ಜಿಲ್ಲೆಯ ಕೊಂಡಜ್ಜಿ ಬಳಿ ಇರುವ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಅನೇಕ ಮನರಂಜನಾ ಆಟಗಳು ಮತ್ತು ಚಟುವಟಿಕೆಗಳನ್ನು ಮಕ್ಕಳು ಆನಂದಿಸಿದರು.
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್, ದಾವಣಗೆರೆ
ದಾವಣಗೆರೆ (ನ.15): ಜಿಲ್ಲೆಯ ಕೊಂಡಜ್ಜಿ ಬಳಿ ಇರುವ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಅನೇಕ ಮನರಂಜನಾ ಆಟಗಳು ಮತ್ತು ಚಟುವಟಿಕೆಗಳನ್ನು ಮಕ್ಕಳು ಆನಂದಿಸಿದರು. ಶಾಲೆಯು ವಿದ್ಯಾರ್ಥಿಗಳ ಅಭಿಪ್ರಾಯದ ಶಾಲಾ ನೀತಿಗಳನ್ನು ರೂಪಿಸಲು 'ಶಾಲಾ ಸಂಸತ್ತು' ಆಯೋಜಿಸಿತ್ತು. ಗುಂಪಿನ ಚಲನಶೀಲತೆಯನ್ನು ಉತ್ತೇಜಿಸಲು ಬೀನ್ ಬ್ಯಾಗ್ ಬ್ಯಾಲೆನ್ಸಿಂಗ್, ಪ್ಯಾರಾಚೂಟ್, ಒಂದು ನಿಮಿಷದ ಆಟಗಳನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಡಿವೈಎಸ್ಪಿ ಪಿ.ಬಿ.ಪ್ರಕಾಶ್, ಡಿ.ಎ.ಆರ್. ಅವರು ವಿದ್ಯಾರ್ಥಿ ಜೀವನದ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಎಪಿಜೆ ಅಬ್ದುಲ್ ಕಲಾಂ ಮಕ್ಕಳಿಗೆ ದೊಡ್ಡ ಕನಸುಗಳನ್ನು ಕಾಣಿರಿ ಮತ್ತು ಅವುಗಳನ್ನು ಸಾಧಿಸಲು ಶ್ರಮಿಸಬೇಕು ಎಂಬ ಮಾತುಗಳನ್ನು ನೆನಪಿಸಿಕೊಂಡರು. ಜವಾಹರಲಾಲ್ ನೆಹರು ಸ್ವತಂತ್ರ ಭಾರತವನ್ನು ಭಾರತದ ಮೊದಲ ಪ್ರಧಾನ ಮಂತ್ರಿಯಾಗಿ ಹೇಗೆ ಮುನ್ನಡೆಸಿದರು ಎಂಬುದನ್ನು ಅವರು ವಿವರಿಸಿದರು.
ಹೊಲಕ್ಕೆ ಹೋಗುವ ರೈತರನ್ನು ಸಾಯಿಸುವ ಕಣಜ ಹುಳು
ನೆಹರೂ ಯಾವಾಗಲೂ ತಮ್ಮನ್ನು ಭಾರತದ ಪ್ರಧಾನ ಮಂತ್ರಿ ಎನ್ನುವುದಕ್ಕಿಂತ ದೇಶ ಸೇವೆಯ ಮೊದಲ ಸೇವಕ ಎಂದು ಕರೆದುಕೊಳ್ಳುತ್ತಿದ್ದರು. ಭಾರತವನ್ನು ಪುನರ್ನಿರ್ಮಾಣ ಮಾಡುವಲ್ಲಿ ನೆಹರೂ ಅವರ ಪಾತ್ರವನ್ನು ಅವರು ನೆನಪಿಸಿಕೊಂಡರು. ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ಒಳ್ಳೆಯದನ್ನು ನೋಡಬೇಕು, ಒಳ್ಳೆಯದನ್ನು ಕೇಳಬೇಕು ಮತ್ತು ಯಾವಾಗಲೂ ಒಳ್ಳೆಯದನ್ನು ಮಾಡಬೇಕೆಂದು ವಿದ್ಯಾರ್ಥಿಗಳಿಂದ ಪ್ರತಿಜ್ಞೆ ಪಡೆದರು. ಇ-ಆ್ಯಪ್‌ಗಳು ಮತ್ತು ಇಂಟರ್ನೆಟ್‌ನಲ್ಲಿ ಸಮಯ ಕಳೆಯುವುದಕ್ಕಿಂತ ಉತ್ತಮ ಪುಸ್ತಕಗಳನ್ನು ಓದುವುದರಲ್ಲಿ ಹೆಚ್ಚು ಸಮಯ ಕಳೆಯಬೇಕೆಂದು ಅವರು ಮಕ್ಕಳಿಗೆ ಸಲಹೆ ನೀಡಿದರು.
ಜವಾಹರಲಾಲ್ ನೆಹರು ಅವರಂತೆ ಉತ್ತಮ ವಾಗ್ಮಿ ಮತ್ತು ಓದುಗನಾಗಲು ಓದುವ ಸಂವಹನ ಕೌಶಲ್ಯವನ್ನು ಅಭಿವೃದ್ಧಿಪಡಿಸಿ ಕೊಳ್ಳಬೇಕೆಂದು ಪ್ರಾಂಶುಪಾಲ ಶ್ರೀ ಯತೀಶ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಶ್ರೀಮತಿ ಸಲ್ಮಾ ಬಾನು, ಶ್ರೀಮತಿ ಗೌಸಿಯಾ ಸುಲ್ತಾನಾ, ಶ್ರೀಮತಿ ಲತಾ ಮತ್ತು ಶ್ರೀ ರಾಜಾ ನಾಯ್ಕ್ ಅವರು ಸಂಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನೆ: ಕಲಿಯುವ ಹಂತದ ಮಕ್ಕಳಿಗೆ ವಿಜ್ಞಾನ ವಸ್ತು ಪ್ರದರ್ಶನಗಳು ವೈಜ್ಞಾನಿಕ ಮನೋಭಾವನೆ ಮೂಡಲು ತುಂಬಾ ಸಹಕಾರಿ ಎಂದು ಶಿಕ್ಷಣ ಇಲಾಖೆ ಜಿಲ್ಲಾ ನೋಡಲ್ ಅಧಿಕಾರಿ ಎನ್.ವೈ.ಪೂರ್ಣಿಮಾ ಹೇಳಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟಗಳು ಮತ್ತು ಪ್ರಕೃತಿಯಲ್ಲಿ ನಡೆಯುವ ವಿಸ್ಮಯಗಳ ಬಗ್ಗೆ ಕುತೂಹಲ ಮೂಡಿಸಲು ವಿಜ್ಞಾನ ವಸ್ತು ಪ್ರದರ್ಶನಗಳು ವಿಧ್ಯಾರ್ಥಿಗಳ ಮನೋವಿಕಾಸವಾಗಲು ಕಾರಣವಾಗುತ್ತವೆ ಎಂದರು.
ಚಂದ್ರು ಸಾವಿನ ಸಮಗ್ರ ವರದಿಗೆ ಕಾಯುತ್ತಿರುವೆ: ರೇಣುಕಾಚಾರ್ಯ
ಕ್ಷೇತ್ರ ಸಮನ್ವಯಾಧಿಕಾರಿ ಡಾ.ಎಸ್.ಶಂಕರಪ್ಪ ಮಾತನಾಡಿ ಮಕ್ಕಳಲ್ಲಿ ವೈಜ್ಞಾನಿಕ ಚಟುವಟಿಕೆಗಳ ಬಗ್ಗೆ ಆಸಕ್ತಿ ವಹಿಸುವಂತೆ ಮಾಡಲು ವಿಜ್ಞಾನ ವಸ್ತು ಪ್ರದರ್ಶನಗಳು ತುಂಬಾ ಸಹಕಾರಿ ಎಂದರು. ಸಮಾರಂಭದ ಅಧ್ಯಕ್ಷತೆ ಕಾಲೇಜಿನ ಉಪ ಪ್ರಾಚಾರ್ಯ ಲೋಹಿತಾಶ್ವ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯಪ್ರಕಾಶ್, ಕಾರ್ಯದರ್ಶಿ ರಾಮಚಂದ್ರಪ್ಪ, ಪರಮೇಶ್ವರಪ್ಪ, ಮಹೇಶ್, ಕೃಷ್ಣಮೂರ್ತಿ, ಮಲ್ಲೇಶಪ್ಪ ಮತ್ತು ತಾಲೂಕಿನ ವಿವಿಧ ಪ್ರದೇಶಗಳಲ್ಲಿನ 58ಪ್ರೌಢಶಾಲೆಗಳ ವಿಧ್ಯಾರ್ಥಿಗಳು ಮತ್ತು ಶಿಕ್ಷಕರಿದ್ದರು.