Latest Videos

ಚಿಕ್ಕಮಗಳೂರು: ಮಳೆ ಅನಾಹುತ ತಡೆಯಲು ಜಿಲ್ಲಾಡಳಿತ ಸಜ್ಜು!

By Suvarna NewsFirst Published Jun 17, 2024, 9:18 PM IST
Highlights

ಮುಂಗಾರಿನಲ್ಲಿ ಅತಿವೃಷ್ಟಿಯಿಂದಾಗಿ ಅನಾಹುತಗಳು ಸಂಭವಿಸುವ ಪ್ರದೇಶಗಳ ಗುರುತು ಪಡಿಸಿ  ತಾತ್ಕಾಲಿಕ ಆಶ್ರಯ ತಾಣಗಳ ನಿರ್ಮಾಣ ಅಗತ್ಯ ಸಿಬ್ಬಂದಿ ಹಾಗೂ ಸಲಕರಣಗೆಗಳೊಂದಿಗೆ ಚಿಕ್ಕಮಗಳೂರು ಜಿಲ್ಲಾಡಳಿತ ಸಜ್ಜುಗೊಂಡಿದೆ.

ವರದಿ : ಆಲ್ದೂರು ಕಿರಣ್ 

ಚಿಕ್ಕಮಗಳೂರು (ಜೂ.17): ಮುಂಗಾರು ವೇಳೆ ಮಲೆನಾಡಿನಲ್ಲಿ ಉಂಟಾಗುವ ಅನಾಹುತಗಳನ್ನು ಎದುರಿಸಲು ಚಿಕ್ಕಮಗಳೂರು ಜಿಲ್ಲಾಡಳಿತ ಸಿದ್ದತೆ  ಮಾಡಿಕೊಂಡಿದೆ.ಈ ಬಾರಿಯ ಮುಂಗಾರಿನಲ್ಲಿ ಅತೀವೃಷ್ಠಿಯಿಂದಾಗಿ ಅನಾಹುತಗಳು ಸಂಭವಿಸಹುದಾದ 94 ದುರ್ಬಲ ಪ್ರದೇಶಗಳನ್ನು ಮುಂಜಾಗ್ರತೆಯಾಗಿ ಗುರುತಿಸಿರುವ ಜಿಲ್ಲಾಡಳಿತ ಒಟ್ಟು 67 ಕಡೆಗಳಲ್ಲಿ ತಾತ್ಕಾಲಿಕ ಆಶ್ರಯ ತಾಣಗಳನ್ನು ನಿರ್ಮಿಸಿದೆ.  

ಅಗತ್ಯ ಸಿಬ್ಬಂದಿ ಹಾಗೂ ಸಲಕರಣಗೆಗಳೊಂದಿಗೆ ಜಿಲ್ಲಾಡಳಿತ ಸಜ್ಜು 

ಈ ಮುಂಗಾರು ಆಶಾದಾಯಕವಾಗಿ ಆರಂಭವಾಗಿರುವುದಲ್ಲದೆ, ಮುಂದಿನ ದಿನಗಳಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆಗಳಿರುವ ಹಿನ್ನೆಲೆಯಲ್ಲಿ ಧರೆ ಕುಸಿತ, ಪ್ರವಾಹ ಇನ್ನಿತರೆ ಅನಾಹುತಗಳಿಂದ ಎದುರಾಗಬಹುದಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಅಗತ್ಯ ಸಿಬ್ಬಂದಿ ಹಾಗೂ ಸಲಕರಣಗೆಗಳೊಂದಿಗೆ ಜಿಲ್ಲಾಡಳಿತ ಸಜ್ಜಾಗಿದೆ.ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ಎಲ್ಲಾ ನಗರ, ಪಟ್ಟಣ ಪ್ರದೇಶಗಳು ಹಾಗೂ ಗ್ರಾಮೀಣ ಭಾಗದಲ್ಲಿ ತುರ್ತು ಸೇವೆಗೆ ಸ್ಥಳೀಯ ಸಂಸ್ಥೆಗಳು, ಮೆಸ್ಕಾಂ, ಪೊಲೀಸ್ ಇಲಾಖೆ ಹಾಗೂ ಅಗ್ನಿ ಶಾಮಕ ಅಧಿಕಾರಿಗಳನ್ನು ನೇಮಿಸಲಾಗಿದೆ.

ಫೋಟೊಶೂಟ್, ರೀಲ್ಸ್‌ ಹುಚ್ಚಿಗೆ ಹೊಂಡದಲ್ಲಿ ಬಿದ್ದು ಪ್ರಾಣ ಕಳೆದುಕೊಂಡ ಬಾಲಕರು!

103 ಮಂದಿ ಈಜುಗಾರರು : 

ಅಗತ್ಯ ಸಂದರ್ಭದಲ್ಲಿ ರಕ್ಷಣಾ ಕಾರ್ಯಕ್ಕೆ ತೊಡಗಿಸಿಕೊಳ್ಳಲು ಮುಂಜಾಗ್ರತೆಯಾಗಿ ಒಟ್ಟು 103 ಈಜುಗಾರರನ್ನು ಸಜ್ಜುಗೊಳಿಸಲಾಗಿದೆ. ಚಿಕ್ಕಮಗಳೂರು ತಾಲ್ಲುಕಿನಲ್ಲಿ 50, ಮೂಡಿಗೆರೆ 15, ಶೃಂಗೇರಿ 6, ತರೀಕೆರೆ 3, ನ.ರಾ.ಪುರ 11, ಕಡೂರು 8, ಅಜ್ಜಂಪುರ 4, ಕೊಪ್ಪ 4 ಹಾಗೂ ಕಳಸದಲ್ಲಿ 2 ಮಂದಿ ಈಜುಗಾರರನ್ನು ನಿಯೋಜಿಸಿಕೊಳ್ಳಲಾಗುತ್ತಿದೆ.

432 ಹೋಂಗಾರ್ಡ್ಗಳು

ಒಟ್ಟು 432 ಹೋಂಗಾರ್ಡ್ಗಳನ್ನು ಅತೀವೃಷ್ಠಿ ಪರಿಹಾರ ಕಾರ್ಯಗಳಿಗೆ ನೀಯೋಜಿಸಿಕೊಳ್ಳಲು ತೀರ್ಮಾನಿಸಿದ್ದು ಚಿಕ್ಕಮಗಳೂರಿನಲ್ಲಿ 237, ಮೂಡಿಗರೆ 35, ಶೃಂಗೇರಿ 12, ತರೀಕೆರೆ 13, ನ.ರಾ.ಪುರ 55, ಕಡೂರು 10, ಅಜ್ಜಂಪುರ 40, ಹಾಗೂ ಕೊಪ್ಪದಲ್ಲಿ 30 ಹೋಂಗಾರ್ಡ್ಗಳನ್ನು ನಿಯೋಜಿಸಲು ಸಿದ್ಧತೆ ನಡೆದಿದೆ.

593 ಸ್ವಯಂ ಸೇವಕರು

ಜಿಲ್ಲೆಯಾದ್ಯಂತ ಎಲ್ಲಾ ತಾಲ್ಲೂಕುಗಳಲ್ಲಿ 593 ಸ್ವಯಂ ಸೇವಕರು ಅಗತ್ಯ ಸಂದರ್ಭದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದು, ಈ ಸಂಬಂಧ ತಹಸೀಲ್ದಾರರು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.

ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯಲ್ಲಿ ಸರ್ಕಾರಿ ಬಸ್ಸಿಗೆ ಅಡ್ಡ ಬಂದ ಕಾಡಾನೆ, ಕಕ್ಕಾಬಿಕ್ಕಿಯಾದ ಪ್ರಯಾಣಿಕರು..!

93 ದುರ್ಬಲ ಪ್ರದೇಶಗಳು
ಅತೀವೃಷ್ಠಿ ಸಂದರ್ಭದಲ್ಲಿ ಭೂ ಕುಸಿತ ಮತ್ತು ಪ್ರವಾಹ ಸಂಭವಿಸಬಹುದಾದ ಒಟ್ಟು 93 ಪ್ರದೇಶಗಳನ್ನು ಜಿಲ್ಲಾಡಳಿತ ಗುರುತಿಸಿದೆ.ಈ ಪೈಕಿ ಚಿಕ್ಕಮಗಳೂರು ತಾಲ್ಲೂಕಿನಲ್ಲಿ 6, ಕೂಡಿಗೆರೆ ತಾಲ್ಲೂಕಿನಲ್ಲಿ 17, ಶೃಂಗೇರಿ 49, ತರೀಕೆರೆ 1, ನ.ರಾ.ಪುರ 17, ಕಡೂರು 2, ಕೊಪ್ಪ 9ಹಾಗೂ ಕಳಸಾ ತಾಲ್ಲೂಕಿನಲ್ಲಿ 15 ಪ್ರದೇಶಗಳನ್ನು ದುರ್ಬಲ ಪ್ರದೇಶಗಳೆಂದು ಗುರುತಿಸಲಾಗಿದ್ದು ಅಂತಹ ಕಡೆಗಳಲ್ಲಿ ಸುರಕ್ಷಿತ ಆಶ್ರಯ ತಾಣಗಳನ್ನು ತೆರೆಯಲಾಗಿದೆ. ಅತೀವೃಷ್ಠಿ ಸಂಭವಿಸಿದಲ್ಲಿ ರಕ್ಷಣೆಗೆ ಅಗತ್ಯವಿರುವ ಅಸ್ಕಾ ಲೈಟ್ಗಳು, ಜನರೇಟರ್, ಕಾಂಕ್ರಿಟ್ ಕಟ್ಟರ್, ಬೋಲ್ಟ್ ಕಟ್ಟರ್, ರಬ್ಬರ್ ಬೋಟ್ಗಳು, ಉಸಿರಾಟದ ಉಪಕರಣಗಳು, ಜೀವ ರಕ್ಷಕ ಜಾಕೆಟ್ಗಳು, ಹಗ್ಗ, ರೈನ್ ಕೋಟ್ಗಳು ಸೇರಿದಂತೆ ಪ್ರವಾಹದಿಂದ ಸಂಕಷ್ಠಕ್ಕೆ ಸಿಲುಕಿದವರ ರಕ್ಷಣೆಗೆ ಅಗತ್ಯವಿರುವ ಸಲಕರಣೆಗಳನ್ನು ಸಜ್ಜುಗೊಳಿಸಲಾಗಿದೆ.ಹೋಬಳಿ ಮಟ್ಟದಲ್ಲಿ ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ತುರ್ತು ರಕ್ಷಣಾ ಮತ್ತು ಪರಿಹಾರ ತಂಡಗಳನ್ನು ನೇಮಿಸಲಾಗಿದೆ. ಅಲ್ಲದೆ ಪ್ರತಿ ತಾಲ್ಲೂಕುಗಳಲ್ಲಿ ರಕ್ಷಣಾ ಕಾರ್ಯಕ್ಕೆಂದು ಅಗತ್ಯ ವಾಹನಗಳನ್ನು ಸಜ್ಜುಗೊಳಿಸಲಾಗಿದೆ.

click me!