ಕೊಠಡಿಗಳಿಗೆ ಕೇಸರಿ ಬಣ್ಣ ಬಳಿದ್ರೆ ತಪ್ಪೇನು?: ಸಿಎಂ ಬೊಮ್ಮಾಯಿ

By Govindaraj S  |  First Published Nov 15, 2022, 7:51 AM IST

ವಿವೇಕ ತರಗತಿ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿದರೆ ತಪ್ಪೇನು? ರಾಷ್ಟಧ್ವಜದಲ್ಲೇ ಕೇಸರಿ ಬಣ್ಣ ಇದೆ. ಕೇಸರಿ ಕೂಡ ಒಂದು ಬಣ್ಣ. ವಿವೇಕ ಯೋಜನೆ ವಿವೇಕಾನಂದರ ಹೆಸರಿನಲ್ಲಿ ಮಾಡುತ್ತಿರುವ ಯೋಜನೆ. ಪ್ರತಿಯೊಂದನ್ನೂ ವಿವಾದ ಮಾಡುವುದು ಕಾಂಗ್ರೆಸ್‌ನವರ ಅಭ್ಯಾಸ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.


ಕಲಬುರಗಿ (ನ.15): ವಿವೇಕ ತರಗತಿ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿದರೆ ತಪ್ಪೇನು? ರಾಷ್ಟಧ್ವಜದಲ್ಲೇ ಕೇಸರಿ ಬಣ್ಣ ಇದೆ. ಕೇಸರಿ ಕೂಡ ಒಂದು ಬಣ್ಣ. ವಿವೇಕ ಯೋಜನೆ ವಿವೇಕಾನಂದರ ಹೆಸರಿನಲ್ಲಿ ಮಾಡುತ್ತಿರುವ ಯೋಜನೆ. ಪ್ರತಿಯೊಂದನ್ನೂ ವಿವಾದ ಮಾಡುವುದು ಕಾಂಗ್ರೆಸ್‌ನವರ ಅಭ್ಯಾಸ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕಲಬುರಗಿ ತಾಲೂಕಿನ ಮಾಡಿಯಾಳ್‌ ತಾಂಡಾದಲ್ಲಿ ಸೋಮವಾರ 7,601ವಿವೇಕ ಶಾಲಾ ಕೊಠಡಿಗಳ ನಿರ್ಮಾಣ ಯೋಜನೆಗೆ ಬೊಮ್ಮಾಯಿ ಸೋಮವಾರ ಚಾಲನೆ ನೀಡಿ ಹಾಗೂ ಸುದ್ದಿಗಾರರ ಜತೆಗೆ ಮಾತನಾಡಿದರು. 

ವಿವೇಕ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವ ಕ್ರಮವನ್ನು ಸಮರ್ಥಿಸಿಕೊಂಡರು. ರಾಷ್ಟ್ರ ಧ್ವಜದಲ್ಲಿ ಕೇಸರಿ ಬಣ್ಣ ಇಲ್ಲವೆ? ನಾವು ಕೇಸರಿಯನ್ನು ಅತ್ಯುಚ್ಚ ಧ್ವಜದಲ್ಲೇ ಸ್ವೀಕರಿಸಿದವರು. ಹೀಗಾಗಿ ಕೇಸರಿ ಬಣ್ಣದ ಬಗ್ಗೆ ಯಾಕೆ ಚರ್ಚೆ? ಕೊಠಡಿಗಳಿಗೆ ಯಾವ ಬಣ್ಣ ಬಳಿಯೋದು ಎಂಬ ಚರ್ಚೆಗಿಂತ ಮೂಲ ಸವಲತ್ತು ಯಾವ ರೂಪದಲ್ಲಿ ನೀಡೋಣ ಎಂಬುದರ ಬಗ್ಗೆ ಚರ್ಚೆ ಮಾಡೋಣ. ಮಕ್ಕಳು ಶಿಕ್ಷಣ ಕಲಿತು ನಾಡಿನ ಭವಿಷ್ಯವಾಗಿ ಹೊರಹೊಮ್ಮಲಿ ಅಷ್ಟೆಎಂದರು.

Tap to resize

Latest Videos

ಒಂದು ತಿಂಗಳಲ್ಲಿ 20 ಸಾವಿರ ಮನೆ ನಿರ್ಮಾಣ: ಸಿಎಂ ಬೊಮ್ಮಾಯಿ

ಯಾವ ಬಣ್ಣ ಎಂಬುದು ನಿರ್ಣಯ ಆಗಿಲ್ಲ: ವಿವೇಕ ಶಾಲಾ ಕೊಠಡಿಗಳಿಗೆ ಯಾವ ಬಣ್ಣ ಬಳಿಯಬೇಕೆಂಬುದು ಈವರೆಗೂ ನಿರ್ಣಯವಾಗಿಲ್ಲ. ಎಂಜಿನಿಯರ್‌ಗಳು ಮತ್ತು ಆರ್ಕಿಟೆಕ್ಟ್ಗಳು ಕೇಸರಿ ಬಣ್ಣ ಬಳಿಯುವುದು ಸೂಕ್ತ ಎಂದರೆ ಆ ಬಣ್ಣ ಹಾಕಲು ಹಿಂದೇಟು ಹಾಕಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದರು. ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವ ವಿಚಾರವಾಗಿ ಕಾಂಗ್ರೆಸ್‌ನಿಂದ ವ್ಯಕ್ತವಾಗುತ್ತಿರುವ ಟೀಕೆಗಳಿಗೆ ಸಂಬಂಧಿಸಿ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೇಸರಿ ತ್ಯಾಗದ, ಜ್ಞಾನದ ಸಂಕೇತ. ಇದನ್ನೇ ಮುಂದಿಟ್ಟುಕೊಂಡು ಕೇಸರೀಕರಣದ ಹುನ್ನಾರ ಎಂದು ಆರೋಪಿಸುವುದು ದುರದೃಷ್ಟಕರ. 

ಅವರು ಯಾವತ್ತೂ ಅಭಿವೃದ್ಧಿ ಮಾಡುವುದಿಲ್ಲ, ಬೇರೆಯವರು ಮಾಡುವುದನ್ನೂ ಸಹಿಸುವುದಿಲ್ಲ. ಇದು ಕಾಂಗ್ರೆಸ್‌ನ ಮನಸ್ಥಿತಿ. ಕಾಂಗ್ರೆಸ್‌ ಯಾವತ್ತೂ ಶಿಕ್ಷಣಕ್ಕೆ ಒತ್ತುಕೊಟ್ಟಿಲ್ಲ, ಓಲೈಕೆ ರಾಜಕಾರಣ ಮಾಡಿಕೊಂಡೇ ಬಂದವರು ಅವರು ಎಂದು ಕಿಡಿಕಾರಿದರು. ಮುಂದಿನ ಬಾರಿಯೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ಮುಂದಿನ 3 ವರ್ಷಗಳಲ್ಲಿ ಪ್ರತಿ ವರ್ಷ 8,000 ಶಾಲಾ ಕೊಠಡಿಗಳನ್ನು ನಿರ್ಮಿಸುತ್ತೇವೆ. 

ಏರ್‌ಪೋರ್ಟ್‌ಗೆ ಕೆಂಪೇಗೌಡ ಹೆಸರಿಟ್ಟಿದ್ದು ನಾವು: ಸಿಎಂ ಬೊಮ್ಮಾಯಿ

ಇದರ ಭಾಗವಾಗಿ ಪ್ರಸಕ್ತ ಸಾಲಿನ 8,000 ಕೊಠಡಿ ನಿರ್ಮಾಣ ಗುರಿ ಪೈಕಿ ಇದೀಗ ರಾಜ್ಯದಾದ್ಯಂತ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ 7,601 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಎಲ್ಲ ಕೊಠಡಿಗಳು ಇದೇ ವರ್ಷ ನಿರ್ಮಾಣವಾಗಲಿವೆ. ಇದರಲ್ಲಿ 2,000 ಕೊಠಡಿ ಕಲ್ಯಾಣ ಕರ್ನಾಟಕದಲ್ಲೇ ನಿರ್ಮಾಣವಾಗುತ್ತಿದೆ ಎಂದು ಬೊಮ್ಮಾಯಿ ಹೇಳಿದರು. ನಾವು ರಾಜ್ಯದ ಅಂಗನವಾಡಿ ಕಟ್ಟಡಗಳ ಕೊರತೆಯನ್ನೂ ನೀಗಿಸುವ ಪಣ ಹೊಂದಿದ್ದೇವೆ. ತಲಾ .15 ಲಕ್ಷದಂತೆ 4 ಸಾವಿರ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಮುಂದಾಗಿದ್ದು, ಈ ಪೈಕಿ 1,500 ಅಂಗನವಾಡಿಗಳು ಕಲ್ಯಾಣ ನಾಡಿಗೆ ಸೇರಿವೆ ಎಂದರು.

click me!