ಚಿಕ್ಕಬಳ್ಳಾಪುರ: ಬೆಲೆ ಏರಿಕೆ ಬೆನ್ನಲ್ಲೇ ಟೊಮೆಟೊ ಕಳ್ಳರ ಕಾಟ!

By Ravi Janekal  |  First Published Jun 17, 2024, 8:23 PM IST

ಬೆಲೆ ಏರಿಕೆ ಬೆನ್ನಲ್ಲೇ ಮಾರಾಟಕ್ಕೆ ರೈತರು ತಂದಿಟ್ಟಿದ್ದ ಟೊಮ್ಯಾಟೊ ಬಾಕ್ಸ್‌ಗಳನ್ನು ರಾತ್ರೋರಾತ್ರಿ ಕಳ್ಳತನ ಮಾಡಿದ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆದಿದೆ.


ಚಿಕ್ಕಬಳ್ಳಾಪುರ (ಜೂ.17): ಬೆಲೆ ಏರಿಕೆ ಬೆನ್ನಲ್ಲೇ ಮಾರಾಟಕ್ಕೆ ರೈತರು ತಂದಿಟ್ಟಿದ್ದ ಟೊಮ್ಯಾಟೊ ಬಾಕ್ಸ್‌ಗಳನ್ನು ರಾತ್ರೋರಾತ್ರಿ ಕಳ್ಳತನ ಮಾಡಿದ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆದಿದೆ.

ಚಿಂತಾಮಣಿ ಎಪಿಎಂಸಿ ಮಾರುಕಟ್ಟೆಗೆ ರಾಜ್ಯದ ವಿವಿದೆಡೆಯಿಂದ ಸಾಕಷ್ಟು ಟೊಮ್ಯಾಟೋ ಬರುತ್ತದೆ. ಈಗ ಬೆಲೆ ಕೂಡ ಹೆಚ್ಚಳವಾಗಿರುವುದರಿಂದ ಖದೀಮರು ರಾತ್ರೋರಾತ್ರಿ  ಟೊಮ್ಯಾಟೊ ಕದಿಯುವ ಮೂಲಕ ಕೈಚಳಕ ತೋರಿಸಿದ್ದಾರೆ. ಟೊಮ್ಯಾಟೊ ಬಾಕ್ಸ್ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ರೈತರು ಆತಂಕಗೊಂಡಿದ್ದಾರೆ. ಕಷ್ಟಪಟ್ಟು ಬೆಳೆದು ಮಾರಾಟಕ್ಕೆ ತಂದಿದ್ದೇವೆ. ಇದೀಗ ಟೊಮ್ಯಾಟೊ ಬಾಕ್ಸ್‌ಗಳನ್ನು ಕಳ್ಳರು ಕದಿಯುತ್ತಿದ್ದಾರೆ. ಎಪಿಎಂಸಿ ಮಾರುಕಟ್ಟೆಗೆ ಸೂಕ್ತ ಭದ್ರತೆ ಒದಗಿಸಬೇಕು. ಕಳ್ಳತನ ಮಾಡಿರುವ ಖದೀಮರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಜರುಗಿಸಲು ಆಗ್ರಹಿಸಿದ್ದಾರೆ.

Tap to resize

Latest Videos

 

click me!