ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನರಿಗೆ ಶುಭ ಸುದ್ಧಿ. ಹುಬ್ಬಳ್ಳಿ-ದೆಹಲಿ ಮಧ್ಯೆ ವಿಮಾನ ಸೇವೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ವಿದ್ಯುಕ್ತವಾಗಿ ಚಾಲನೆ ನೀಡಿದರು.
ಹುಬ್ಬಳ್ಳಿ (ನ.15): ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನರಿಗೆ ಶುಭ ಸುದ್ಧಿ. ಹುಬ್ಬಳ್ಳಿ-ದೆಹಲಿ ಮಧ್ಯೆ ವಿಮಾನ ಸೇವೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ವಿದ್ಯುಕ್ತವಾಗಿ ಚಾಲನೆ ನೀಡಿದರು. ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡ ಸೇವೆಗಳು ಕೋವಿಡ್ ನಂತರದಲ್ಲಿ ಚೇತರಿಸಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಬಹುದಿನಗಳ ಬೇಡಿಕೆಯಾಗಿದ್ದ ಹುಬ್ಬಳ್ಳಿ-ದೆಹಲಿ ವಿಮಾನ ಸೇವೆ ಆರಂಭಗೊಂಡಿದೆ. ಅಲ್ಲದೇ ಇಂದಿನಿಂದ ಹುಬ್ಬಳ್ಳಿ-ದೆಹಲಿ ದೈನಂದಿನ ವಿಮಾನ ಸೇವೆ ದೊರೆಯಲಿದೆ.
ಇನ್ನೂ ಅದೇ ವಿಮಾನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ದೆಹಲಿಗೆ ತೆರಳಿದರು. ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಹ್ಲಾದ್ ಜೋಶಿ ದೆಹಲಿ ವಿಮಾನದಾಗ ಗಂಡುಮೆಟ್ಟಿದ ನಾಡಿನ ಭಾಷಾ ಸೊಗಡು ಎಂದು, ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಕನ್ನಡದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಷೆಯಲ್ಲಿ ಅನೌನ್ಸ್‌ಮೆಂಟ್ ಮಾಡುವ ವಿಡಿಯೋ ಹಂಚಿಕೊಂಡಿದ್ದಾರೆ.
ಚುನಾವಣೆ ಬಂದಾಗಲೆಲ್ಲಾ ಸಿದ್ದು ಅಬ್ಬೇಪಾರಿ: ಪ್ರಹ್ಲಾದ್ ಜೋಶಿ ಲೇವಡಿ
ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನ ಸೇವಾ ಚಾಲೂ ಆತು ಅನ್ನೋದ ಒಂದ ವಿಶೇಷ ಆದ್ರ, ಫ್ಲೈಟ್ ಅನೌನ್ಸ್‌ಮೆಂಟ್ ಸಹ ನಮ್ಮ ಉತ್ತರ ಕರ್ನಾಟಕ ಭಾಷಾದಾಗ ಆಗಿದ್ದು ಇನ್ನೊಂದ ವಿಶೇಷ ಅಂತ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮ ಬೈಲಹೊಂಗಲದವ್ರೇ ಆದ ಅಕ್ಷಯ್ ಪಾಟೀಲ್ ಇವತ್ತಿನ ವಿಮಾನದ ಪೈಲೆಟ್ ಆಗಿದ್ರಿಂದ ಸ್ವಚ್ಛ ಉತ್ತರ ಕರ್ನಾಟಕ ಭಾಷಾದಾಗ ಎಲ್ಲಾ ಪ್ರಯಾಣೀಕರಿಗೆ ಸ್ವಾಗತ ಮಾಡಿ, ರಾಷ್ಟ್ರ ರಾಜಧಾನಿಗೆ ಕರಕೊಂಡ ಹೋದ್ರು. ಇದರಕಿಂತ ಹೆಚ್ಚಿನ ಖುಷಿ ಏನ ಬೇಕ ಹೇಳ್ರಿ.? ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬರೆದುಕೊಂಡಿದ್ದಾರೆ.
ದೆಹಲಿ ವಿಮಾನದಾಗ ಗಂಡುಮೆಟ್ಟಿದ ನಾಡಿನ ಭಾಷಾ ಸೊಗಡು
ನಮ್ಮ ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನ ಸೇವಾ ಚಾಲೂ ಆತು ಅನ್ನೋದ ಒಂದ ವಿಶೇಷ ಆದ್ರ, ಫ್ಲೈಟ್ ಅನೌನ್ಸ್‌ಮೆಂಟ್ ಸಹ ನಮ್ಮ ಉತ್ತರ ಕರ್ನಾಟಕ ಭಾಷಾದಾಗ ಆಗಿದ್ದು ಇನ್ನೊಂದ ವಿಶೇಷ. pic.twitter.com/WlrpmR6nSQ