'ವಕ್ಫ್ ಆಸ್ತಿ ಯತ್ನಾಳ್ ಅಪ್ಪಂದು ಅಲ್ಲ..'; ಸಚಿವ ಜಮೀರ್ ಹೇಳಿಕೆಗೆ ಯತ್ನಾಳ್ ತಿರುಗೇಟು

By Ravi Janekal  |  First Published Oct 8, 2024, 7:38 PM IST

ಅಪ್ಪನಿಂದ ಬಂದ ಆಸ್ತಿ ಕಾನೂನು ಬದ್ಧವಾಗಿರುತ್ತೆ. ಯಾರದೋ ಅಪ್ಪನ ಆಸ್ತಿಯನ್ನು ನಮ್ಮದು ಎಂದು ಹೇಳುವ ವಕ್ಫ್ ಪರಿಕಲ್ಪನೆ/ ಕಾನೂನು ಮತ್ತು  ಅಸಂವಿಧಾನಿಕ ಹಾಗೂ ಕಾನೂನು ಬಾಹಿರವಾಗಿದೆ ಎಂದು ಸಚಿವ ಜಮೀರ್ ಅಹ್ಮದ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.


ವಿಜಯಪುರ (ಅ.8): ಅಪ್ಪನಿಂದ ಬಂದ ಆಸ್ತಿ ಕಾನೂನು ಬದ್ಧವಾಗಿರುತ್ತೆ. ಯಾರದೋ ಅಪ್ಪನ ಆಸ್ತಿಯನ್ನು ನಮ್ಮದು ಎಂದು ಹೇಳುವ ವಕ್ಫ್ ಪರಿಕಲ್ಪನೆ/ ಕಾನೂನು ಮತ್ತು  ಅಸಂವಿಧಾನಿಕ ಹಾಗೂ ಕಾನೂನು ಬಾಹಿರವಾಗಿದೆ ಎಂದು ಸಚಿವ ಜಮೀರ್ ಅಹ್ಮದ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ವಕ್ಫ್ ಯತ್ನಾಳ್ ಅಪ್ಪನ ಆಸ್ತಿ ಅಲ್ಲ ಎಂಬ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಟ್ವೀಟರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ.

Tap to resize

Latest Videos

undefined

ಬಿಜೆಪಿ ಚಾರ್‌ ಸೌ ಪಾರ್‌ ಅಂತಾ ಇತ್ತು, ಅಲ್ಲಾ ಮಿಯಾ ಅವರನ್ನ 240ಕ್ಕೆ ತಂದು ನಿಲ್ಸಿದ್ದಾನೆ: ಜಮೀರ್‌ ಅಹ್ಮದ್‌

ಏನಿದೆ ಟ್ವೀಟರ್ ಎಕ್ಸ್‌ ಪೊಸ್ಟ್.

ಜಮೀರ್ ಅವರೇ, ದೇಣಿಗೆ ಪಡೆದು ಇಂದು ವಕ್ಫ್ ಭಾರತದ ಮೂರನೇ ಅತಿದೊಡ್ಡ ಭೂಒಡೆಯ ಆಗಿದೆಯಾ? ಇದನ್ನು ನಂಬುವುದಕ್ಕೆ ಸಾಧ್ಯವಿದೆಯೇ?  ವಕ್ಫ್ ನಿಂದ ಆರ್ಥಿಕ ಸಮಾನತೆ ಸಾಧ್ಯವಿದೆಯೇ? ಅಸಲಿಗೆ, ವಕ್ಫ್ ನಂತ ಕಾಯ್ದೆ ಮುಸ್ಲಿಂ ಬಾಹುಳ್ಯ ದೇಶಗಳಲ್ಲೇ ಇಲ್ಲ. ಹೀಗಿರುವಾಗ ಜಾತ್ಯತೀತ ದೇಶವಾದ ಭಾರತದಲ್ಲಿ ಏಕೆ ಬೇಕು? ಎಂದು ಪ್ರಶ್ನಿಸಿದ್ದಾರೆ. 

ಮೊದಲು ರೋಷಾವೇಶದಿಂದ ಟೀಕೆ ಮಾಡುವ ಮುನ್ನ ಸತ್ಯಾಸತ್ಯತೆಯನ್ನು ಪರಾಮರ್ಶಿಸಿ. ಜಾತ್ಯತೀತ ರಾಷ್ಟ್ರದಲ್ಲಿ ವಕ್ಫ್ ಕಾನೂನುಗಳು ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸುತ್ತವೆ ಎಂಬುದನ್ನು ತಿಳಿಯಿರಿ. ಸಿಕ್ಕ, ಸಿಕ್ಕ ಭೂಮಿ ನಮ್ಮದು ಎಂದು ನಿಮ್ಮ ಷರಿಯಾ ಕಾನೂನನ್ನು ಇಲ್ಲಿ ಅನ್ವಯಗೊಳಿಸಲು ಇದು ಇರಾನ್ ಅಥವಾ ಟರ್ಕಿ ಅಲ್ಲ. ಇದು ಭಾರತ. ಜವಾಬ್ದಾರಿಯುತ ಸಚಿವರಾಗಿ,  ಪ್ರಬುದ್ಧತೆಯಿಂದ ಮಾತನಾಡಿ. ಸಚಿವರಾಗಿ ಮಾತಿನಲ್ಲಿ ತೂಕವಿರಬೇಕು. ಇಲ್ಲದಿದ್ರೆ ಕುಂಟುತ್ತಿರುವ ನಿಮ್ಮ ಘನತೆಗೆ ಸರಿಯಾದೀತು ಎಂದು ಎಚ್ಚರಿಸಿದ್ದಾರೆ.

ವಕ್ಫ್ ತಿದ್ದುಪಡಿ ಮಸೂದೆ: ಝಾಕಿರ್ ನಾಯ್ಕ್ ಪಿತೂರಿಯಲ್ಲಿ ಸಿಲುಕಿದ ಭಾರತೀಯ ಮುಸ್ಲಿಮರು!

ವಿಜಯಪುರದಲ್ಲಿ ಸೋಮವಾರ ನಡೆದ  ವಕ್ಫ್ ಆಸ್ತಿಗೆ ಸಂಬಂಧಿಸಿ ಆಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಯತ್ನಾಳ್ ವಿರುದ್ಧ ಹರಿಹಾಯ್ದಿದ್ದ ಸಚಿವ ಜಮೀರ್ ಅಹ್ಮದ್, ವಕ್ಫ್ ಆಸ್ತಿ ಯತ್ನಾಳ್ ಅಪ್ಪಂದು ಅಲ್ಲ, ನಮ್ಮ ಅಪ್ಪಂದು ಅಲ್ಲ. ಸಮಾಜಕ್ಕೆ ಒಳ್ಳೆಯದಾಗಲಿ ಎಂದು ಜನರು ದಾನ ಕೊಟ್ಟಿರೋದು ಎಂದಿದ್ದ ಸಚಿವ. ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಟ್ವೀಟರ್ ಎಕ್ಸ್ ಮೂಲಕ ತಿರುಗೇಟು ನೀಡಿರುವ ಯತ್ನಾಳ್. ಸಮಾಜದ ಒಳಿತಿಗೆ ಅಷ್ಟೊಂದು ಭೂಮಿ ದಾನ ಮಾಡಲು ಸಾಧ್ಯವೇ? ಇದನ್ನ ನಂಬಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. 

click me!