ಸಾರಿಗೆ ಸಚಿವರೇ ಇಲ್ನೋಡಿ; ಆಟೋ, ಕ್ಯಾಬ್ ಚಾಲಕರ ಪುಂಡಾಟಕ್ಕೆ ಕೊನೆ ಎಂದು?

By Ravi Janekal  |  First Published Dec 22, 2024, 10:30 AM IST

ಬೆಂಗಳೂರಿನಲ್ಲಿ ಆಟೋ ಮತ್ತು ಕ್ಯಾಬ್ ಚಾಲಕರಿಂದ ಪ್ರಯಾಣಿಕರ ಮೇಲೆ ಹಲ್ಲೆಗಳು ಹೆಚ್ಚುತ್ತಿವೆ. ಲೊಕೇಶನ್ ವಿಚಾರ ಮತ್ತು ಹೆಚ್ಚುವರಿ ಹಣಕ್ಕಾಗಿ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿರುವ ಘಟನೆಗಳು ವರದಿಯಾಗಿವೆ. ಸರ್ಕಾರದ ನಿರ್ಲಕ್ಷ್ಯಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಬೆಂಗಳೂರು (ಡಿ.22): ಒಂದು ಕಾಲದಲ್ಲಿ ಬೆಂಗಳೂರು ಆಟೋ ಡ್ರೈವರ್‌ಗಳು ಪ್ರಮಾಣಿಕತೆ, ಮಾನವೀಯ ಗುಣಗಳಿಗೆ ಹೆಸರುವಾಸಿಯಾಗಿದ್ದರು. ಇಂದು ದಿನ ಬೆಳಗಾದರೆ ಪ್ರಯಾಣಿಕರಿಗೆ, ಪ್ರವಾಸಿಗರ ಮೇಲೆ ಹಲ್ಲೆ, ಗೂಂಡಾ ವರ್ತನೆ, ಅವಾಚ್ಯ ಶಬ್ದ ನಿಂದನೆ ವರದಿಗಳು ಬರುತ್ತಿವೆ. ಆಟೋ ಚಾಲಕರಿಂದ ಹಲ್ಲೆಗೊಳಾದ ಪ್ರವಾಸಿಗರು, ಪ್ರಯಾಣಿಕರು ದಿನನಿತ್ಯ ಪೊಲೀಸ್ ಠಾಣೆಗೆ ದೂರು ಕೊಡುತ್ತಿರುವವವರ ಸಂಖ್ಯೆ ಹೆಚ್ಚುತ್ತಿರುವುದು ಆತಂಕ ಮೂಡಿಸುಂಥದ್ದು.

ಬೆಂಗಳೂರಿಗೆ ಬರುವ ಪ್ರವಾಸಿಗರನ್ನೇ ಗುರಿಯಾಗಿಸಿಕೊಂಡು ಬೆದರಿಸಿ ದುಡ್ಡು ಸುಲಿಗೆ ಮಾಡಲೆಂದೇ ಕ್ರಿಮಿನಲ್ ಹಿನ್ನೆಲೆ ಕೆಲವು ಪುಂಡುಪೋಕರಿಗಳು ಆಟೋ ಡ್ರೈವರ್‌ಗಳಾಗಿ ಸೇರಿಕೊಂಡ ನಂತರ ಹಲ್ಲೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದರ ಸಾಲಿಗೆ ಇದೀಗ ಮತ್ತೊಂದು ಅಂಥದ್ದೇ ಪ್ರಕರಣ ನಗರದಲ್ಲಿ ನಡೆದಿದೆ.

Tap to resize

Latest Videos

undefined

ಆಟೋ ಚಾಲಕರು ಸೀಟಿನ ತುದಿಗ ವಾಲಿಕೊಂಡು ಕೂಡುವುದೇಕೆ? ಕೊನೆಗೂ ಉತ್ತರ ಸಿಕ್ಕಿತು!

ಲೊಕೇಶನ್ ವಿಚಾರಕ್ಕೆ ಪ್ರಯಾಣಿಕನಿಗೆ ನಿಂದನೆ:

ಆಟೋ ಬುಕ್ ಮಾಡಿರುವ ಪ್ರಯಾಣಿಕ. ತಾನು ಹೇಳಿರುವ ಲೋಕೇಶನ್‌ಗೆ ಪ್ರಯಾಣಿಕ ತಾನು ಹೇಳಿದ ಲೋಕೇಶನ್‌ಗೆ ಇಳಿದಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕುಟುಂಬದ ಎದುರಲ್ಲೇ ಅವಾಚ್ಯಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಸಂಯಮದಿಂದ ವರ್ತಿಸಿರುವ ಪ್ರಯಾಣಿಕ ಆದರೂ ನಡು ರಸ್ತೆಯಲ್ಲಿ ಕುಟುಂಬಸ್ಥರ ಎದುರಲ್ಲೇ ಕೆಟ್ಟ ಶಬ್ದಗಳಿಂದ ನಿಂದಿಸಿರುವ ಆಟೋ ಚಾಲಕ. ಕಂಟ್ರೋಲ್ ಮಾಡಲು ಪ್ರಯತ್ನ ಪಟ್ಟರೂ ಸುಮ್ಮನಾಗದ ಆಸಾಮಿ. ಘಟನೆ ನಡೆದ ಸ್ಥಳದ ಬಗ್ಗೆ ಪ್ರಯಾಣಿಕ ಮಾಹಿತಿ ನೀಡಿಲ್ಲವಾದರೂ ಬೆಂಗಳೂರು ಪೊಲೀಸರಿಗೆ ಟ್ವಿಟರ್ ಎಕ್ಸ್ ನಲ್ಲಿ ಟ್ಯಾಗ್ ಮಾಡಿ ಆಟೋ ಚಾಲಕನ ವಿರುದ್ಧ ಕ್ರಮ ಆಗ್ರಹಿಸಿದ್ದಾನೆ.

ಕ್ಯಾಬ್‌ ಚಾಲಕನಿಂದ ಪ್ರಯಾಣಿಕನ ಮೇಲೆ ಹಲ್ಲೆ!

ನಿಗದಿತ ದರಕ್ಕಿಂತ ಹೆಚ್ಚು ಹಣ ಕೊಡಲು ನಿರಾಕರಿಸಿದ ಪ್ರಯಾಣಿಕನ ಮೇಲೆ ಕ್ಯಾಬ್ ಚಾಲಕ ಅವಾಚ್ಯಶಬ್ದ ನಿಂದಿಸಿ ಹಲ್ಲೆಗೆ ಯತ್ನಿಸಿದ ಘಟನೆ ಪದ್ಮನಾಭನಗರದ ಆರ್‌ಕೆ ಲೇಔಟ್‌ನಲ್ಲಿ ನಡೆದಿದೆ.

ಶುಭಂ ಎಂಬ ಪ್ರಯಾಣಿಕನ ಮೇಲೆ ಹಲ್ಲೆ ಯತ್ನ.ಕಾಂತರಾಜ್, ಹಲ್ಲೆಗೆ ಮುಂದಾದ ಕ್ಯಾಬ್ ಚಾಲಕ. ಕ್ಯಾಬ್ ಬುಕ್ ಮಾಡಿರುವ ಶುಭಂ. ಲೋಕೇಶನ ತಲುಪಿದ ನಂತರ 3ಕಿಮೀ ಹೆಚ್ಚು ತೋರಿಸ್ತಿದೆ ಹೆಚ್ಚು ಹಣ ನೀಡುವಂತೆ ಪ್ರಯಾಣಿಕನಿಗೆ ಒತ್ತಾಯಿಸಿದ್ದಾನೆ. ಆದರೆ ನಿಗದಿತ ದರಕ್ಕಿಂತ ಹೆಚ್ಚು ಹಣ ನೀಡಲು ನಿರಾಕರಿಸಿದ ಪ್ರಯಾಣಿಕ. ಟ್ರಿಪ್ ಕ್ಯಾನ್ಸಲ್ ಮಾಡಲು ಹೇಳಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ಶುರುವಾಗಿದೆ ಈ ವೇಳೆ ಶುಭಂ ಡ್ರೈವರ್ ಮೊಬೈಲ್ ಪರಿಶೀಲಿಸಲು ಮುಂದಾಗಿದ್ದಾನೆ. ಅಷ್ಟಕ್ಕೆ ಕೋಪಗೊಂಡ ಕ್ಯಾಬ್ ಚಾಲಕ ಕಾಂತರಾಜ್ ಅವಾಚ್ಯಶಬ್ದದಿಂದ ನಿಂದಿಸಿದ್ದಾನೆ. ಪ್ರಯಾಣಿಕ ವಿಡಿಯೋ ಮಾಡಲು ಯತ್ನಿಸಿದ್ದಕ್ಕೆ ಕಾರು ಸೈಡಿಗೆ ಹಾಕಿ ಪ್ರಯಾಣಿಕನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ ಎಂದು ಆರೋಪಿಸಿರುವ ಪ್ರಯಾಣಿಕ. ಈ ಬಗ್ಗೆ ವಿಡಿಯೋ ಸಮೇತ ಟ್ವಿಟರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಬೆಂಗಳೂರು ಪೊಲೀಸ್ ಟ್ಯಾಗ್ ಕ್ರಮಕ್ಕೆ ಆಗ್ರಹಿಸಿದ್ದಾರೆ. 

ನಗರದಲ್ಲಿ ಆಟೋ ಚಾಲಕರ ಮೀಟರ್ ವಂಚನೆ ಗುರುತಿಸಲು ಈ ತಂತ್ರ ತಿಳಿಯಿರಿ!

ಕಣ್ಮುಚ್ಚಿ ಕುಳಿತಿರುವ ಸರ್ಕಾರ:

ಆಟೋ ಚಾಲಕರು ಮೀಟರ್ ಹಾಕುವುದು ಕಡ್ಡಾಯ ಮಾಡಿದರೂ ಯಾವುದೇ ಪ್ರಯೋಜನ ಇಲ್ಲ. ಮೆಜೆಸ್ಟಿಕ್ ಸುತ್ತಮುತ್ತ ಸೇರಿ ಇಡೀ ಬೆಂಗಳೂರು ನಗರದಲ್ಲೇ ಆಟೋ ಚಾಲಕರು ಮೀಟರ್ ಹಾಕಲು ನಿರಾಕರಿಸುತ್ತಿದ್ದಾರೆ. ಕೆಲವು ಆಟೋ ಚಾಲಕರು ಮೀಟರ್‌ನಲ್ಲೇ ಪ್ರಯಾಣಿಕರಿಗೆ ಮೋಸ ಮಾಡುತ್ತಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ ಯಾವುದೇ ಕಟ್ಟುನಿಟ್ಟಿನ ಕ್ರಮ ಜರುಗಿಸದೇ ಸರ್ಕಾರ ದಿವ್ಯ ನಿರ್ಲಕ್ಷ್ಯವಹಿಸಿದೆ ಎಂದು ಪ್ರಯಾಣಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!