನಿವೃತ್ತ ನ್ಯಾ.ಬಿಎಸ್ ಪಾಟೀಲ್ ನೇಮಕ, ನಾಳೆ ಪ್ರಮಾಣವಚನ!

By Suvarna News  |  First Published Jun 14, 2022, 6:35 PM IST
  • ನೂತನ ಲೋಕಾಯುಕ್ತರ ನೇಮಕ ಮಾಡಿ ರಾಜ್ಯಪಾಲರ ಆದೇಶ
  • ಹಾಲಿ ಉಪಲೋಕಾಯುಕ್ತರಾಗಿರುವ ಬಿ ಎಸ್ ಪಾಟೀಲ್
  • ನಾಳೆ ಪ್ರಮಾಣವಚನ ಸ್ವೀಕರಿಸಲಿರುವ ಬಿಎಸ್ ಪಾಟೀಲ್

ಬೆಂಗಳೂರು(ಜೂ.14): ಕರ್ನಾಟಕದ ನೂತ ಲೋಕಾಯುಕ್ತರಾಗಿ ನಿವೃತ್ತ ನ್ಯಾಯಮೂರ್ತಿ ಬಿಎಸ್ ಪಾಟಿಲ್ ನೇಮಕಗೊಂಡಿದ್ದಾರೆ. ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೂತನ ಲೋಕಾಯುಕ್ತರ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಹಾಲಿ ಉಪಲೋಕಾಯುಕ್ತರಾಗಿರುವ ಬಿಎಸ್ ಪಾಟೀಲ್ ನಾಳೆ(ಜೂ.15) ಬೆಳಗ್ಗೆ 9.45ಕ್ಕೆ ಲೋಕಾಯುಕ್ತರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ.ಉಪಲೋಕಾಯುಕ್ತರಾಗಿರುವ ಬಿಸ್ ಪಾಟೀಲ್ ಇದೀಗ ಮಹತ್ತರ ಜವಾಬ್ದಾರಿ ನಿರ್ವಹಿಸಲಿದ್ದಾರೆ. 

Tap to resize

Latest Videos

ಲೋಕಾಯುಕ್ತ ಪತ್ರ ನೋಡಿ ಬೆಚ್ಚಿಬಿದ್ದ ಬಿಬಿಎಂಪಿ ಅಧಿಕಾರಿಗಳು: ಲೆಟರ್‌ನಲ್ಲಿ ಅಂಥಾದ್ದೇನಿದೆ?

ಉಪಲೋಕಾಯುಕ್ತರಾಗಿ ಬಿಎಸ್ ಪಾಟೀಲ್ ಭ್ರಷ್ಟರಿಗೆ ನಡುಕ ಹುಟ್ಟಿಸಿದ್ದರು. ದಿಢೀರ್ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಹೆಗ್ಗಳಿಕೆಗೆಯೂ ಬಿಎಸ್ ಪಾಟೀಲ್‌ಗೆ ಇದೆ. ಇಳಕಲ್ಲ ನಗರದ ಸರ್ಕಾರಿ ಆಸ್ಪತ್ರೆಗೆ  ಬಿ.ಎಸ್‌.ಪಾಟೀಲ ಭೇಟಿ ನೀಡಿ ಅಲ್ಲಿಯ ಅವ್ಯವಸ್ಥೆ ಕಂಡು ಕೆಂಡಾಮಂಡಲವಾಗಿದ್ದರು. ಇದು ಸರ್ಕಾರಿ ಆಸ್ಪತ್ರೆಯೋ ಅಥವಾ ತಿಪ್ಪೆಗುಂಡಿಯೊ ಎಂದು ಆಕ್ರೋಶವ್ಯಕ್ತಪಡಿಸಿದರು.

ಸೋಮವಾರ ಇಳಕಲ್ಲ ನಗರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕಡತಗಳ ಪರಿಶೀಲನೆ ಹಾಗೂ ವಾರ್ಡ್‌ಗಳ ವೀಕ್ಷಣೆ ನಡೆಸಿದ ಅವರು, ಇಂಥ ಅವ್ಯವಸ್ಥೆಯಲ್ಲಿ, ಗಲೀಜಿನಲ್ಲಿ ನೀವಾದರೂ ಹೇಗೆ ಇರುತ್ತೀರಿ ಎಂದು ಉಪಲೋಕಾಯುಕ್ತರು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯನ್ನು ಪ್ರಶ್ನಿಸಿದರು. ಆಸ್ಪತ್ರೆ ಹಾಗೂ ವಾರ್ಡ್‌ಗಳ ಸ್ವಚ್ಛತೆಗೆ ಹೆಚ್ಚು ಗಮನ ನೀಡಬೇಕು ಎಂದು ಸೂಚಿಸಿದ್ದರು.

ಹುನಗಂದ, ವಿಜಯಪುರ ಸೇರಿದಂತೆ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳ ಕುರಿತು ಆಕ್ರೋಶ ವ್ರಕ್ತಪಡಿಸಿದ್ದರು. ಇದೇ ವೇಳೆ ಅಧಿಕಾರಿಗಳ ಕರೆಸಿ ಖಡಕ್ ವಾರ್ನಿಂಗ್ ನೀಡಿದ್ದರು. ಬಿಎಸ್ ಪಾಟೀಲ್ ಅವರ ಈ ನಡೆಗೆ ರಾಜ್ಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

ಧಾರ್ಮಿಕ ಕಾರ್ಯಕ್ರಮ ಹೆಚ್ಚಿಸಿ ಜಾಗೃತಿ ಮೂಡಿಸಿ: ನ್ಯಾ. ಸಂತೋಷ ಹೆಗ್ಡೆ

1956ರ ಜೂನ್ 1 ರಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಪದೆಕಣ್ಣೂರು ಗ್ರಾಮದಲ್ಲಿ ಜನಿಸಿದ್ದ ಪಾಟೀಲ, ಕಾನೂನು ಪದವಿ ಪೂರ್ಣಗೊಳಿಸಿದ ಬಳಿಕ 1980ರಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ್ದರು. 2004ರ ಅಕ್ಟೋಬರ್ 21 ರಂದು ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 2018ರ ಮೇ 31 ರಂದು ನಿವೃತ್ತಿಯಾಗುವ ವೇಳೆ 13 ವರ್ಷ 7 ತಿಂಗಳ ಕಾಲ ಸೇವೆ ಸಲ್ಲಿಸಿದ್ದರು.

click me!