ಸರ್ಕಾರ ಒಂದೇ ಇರಲ್ಲ, ಬದಲಾಗುತ್ತೆ..; ಬೆಳಗಾವಿ ಪೊಲೀಸ್ ಕಮಿಷನರ್‌ಗೆ ಕೇಂದ್ರ ಸಚಿವ ಜೋಶಿ ವಾರ್ನ್!

By Ravi Janekal  |  First Published Dec 22, 2024, 1:00 PM IST

ಸಿ.ಟಿ.ರವಿ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಬಗ್ಗೆ ಪ್ರಹ್ಲಾದ್ ಜೋಶಿ ಬೆಳಗಾವಿ ಪೊಲೀಸ್ ಕಮಿಷನರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಮತ್ತು ವಿರೋಧ ಪಕ್ಷದವರ ದೂರುಗಳನ್ನು ದಾಖಲಿಸಿಕೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.


ಹುಬ್ಬಳ್ಳಿ (ಡಿ.22): ತಮ್ಮನ್ನು ಕೊಲೆ ಮಾಡೋ ಸಂಚಿತ್ತೆಂದು ಸಿ.ಟಿ.ರವಿ ಅವರೇ ಹೇಳಿದ್ದಾರೆ. ರಾಜ್ಯದಲ್ಲಿ ಏನು ನಡೆಯುತ್ತಿದೆ? ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಸಿಟಿ ರವಿ ಅವರನ್ನು ಪೊಲೀಸ್ ಅಧಿಕಾರಿಗಳು ನಡೆಸಿಕೊಂಡ ರೀತಿಯನ್ನ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರವಾಗಿ ಖಂಡಿಸಿದರು.

ಸಿಟಿ ರವಿ ಅವರನ್ನು ಬಂಧಿಸಿ ಪೊಲೀಸರೇ ಸಿಟಿ ರವಿ ಮೇಲೆ ಹಲ್ಲೆ ಮಾಡಿದ ಆರೋಪ ವಿಚಾರಕ್ಕೆ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವರು, ಸಿಟಿ ರವಿ ಕೊಟ್ಟ ದೂರು ದಾಖಲಿಸಿಕೊಳ್ಳದ ಪೊಲೀಸರು, ಸರ್ಕಾರದ ಕೈಗೊಂಬೆಯಂತೆ ವರ್ತಿಸಿದೆ. ಸರ್ಕಾರ ಒಂದೇ ಇರಲ್ಲ, ಸರ್ಕಾರ ಬದಲಾಗುತ್ತೆ. ಬೆಳಗಾವಿ ಪೊಲೀಸ್ ಕಮಿಷನರ್ ಎಚ್ಚರಿಕೆಯಿಂದ ಇರಬೇಕು. ಓರ್ವ ವಿಧಾನ ಪರಿಷತ್ ಸದಸ್ಯರಾದ ಸಿಟಿ ರವಿ ಅವರನ್ನ ಬಂಧಿಸಿ ಕಾನೂನು ಬಾಹಿರವಾಗಿ ನಡೆದುಕೊಂಡಿದ್ದೀರಿ. ಖಾನಾಪೂರ, ಕಬ್ಬಿನಗದ್ದೆ ಕಡೆ ಕರೆದುಕೊಂಡು ಹೋಗ್ತೀರಿ. ಸಾಲದ್ದಕ್ಕೆ ಈ ವಿಚಾರವಾಗಿ ಕಮಿಷನರ್ ಅತ್ಯಂತ ಬಾಲಿಶ ಹೇಳಿಕೆ ಕೊಟ್ಟಿದ್ದಾರೆ. ವಿಧಾನ ಸೌಧಕ್ಕೆ ನುಗ್ಗಿ ಹಲ್ಲೆ ನಡೆಸಿದವರನ್ನ ಏಕೆ ಬಂಧಿಸಿಲ್ಲ? ರಾಜಕೀಯವಾಗಿ ಹೋರಾಟ ಮಾಡಿ, ಕಾನೂನು ಹೋರಾಟ ಮಾಡಿ ಎಂದು ಸಿಟಿ ರವಿ ಅವರಿಗೆ ಸಲಹೆ ಕೊಟ್ಟಿದ್ದಾನೆ. ಮೊದಲು ಬೆಳಗಾವಿ ಕಮೀಷನರ್ ಗೆ ಕಾನೂನಿನ ಪಾಠ ಆಗಬೇಕು. ಇದಕ್ಕೆ ನಾನು ಯಾವುದೇ ಸಹಾಯ ಮಾಡಲು ಸಿದ್ದ ಎಂದರು.

Tap to resize

Latest Videos

undefined

ಮಾಧ್ಯಮದವರು ಇಲ್ಲದಿದ್ರೆ ಸಿ.ಟಿ. ರವಿ ಅವರನ್ನ ಪೊಲೀಸರು ಫೇಕ್‌ ಎನ್‌ಕೌಂಟರ್‌ ಮಾಡ್ತಿದ್ದರು: ಜೋಶಿ

ವಿಧಾನ ಸೌಧದಲ್ಲಿ ಆದ ಘಟನೆಗೆ ತರಾತುರಿಯಲ್ಲಿ ಎಫ್‌ಐಆರ್ ಮಾಡಿದ್ದಾರೆ. ಕಂಪ್ಲೆಂಟ್ ಕೊಟ್ಟವರು ಸಚಿವರ ಆಪ್ತರು. ಕೊಟ್ಟ ದೂರಿನಲ್ಲಿ ಸಚಿವೆಯ ಸಹಿಯೇ ಇರಲಿಲ್ಲ. ಸಚಿವರ ಆಪ್ತ ಸಹಾಯಕ ಸದನದ ಒಳಗಡೆ ಇದ್ರಾ ಕಮೀಷನರ್ ಗೆ ಕಾಮನ್ ಸೆನ್ಸ್ ಬೇಡ್ವಾ? ಬೆಳಗಾವಿ ಕಮಿಷನರ್ ಐಪಿಎಸ್ ಆಗಲು ಆನ್‌ಫಿಟ್. ಆಡಳಿತ ಪಕ್ಷದವರ ದೂರು ದಾಖಲಿಸಿಕೊಂಡ ಪೊಲೀಸರು, ವಿರೋಧ ಪಕ್ಷದವರ ಕೊಟ್ಟ ದೂರು ದಾಖಲಿಸಿಕೊಂಡಿಲ್ಲ ಏಕೆ? ಇದುವರೆಗೆ ದೂರು ದಾಖಲಾಗಿಲ್ಲ. ವಿಧಾನಸೌಧದೊಳಗೆ ನುಗ್ಗಿ ವಿಧಾನಪರಿಷತ್ ಸದಸ್ಯ ರವಿ ಮೇಲೆ ಹಲ್ಲೆ ಮಾಡಿದರೂ ಯಾಕೆ ಬಂಧಿಸಿಲ್ಲ? ಪೊಲೀಸ್ ಇಲಾಖೆ ಇರೋದು ಕಾಂಗ್ರೆಸ್ ಕಾರ್ಯಕರ್ತರನ್ನ, ನಾಯಕರನ್ನ ರಕ್ಷಣೆ ಮಾಡಲಾ? ಕಾನೂನು ಸುವ್ಯವಸ್ಥೆ ನೋಡಿಕೊಳ್ಳಲಾ? 

ಛಲವಾದಿ ನಾರಾಯಣ ಸ್ವಾಮಿ ಹರಿಜನರು ಅಂತಾ ಮಾತಾಡಿಸಿಲ್ವಾ ಕಮೀಷನರ್? ಅದೊಂದು ಸಾಂವಿಧಾನಿಕ ಹುದ್ದೆ. ಗೌರವಾನ್ವಿತ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರು ಅವರು. ಆದರೆ ಅವರು ಹರಿಜನರು ಅಂತಾ ಅವರನ್ನು ಮಾತನಾಡಿಸಿಲ್ವ? ಬೆಳಗಾವಿ ಪೊಲೀಸ್ ಕಮಿಷನರ್ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದು ಬೆನ್ನಿಗೆ ನಿಲ್ಲುವೆ ಎನ್ನುವ ಡಿಕೆಶಿಯೇ ಒಪ್ಪಂದ ಬಗ್ಗೆ ಹೇಳಿದ್ದಾರೆ: ಪ್ರಹ್ಲಾದ್ ಜೋಶಿ

ಗೃಹ ಸಚಿವ ವಿರುದ್ಧ ಜೋಶಿ ಗರಂ:

ಗೃಹ ಸಚಿವ ಪರಮೇಶ್ವರ್ ಆ ಸ್ಥಾನದಲ್ಲಿ ಮುಂದುವರಿಯುವ ಯಾವುದೇ ಅರ್ಹತೆ ಇಲ್ಲ. ಸಿಟಿ ರವಿ ಪ್ರಕರಣದಲ್ಲಿ ಹೋಂ ಮಿನಿಸ್ಟರ್ ಗಮನಕ್ಕೆ ಬಂದಿಲ್ಲ ಎಂದರೆ ಹೇಗೆ? ಆ ಹುದ್ದೆಯಲ್ಲಿ ಇರಬೇಕೋ, ಬೇಡವೋ ಅನ್ನೋದನ್ನು ಅವರೇ ವಿಚಾರ ಮಾಡಬೇಕು. ಏನೇ ಆದ್ರೂ ಹೋಮ್ ಮಿನಿಸ್ಟರ್ ಗಮನಕ್ಕೆ ಬರುತ್ತೆ. ಆದರೆ ಯಾವುದೇ ವಿಚಾರಕ್ಕೂ ಅವರ ಬಾಯಿಂದ ಬರೋದು ಒಂದೇ ಉತ್ತರ ನನಗೆ ಗೊತ್ತಿಲ್ಲ, ಆ ಬಗ್ಗೆ ಮಾಹಿತಿ ಇಲ್ಲ, ಗಮನಕ್ಕೆ ಬಂದಿಲ್ಲ ಅನ್ನೋದು. ಪರಮೇಶ್ವರ್ ಒಬ್ಬ ಜಂಟಲ್ ಮ್ಯಾನ್, ಆ ಹುದ್ದೆಯಲ್ಲಿ ಮುಂದುವರಿಯಬೇಕೋ ಬೇಡವೋ ಯೋಚಿಸಲಿ. ಸಿಟಿ ರವಿ ವಿಚಾರದಲ್ಲಿ ಅತ್ಯಂತ ಭಯಂಕರ ದ್ವೇಷ ಸಾಧಿಸಿದ್ದಾರೆ. ಅದಕ್ಕೆ ಬೆಳಗಾವಿ ಕಮಿಷನರ್ ಸಾಥ್ ಕೊಟ್ಟಿದ್ದಾರೆ. ಇದು ಇಲ್ಲಿಗೆ ಬಿಡುವುದಿಲ್ಲ. ಇದರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ.

click me!