ಮಲ್ಲಿಕಾರ್ಜುನ ಖರ್ಗೆ ಮನುವಾದಿ ರಾಜಕಾರಣಿ, ಅವರು ಪ್ರಧಾನಿಯಾಗುವುದನ್ನು ತಿರಸ್ಕರಿಸಿ: ನಟ ಅಹಿಂಸಾ ಚೇತನ್!

By Sathish Kumar KH  |  First Published Dec 24, 2023, 4:32 PM IST

ಮನುವಾದಿ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ದಲಿತ- ಸಮಾನತಾವಾದಿಗಳು ಮೊದಲು ತಿರಸ್ಕರಿಸಬೇಕು ಎಂದು ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದ್ದಾರೆ.


ಬೆಂಗಳೂರು (ಡಿ.24): ನಮ್ಮ ಸಮಾನತೆಯ ಚಳುವಳಿಗೆ ಐಡೆಂಟಿಟೇರಿಯನಿಸಮ್ (ಸ್ವ-ಭಾಷೆ/ ಸ್ವ-ಜಾತಿ/ ಸ್ವ-ಧರ್ಮ/ಸ್ವ-ಲಿಂಗ ಪ್ರೇಮ ಇತ್ಯಾದಿ) ಪ್ರಮುಖ ಅಪಾಯವಾಗಿದೆ. ಮನುವಾದಿ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ದಲಿತ- ಸಮಾನತಾವಾದಿಗಳು ಮೊದಲು ತಿರಸ್ಕರಿಸಬೇಕು ಎಂದು ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿರುವ ಅವರು, 'ನಮ್ಮ ಸಮಾನತೆಯ ಚಳುವಳಿಗೆ ಐಡೆಂಟಿಟೇರಿಯನಿಸಮ್ (ಸ್ವ-ಭಾಷೆ/ ಸ್ವ-ಜಾತಿ/ ಸ್ವ-ಧರ್ಮ/ಸ್ವ-ಲಿಂಗ ಪ್ರೇಮ ಇತ್ಯಾದಿ) ಪ್ರಮುಖ ಅಪಾಯವಾಗಿದೆ. ಅಭ್ಯರ್ಥಿಯು ನಮ್ಮಂತೆಯೇ ಜಾತಿ/ ಧರ್ಮ/ಭಾಷೆ/ ಲಿಂಗದಲ್ಲಿ ಹುಟ್ಟಿದ್ದಾರೆ ಎಂಬ ಕಾರಣಕ್ಕೆ ನಾವು ಅವರನ್ನು ಬೆಂಬಲಿಸಬಾರದು. ನಾವು ಸಿದ್ದಾಂತದ ಆಧಾರದ ಮೇಲೆ ಬೆಂಬಲಿಸಬೇಕು. ಮನುವಾದಿ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ದಲಿತ- ಸಮಾನತಾವಾದಿಗಳು ಮೊದಲು ತಿರಸ್ಕರಿಸಬೇಕು. 

Tap to resize

Latest Videos

ವಿದ್ಯಾರ್ಥಿಗಳಿಂದ ಟಾಯ್ಲೆಟ್‌ ಕ್ಲೀನ್‌: ಸಿಎಂ, ಸಚಿವರು ಕಾರಣ: ಎಚ್‌ಡಿಕೆ

ಮಲ್ಲಿಕಾರ್ಜುನ ಖರ್ಗೆ ದಲಿತರಾಗಿರಬಹುದು (ಆಕಸ್ಮತ್ತಾಗಿ).. ಆದರೆ, ಅವರು ಕಾಂಗ್ರೆಸ್ಸಿಗರು, ಮನುವಾದಿ, ಆಯ್ಕೆಯಿಂದ ಖರ್ಗೆ ಸಮಾನತಾವಾದಿಯಲ್ಲ. ಆದ್ದರಿಂದ ಅವರು ನಮ್ಮಲ್ಲಿ ಒಬ್ಬರಲ್ಲ. ಮಾನ್ಯವರ್ ಕಾನ್ಶೀರಾಮ್ ಅವರು ತಮ್ಮ 'ಚಮಚಾಯುಗ' ಪುಸ್ತಕದಲ್ಲಿ ವೈಯಕ್ತಿಕ ಬೆಳವಣಿಗೆಗಾಗಿ ಎಷ್ಟೋ ಬಹುಜನರು ಬ್ರಾಹ್ಮಣ್ಯದ ಕೈವಾಡಗಳ ಬಗ್ಗೆ ಬರೆದಿದ್ದಾರೆ. ಖರ್ಗೆ ಪ್ರಧಾನಿಯಾದರೆ ಪರಿವರ್ತನೆ ತರುತ್ತಾರಾ' ಎಂದು ಪ್ರಶ್ನೆ ಮಾಡಿದ್ದಾರೆ.

ಮತ್ತೊಂದೆಡೆ ಸರಣಿ ಪೋಸ್ಟ್‌ಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆಯನ್ನೂ ವಿರೋಧ ಮಾಡಿರುವ ಚೇತನ್ ಅಹಿಂಸಾ ಅವರು, ಇಂದು ರೈತರ ದಿನದಂದು, 2020 ರಲ್ಲಿ ಬಿಜೆಪಿ ತಂದಿರುವ ರೈತ ವಿರೋಧಿ ಕಾನೂನನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ನಾವು ಸಮಾನತಾವಾದಿಗಳು ಒತ್ತಾಯಿಸುತ್ತೇವೆ. ರಾಜ್ಯ ಸರ್ಕಾರ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ತೆಗೆದುಹಾಕಿರುವುದು ಒಳ್ಳೆಯದು ಭೂಸುಧಾರಣೆ ತಿದ್ದುಪಡಿ ಕಾಯ್ದೆ ಮತ್ತು ಗೋಹತ್ಯೆ ವಿರೋಧಿ ಕಾಯ್ದೆ ಎರಡನ್ನೂ ರದ್ದುಗೊಳಿಸಬೇಕು. (ಭೂ ಸುಧಾರಣಾ ಕಾಯ್ದೆಯು ಕಾರ್ಪೊರೇಟ್‌ಗಳು ಮತ್ತು ಶ್ರೀಮಂತ ಕೈಗಾರಿಕೋದ್ಯಮಿಗಳ ಲಾಭಕ್ಕಾಗಿ ರೈತರ ಭೂಮಿಯನ್ನು ಕಸಿದುಕೊಂಡಿತು. ಗೋಹತ್ಯೆ ವಿರೋಧಿ ಕಾಯ್ದೆಯು ಗೋಹತ್ಯೆಗಾಗಿ ಗೋವುಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಿತು) ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ.

'ಸಿಎಂ ಸಿದ್ದರಾಮಯ್ಯ ಸಮವಸ್ತ್ರದಲ್ಲಿ ಹಿಜಾಬ್ ಹಾಕಿರುವುದು ಧಾರ್ಮಿಕ ಓಲೈಕೆ. ಸಿದ್ದರಾಮಯ್ಯನವರು ಮಾಡಬೇಕಾಗಿರುವುದು ಸಮವಸ್ತ್ರದಲ್ಲಿ ಬೇಡವಾದದ್ದನ್ನು ವಿಸ್ತರಿಸುವುದು. ಹಿಜಾಬ್, ಬಿಂದಿ/ತಿಲಕ/ ಪೇಟ/ಇಷ್ಟಲಿಂಗ/ಕ್ರಾಸ್/ಜನಿವಾರ/ಹೂಗಳು/ಎಲ್ಲಾ ಧಾರ್ಮಿಕ-ಸಾಂಸ್ಕೃತಿಕ ಗುರುತುಗಳು. ಸಮವಸ್ತ್ರದಲ್ಲಿ ಏಕರೂಪತೆಯನ್ನು ಕಾಪಾಡಿಕೊಳ್ಳಬೇಕು' ಎಂದು ಸಂದೇಶವನ್ನು ಹಂಚಿಕೊಂಡಿದ್ದಾರೆ.

ನಮಗೆ ಟಿಪ್ಪು ಸುಲ್ತಾನ ಪರ ಅನ್ನೋರು ಬ್ರಿಟಿಷರ ಬೂಟು ನೆಕ್ಕೋರು: ಬಿ.ಕೆ.ಹರಿಪ್ರಸಾದ್

ಪೆರಿಯಾರ್‌ ನೆನದ ನಟ ಚೇತನ್: 'ಈ ದಿನಾಂಕದಂದು(ಡಿ.24) 50 ವರ್ಷಗಳ ಹಿಂದೆ, ತಂದೆ ಪೆರಿಯಾರ್ ನಿಧನರಾದರು (1973). ಪೆರಿಯಾರ್ 15 ವರ್ಷಗಳಲ್ಲಿ 23 ಬಾರಿ ಜೈಲಿಗೆ ಹೋಗಿದ್ದರು. ಮತ್ತು ಅವರ ಸ್ವಂತ ಹೇಳಿಕೆಯಿಂದ ಒಟ್ಟು 80 ಬಾರಿ ಜೈಲಿಗೆ ಹೋಗಿದ್ದರು. ತಂದೆ ಪೆರಿಯಾರ್ ಅವರಂತೆ ಜೈಲಿಗೆ ಹೋಗಲು ನಾವು ಸಿದ್ಧರಾಗಿರಬೇಕು. ಕಾನೂನನ್ನು ಉಲ್ಲಂಘಿಸುವ ಮೂಲಕ ಅಲ್ಲ, ಅಧಿಕಾರಕ್ಕೆ ಸತ್ಯವನ್ನು ಹೇಳುವ ಮೂಲಕ 'ನೀವು ಕ್ರಾಂತಿಕಾರಿಯನ್ನು ಜೈಲಿಗಟ್ಟಬಹುದು; ಆದರೆ ನೀವು ಎಂದಿಗೂ ಕ್ರಾಂತಿಯನ್ನು ಜೈಲಿಗಟ್ಟಲು ಸಾಧ್ಯವಿಲ್ಲ’ ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ.

click me!