ಜಾನಿ ಮಾಸ್ಟರ್ ಎಂಬುವವರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಿದ್ರು. ಆದರೆ ಅವರ ಮೇಲೆ ಪೋಕ್ಸೊ ಕೇಸ್ ದಾಖಲಾಗ್ತಿದ್ದಂತೆ ಜಾನಿ ಮಾಸ್ಟರ್ ಅವರಿಗೆ ನೀಡಿದ್ದ ಪ್ರಶಸ್ತಿ ವಾಪಸ್ ಪಡೆಯುವ ಮೂಲಕ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದೆ ಇದಕ್ಕಾಗಿ ನಾನು ಅಭಿನಂದನೆ ಆದರೆ ಯಡಿಯೂರಪ್ಪರ ಮೇಲೆ ಏನು ಕ್ರಮ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೇಂದ್ರ ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.
ಬೆಂಗಳೂರು (ಅ.8): ಜಾನಿ ಮಾಸ್ಟರ್ ಎಂಬುವವರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಿದ್ರು. ಆದರೆ ಅವರ ಮೇಲೆ ಪೋಕ್ಸೊ ಕೇಸ್ ದಾಖಲಾಗ್ತಿದ್ದಂತೆ ಜಾನಿ ಮಾಸ್ಟರ್ ಅವರಿಗೆ ನೀಡಿದ್ದ ಪ್ರಶಸ್ತಿ ವಾಪಸ್ ಪಡೆಯುವ ಮೂಲಕ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದೆ ಇದಕ್ಕಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಇಂದು ಸುದ್ದಿಗೋಷ್ಠಿ ಕರೆದು ಮಾತನಾಡಿದ ಸಚಿವರು, ದೇಶದಲ್ಲಿ ಮಹಿಳೆಯರಿಗೆ ಮುಕ್ತ ವಾತಾವರಣ ನಿರ್ಮಾಣವಾಗಬೇಕು. ಎಲ್ಲ ವಲಯದಲ್ಲಿ ಮಹಿಳೆಯರು ಮುಂದೆ ಬರಬೇಕು. ಜಾನಿ ಮಾಸ್ಟರ್ ಮೇಲೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಆದ್ರೆ ಅವರದ್ದೇ ಪಕ್ಷದ ನಾಯಕನ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
undefined
ಮಾಜಿ ಸಿಎಂ ಯಡಿಯೂರಪ್ಪ ಅವರ ಮೇಲೆ ಪೋಕ್ಸೊ ಕೇಸ್ ಇದೆ. ಆ ಪ್ರಕರಣದಲ್ಲಿ ಈಗಾಗಲೇ ತನಿಖೆ ಕೂಡ ನಡೆಯುತ್ತಿದೆ. ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಪೋಕ್ಸೋ ಕೇಸ್ ಸಾಮಾನ್ಯ ವಿಚಾರವಲ್ಲ. ಆದರೆ ಬಿಜೆಪಿ ಬಹಳ ಹಗುರವಾಗಿ ತೆಗೆದುಕೊಂಡಿದ್ದಾರೆ. ತಮ್ಮ ಪಕ್ಷದ ಒಬ್ಬ ವ್ಯಕ್ತಿಯ ಮೇಲೆ ಇಂತಹ ಆರೋಪ ಬಂದಾಗ ಬಿಜೆಪಿ ಯಾಕೆ ಮೌನವಹಿಸಿದೆ. ಅವರು ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯರಿದ್ದಾರೆ. ಇವರನ್ನು ತೆಗೆದುಹಾಕುತ್ತೇವೆ ಎಂಬ ನಿಲುವು ಯಾಕೆ ಬಂದಿಲ್ಲ. ಮಾತನಾಡದೆ ಮೌನವಹಿಸಿರುವುದು ಎಷ್ಟು ಸರಿ ಎಂದು ಕೇಂದ್ರ ಬಿಜೆಪಿ ನಾಯಕರಿಗೆ ಪ್ರಶ್ನಿಸಿದರು.
'ವಕ್ಫ್ ಆಸ್ತಿ ಯತ್ನಾಳ್ ಅಪ್ಪಂದು ಅಲ್ಲ..'; ಸಚಿವ ಜಮೀರ್ ಹೇಳಿಕೆಗೆ ಯತ್ನಾಳ್ ತಿರುಗೇಟು
ಯಡಿಯೂರಪ್ಪ ಪರ ಕೋರ್ಟ್ ತೀರ್ಪು ಬಂದರೆ ಆಗ ಏನೂ ಮಾಡಲಾಗದು. ಆದರೆ ಯಡಿಯೂರಪ್ಪ ಮೇಲೆ ಏನೂ ಕ್ರಮ ಇಲ್ಲ ಅಂದ್ರೆ ಹೇಗೆ? ಯಡಿಯೂರಪ್ಪ ಮಗ ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದಾನೆ. ಅದೇ ವಿಜಯೇಂದ್ರ ಬೀದಿಯಲ್ಲಿ ನಿಂತು ಕಂಡ ಕಂಡವರ ಮೇಲೆ ಆರೋಪ ಮಾಡ್ತಾರೆ. ಆದರೆ ಅವರದೇ ಮನೆಯಲ್ಲಿ ಅವರ ಅಪ್ಪನ ಮೇಲೇಯೇ ಹೀಗೆ ಆರೋಪ ಬಂದಾಗ ವಿಜಯೇಂದ್ರಗೆ ಗೊತ್ತಾಗುವುದಿಲ್ವಾ? ವಿಜಯೇಂದ್ರ ಎಲ್ಲರನ್ನೂ ಅವರು ಭ್ರಷ್ಟ ಇವರು ಭ್ರಷ್ಟ ಅಂತಾ ಹೇಳ್ತಾ ಇರ್ತಾರೆ ವಿಚಾರದಲ್ಲಿ ವಿಜಯೇಂದ್ರಗೆ ಮಾಹಿತಿ ಇಲ್ವ? ಯಡಿಯೂರಪ್ಪರನ್ನು ಯಾರೂ ಪ್ರಶ್ನೆ ಮಾಡುವಂತಿಲ್ವಾ? ವಿಜಯೇಂದ್ರಗೆ ಯಾರೂ ಏನೂ ಕೇಳೋ ಹಾಗಿಲ್ವಾ? ಯಡಿಯೂರಪ್ಪರನ್ನು ಅವರ ಹುದ್ದೆಯಿಂದ ಬಿಜೆಪಿ ಇಳಿಸಬೇಕು. ಆಗ ಸಮಾಜಕ್ಕೆ ಒಂದು ಸಂದೇಶ ರವಾನಿಸಿದಂತಾಗುತ್ತೆ. ಇಂಥ ಆರೋಪಗಳು ಬಂದಾಗ ನಾವು ಯಾರೂ ಸಮರ್ಥನೆ ಮಾಡಿಕೊಳ್ಳಬಾರದು. ವಿಜಯೇಂದ್ರ ಹೇಗೆ ಅಧ್ಯಕ್ಷರಾದರು? ಯಾವ ಮಾನದಂಡದ ಮೇಲೆ ಅಧ್ಯಕ್ಷರಾದರು? ಇದರ ಹಿಂದಿನ ಮರ್ಮ ಏನು ಎಂದು ಪ್ರಶ್ನಿಸಿದರು.
ವಿಜಯೇಂದ್ರ ಮೊದಲು ಅವರ ತಂದೆ ಯಡಿಯೂರಪ್ಪನವರ ಭ್ರಷ್ಟಾಚಾರದ ವಿರುದ್ದ ಹೋರಾಡಲಿ : ದಿನೇಶ್ ಗುಂಡೂರಾವ್
ಪ್ರಶ್ನೆಗಳ ಸುರಿಮಳೆಗೈದರು.
ಹಿಂದೆ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡಿದರು. ಆ ವೇಳೆ ವಿನೇಶಾ ಪೋಗಟ್, ಸಾಕ್ಷಿ ಮಲ್ಲಿಕ್ ಮೇಲೆ ದಾಳಿ ಆಗಿತ್ತು. ಆ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಜಾನಿ ಮಾಸ್ಟರ್ ಮೇಲೆ ತೆಗೆದುಕೊಂಡಂತಹ ದಿಟ್ಟ ನಿಲುವು ಏನೂ ತೆಗೆದುಕೊಳ್ಳಲಿಲ್ಲ. ಬಿಜೆಪಿಯನ್ನು ಕೆಲವರು ಬಲತ್ಕಾರಿ ಜನತಾ ಪಾರ್ಟಿ ಅಂತಾರೆ, ಆದರೆ ನಾನು ಹಾಗೆ ಹೇಳಲು ಇಷ್ಟ ಪಡುವುದಿಲ್ಲ. ಜಾನಿ ಮಾಸ್ಟರ್ ಗೆ ಒಂದು ತೀರ್ಮಾನ ಯಡಿಯೂರಪ್ಪ ವಿಷಯದಲ್ಲಿ ಒಂದು ತೀರ್ಮಾನನಾ? ಎಂದರು ಪ್ರಶ್ನಿಸಿದರು.