ವಿಶ್ವ ಧ್ಯಾನ ದಿನದಂದು, ಗುರುದೇವ ಶ್ರೀ ಶ್ರೀ ರವಿಶಂಕರ್ ನೇತೃತ್ವದಲ್ಲಿ 8.5 ಮಿಲಿಯನ್ ಜನರು ಏಕಕಾಲದಲ್ಲಿ ಧ್ಯಾನ ಮಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದರು. ಈ ಕಾರ್ಯಕ್ರಮವು ಗಿನ್ನೆಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ವರ್ಲ್ಡ್ ರೆಕಾರ್ಡ್ಸ್ ಯೂನಿಯನ್ ದಾಖಲೆಗಳನ್ನು ಮುರಿದಿದೆ.
ವಿಶ್ವ ಧ್ಯಾನ ದಿನದಂದು, ಗುರುದೇವರು ಪ್ರಪಂಚದಾದ್ಯಂತ 8.5 ಮಿಲಿಯನ್‌ಗಿಂತಲೂ (ದಶ ಲಕ್ಷ) ಹೆಚ್ಚು ಜನರನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಧ್ಯಾನಕ್ಕೆ ಕರೆದೊಯ್ದರು.
ಬೆಂಗಳೂರು, ಶನಿವಾರ, 21 ಡಿಸೆಂಬರ್ 2024: ‘ಗುರುದೇವರೊಂದಿಗೆ ವಿಶ್ವ ಧ್ಯಾನ’, ಎಲ್ಲಾ ದಾಖಲೆಗಳನ್ನೂ ಮುರಿದು ಒಂದು ಐತಿಹಾಸಿಕ ಮೈಲಿಗಲ್ಲನ್ನು ಸೃಷ್ಟಿಸಿತು. ಈ ದಾಖಲೆಯು, ವಿಶ್ವದ ಅತೀ ದೊಡ್ಡ ಏಕಸಮಯದ ಸಾಮೂಹಿಕ ಧ್ಯಾನದ ದಾಖಲೆಯನ್ನು ಸೃಷ್ಟಿಸಿದ್ದಕ್ಕಾಗಿ ಗಿನ್ನೆಸ್ ವಿಶ್ವದಾಖಲೆಯ ಪುಸ್ತಕವನ್ನು, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ವರ್ಲ್ಡ್ ರೆಕಾರ್ಡ್ಸ್ ಯೂನಿಯನ್ ಅನ್ನು ತಲುಪಿದೆ. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ಆಯೋಜಿಸಲಾಗಿದ್ದ ಈ ಐತಿಹಾಸಿಕ ಸಮಾವೇಶದಲ್ಲಿ ಅನೇಕ ಮಿಲಿಯನ್ ಜನರು ಜಾಗತಿಕವಾಗಿ ಒಂದಾಗಿ ಸೇರಿ, ಸಾಮೂಹಿಕ ಧ್ಯಾನದ ವಿಶ್ವದಾಖಲೆಯನ್ನು ಸೃಷ್ಟಿಸಿದರು.
undefined
ಪ್ರಥಮ ವಿಶ್ವ ಧ್ಯಾನ ದಿನವು ಐಕ್ಯತೆಯ ಹಾಗೂ ಆಂತರಿಕ ಶಾಂತಿಯ, ಸರಿಸಾಟಿಯಿಲ್ಲದಂತಹ ಉತ್ಸವವಾಗಿ ಆಚರಿಸಲ್ಪಟ್ಟಿತು. 180 ದೇಶಗಳಿಂದ ಜನರು ಭಾಗವಹಿಸಿ, ಧ್ಯಾನವು ಪರಿವರ್ತಕ ಶಕ್ತಿಯನ್ನು ಹೊಂದಿರುವಂತಹ ಜಾಗತಿಕ ಚಳುವಳಿ ಎಂದು ತೋರಿಸಿದರು. ವಿಶ್ವ ಸಂಸ್ಥೆಯಲ್ಲಿ ಉದ್ಘಾಟನಾ ಸಮಾರಂಭದಿಂದ ಪ್ರಾರಂಭವಾಗಿ, ವರ್ಲ್ಡ್ ಟ್ರೇಡ್ ಸೆಂಟರ್ ನ ಮೇಲಿನಿಂದ ಗುರುದೇವರ ಧ್ಯಾನದ ನೇರ ಪ್ರಸಾರದೊಂದಿಗೆ ಈ ಸಮಾರಂಭವು ಮುಕ್ತಾಯಗೊಂಡಿತು. ಎಲ್ಲಾ ಖಂಡಗಳಲ್ಲೂ ಧ್ಯಾನದ ಅಲೆಯು ಹರಡಿತ್ತು.
ಇಂದು ವಿಶ್ವ ಧ್ಯಾನ ದಿನ: ಮನಸ್ಸಿನ ಓಟ ಮತ್ತು ಧ್ಯಾನದ ಮಹತ್ವದ ಕುರಿತು ರವಿಶಂಕರ್ ಗುರೂಜಿ ಮಾತು
ಈ ಕಾರ್ಯಕ್ರಮವು ಮುರಿದ ದಾಖಲೆಗಳ ಪಟ್ಟಿ:
ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್
ಏಷ್ಯಾ ಬುಕ್ ಆಫ್ ರೆಕಾರ್ಡ್ಸ್
ವರ್ಲ್ಡ್ ರೆಕಾರ್ಡ್ಸ್ ಯೂನಿಯನ್
ಗುರುದೇವರು ನಡೆಸಿಕೊಟ್ಟ ಧ್ಯಾನದ ನೇರಪ್ರಸಾರದಲ್ಲಿ ಹಲವು ಮಿಲಿಯನ್ ಜನರು ಅಂತರ್ಜಾಲದ ಮೂಲಕ ಭಾಗವಹಿಸಿ, ವಿಶ್ವ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಧ್ಯಾನ ಮಾಡಿದರು. ಧ್ಯಾನವನ್ನು ಆರಂಭಿಸುವ ಮೊದಲು, ಧ್ಯಾನದ ಅರ್ಥವನ್ನು ಗುರುದೇವರು ವಿವರಿಸಿದರು. "ಧ್ಯಾನವೆಂದರೆ, ಆಲೋಚನೆಗಳಲ್ಲಿ ತಿಳಿದಿರುವುದನ್ನು ಅನುಭವಿಸುವ ಪಯಣ. ಧ್ಯಾನ ಮಾಡಬೇಕಾದರೆ, ವಿಪರೀತವಾಗಿ ಆಲೋಚಿಸುವುದರಿಂದ, ಏನಿದೆಯೋ ಅದನ್ನು ಅನುಭವಿಸುವುದರತ್ತ ಹೋಗಬೇಕು. ನಂತರ ಆ ಆಲೋಚನೆಗಳನ್ನೂ ದಾಟಿ ಆಂತರ್ಯದ ಆಕಾಶದೊಳಗೆ ತೆರಳುವುದು. ವಿವೇಚನೆಯುಳ್ಳವರಾಗಿ, ಸೂಕ್ಷ್ಮತೆಯುಳ್ಳವರಾಗಿ ಇರಬೇಕೆಂದರೆ ಧ್ಯಾನವನ್ನು ಮಾಡಬೇಕು. ಧ್ಯಾನವೆಂದರೆ ನಿಷ್ಕ್ರಿಯವಾದ ಸ್ಥಿತಿಯಲ್ಲ. ಧ್ಯಾನದಿಂದ ನೀವು ಹೆಚ್ಚು ಕ್ರಿಯಾಶೀಲರಾಗುತ್ತೀರಿ ಮತ್ತು ಶಾಂತಿಯುತರಾಗುತ್ತೀರಿ. ಕ್ರಾಂತಿಕಾರಿಯಾಗಲೂ ಸಹ ಧ್ಯಾನ ಮಾಡಬೇಕು" ಎಂದರು.
ಆರ್ಟ್ ಆಫ್ ಲಿವಿಂಗ್ ನ ಈ ಕಾರ್ಯಕ್ಕೆ ಜಾಗತಿಕ ನಾಯಕರು, ಸೆಲೆಬ್ರಿಟಿಗಳು, ಕ್ರೀಡಾಪಟುಗಳು, ವೃತ್ತಿಪರರು, ಜೀವನದ ಎಲ್ಲಾ ವರ್ಗದವರು, ಎಲ್ಲಾ ವಯೋಮಾನದವರೂ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ರೈತರು, ಶಿಕ್ಷಣ ಸಂಸ್ಥೆಗಳು, ಅಂಧ ಶಾಲೆಯ ಮಕ್ಕಳು, ಕಾರ್ಪೊರೇಟ್ ಗಳು, ಮಿಲಿಟರಿಯ ಸದಸ್ಯರು, ಆರೋಗ್ಯ ಕಾರ್ಯಕರ್ತರು, ಸಂಶೋಧಕರು, ವಿಜ್ಞಾನಿಗಳು, ಗೃಹಿಣಿಯರು, ಬುಡಕಟ್ಟು ಜನಾಂಗದವರು, ಕಾರಾಗೃಹದ ಕೈದಿಗಳು ಭಾಗವಹಿಸಿ, ಧ್ಯಾನದ ವೈಶ್ವಿಕತೆಯನ್ನು, ಅದರ ಸಕಾರಾತ್ಮಕವಾದ ಸೆಳೆತವನ್ನು ತೋರಿಸಿದರು. ಶಾಂತಿ ಹಾಗೂ ಸಾಮರಸ್ಯದ ಕ್ಷಣಗಳಲ್ಲಿ ಜಗತ್ತು ಒಂದಾಯಿತು.
ಕನ್ನಡಿಗ ಶ್ರೀ ಶ್ರೀ ರವಿಶಂಕರ್ ಗುರೂಜಿ ನೇತೃತ್ತದಲ್ಲಿ ವಿಶ್ವದ ಮೊದಲ ಧ್ಯಾನ ದಿನ!
‘ಗುರುದೇವರೊಂದಿಗೆ ವಿಶ್ವ ಧ್ಯಾನ’ಕ್ಕೆ ದೊರೆತ ಅಗಾಧವಾದ ಪ್ರತಿಕ್ರಿಯೆ ಹಾಗೂ ಜಾಗತಿಕ ಭಾಗವಹಿಸುವಿಕೆಯು ಸಾಮೂಹಿಕ ಧ್ಯಾನದ ಪರಿವರ್ತಕ ಶಕ್ತಿಯನ್ನು ತೋರಿಸುತ್ತದೆ. ಈ ಅಪಾರ ಯತ್ನದಿಂದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಧ್ಯಾನದಲ್ಲಿ ಅನೇಕ ಮಿಲಿಯನ್ ಜನರನ್ನು ಒಗ್ಗೂಡಿಸಿದ್ದಲ್ಲದೆ, ಆಂತರಿಕ ಶಾಂತಿ ಮತ್ತು ವೈಶ್ವಿಕ ಸಾಮರಸ್ಯದ ಜಾಗತಿಕ ಚಳುವಳಿಗೂ ಸ್ಫೂರ್ತಿಯಾಗಿದೆ.