ಕಳಸಾ ಬಂಡೂರಿ ಯೋಜನೆಗೆ ಪ್ರಮುಖ ತಿರುವು, ಸುದೀರ್ಘ ಹೋರಾಟಕ್ಕೆ ಸಿಕ್ಕ ಗೆಲುವು!

By Suvarna News  |  First Published Dec 29, 2022, 8:37 PM IST

ಕೇಂದ್ರ ಸರ್ಕಾರ ರಾಜ್ಯದ ಕಳಸಾ ಬಂಡೂರಿ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ. ರಾಜ್ಯ ಸರ್ಕಾರ ಸಲ್ಲಿಸಿದ ಪರಿಷ್ಕೃತ ಡಿಪಿಆರ್‌ನಿಂದ ಸುದೀರ್ಘ ಹೋರಾಟಕ್ಕೆ ಗೆಲುವಾಗಿದೆ. ಹಾಗಾದರೆ ಈ ಯೋಜನೆಯ ಪ್ರಮುಖ ತಿರುವು ಎಲ್ಲಿ? 
 


ಡೆಲ್ಲಿ ಮಂಜು

ಕರ್ನಾಟಕದ ಬಹು ನಿರೀಕ್ಷೆಯ ನೀರಾವರಿ ಯೋಜನೆ ಕಳಸಾ ಬಂಡೂರಿಯ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗವು ಅನುಮತಿಯನ್ನು ನೀಡಿದೆ. ಈ ಯೋಜನೆಗಾಗಿ ಸರ್ಕಾರ ಮಾತ್ರವಲ್ಲ, ರೈತರು, ಕನ್ನಡರ ಪರ ಸಂಘಟನೆ, ಹೋರಾಟಗಾರರು, ಕಾರ್ಮಿಕರು ಸೇರಿದಂತೆ ಹಲವರು ಹೋರಾಟ ನಡೆಸಿದ್ದಾರೆ. ರಾಜ್ಯದ ಸತತ ಹೋರಾಟಕ್ಕೆ ಗೆಲುವಾಗಿದೆ.  ಕೇಂದ್ರ ಸರ್ಕಾರ ಈ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಲು ಕೆಲ ಪ್ರಮುಖ ಕಾರಣಗಳಿವೆ.

Tap to resize

Latest Videos

ಕಳಸಾ- ಬಂಡೂರಿ ಯೋಜನೆ ಪ್ರಮುಖ ತಿರುವು ಎಲ್ಲಿ?
* ಇಡೀ ಯೋಜನೆಗಳ ಪ್ರಮುಖ ತಿರುವು ಪರಿಷ್ಕೃತ ಡಿಪಿಆರ್ (ಸಮಗ್ರ ಯೋಜನಾ ವರದಿ)
* ಪರ್ಯಾಯ ಕಳಸಾ ಏತನೀರಾವರಿ ಯೋಜನೆ ಮತ್ತು ಪರ್ಯಾಯ ಬಂಡೂರಿ ಏತ ನೀರಾವರಿ ಯೋಜನೆ ಅಂಥ ಎರಡು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ
* ಇದರಿಂದ ಸರ್ಕಾರಕ್ಕೆ 680 ಕೋಟಿ ರೂಪಾಯಿ ವೆಚ್ಚ ಹೊರೆ ಕಡಿಮೆಯಾಗಲಿದೆ
* ಈ ಎರಡು ಯೋಜನೆಗಳಿಗೆ ಅರಣ್ಯ ಪ್ರದೇಶ ಬಳಕೆ ಪ್ರಮಾಣ ಕಡಿಮೆಯಾಗಲಿದೆ ( ಹಾಗಾಗಿ ಕೇಂದ್ರ ಪರಿಸರ ಅರಣ್ಯ ಇಲಾಖೆ ಮತ್ತು ಗೋವಾ ತಗಾದೆಗೆ ಸೂಕ್ತ ಉತ್ತರ ಸಿಕ್ಕಂತಾಯಿತು)

ಕಳಸಾ ಬಂಡೂರಿ ಡಿಪಿಆರ್‌ಗೆ ಕೇಂದ್ರ ಒಪ್ಪಿಗೆ: ಹೋರಾಟ ನೆನೆದು ಭಾವುಕರಾದ ಸಿಎಂ ಬೊಮ್ಮಾಯಿ

- ಕಾಲುವೆಗಳು ನಿರ್ಮಾಣದ ಮೂಲಕ ಮಹದಾಯಿ ನೀರನ್ನು ಮಲಪ್ರಭಾಕ್ಕೆ ತಿರುಗಿಸುವ ಬದಲಾಗಿ ಬೃಹತ್ ಪೈಪ್‌ಗಳ ಮೂಲಕ ನೀರು ಮಲಪ್ರಭಾಕ್ಕೆ ಹರಿಸುವ ಕುರಿತು ಹೊಸ ಡಿಪಿಆರ್‌ನಲ್ಲಿ ಪ್ರಸ್ತಾಪ (ಇದರಿಂದಾಗಿ ಕಳಸಾ ಮತ್ತು ಬಂಡೂರಿ ಎರಡೂ ಜಲಾಶಯಗಳ  ಎತ್ತರವೂ ತಗ್ಗಲಿದೆ)

- ಬಳಿಕ 2018ರ ಮಹದಾಯಿ ನ್ಯಾಯಾಧೀಕರಣದ ಐತೀರ್ಪೀನ ಪ್ರಕಾರ ಕೇಂದ್ರ ಜಲ ಆಯೋಗವೂ ಮಹದಾಯಿ ನದಿಯಿಂದ ಕಳಸಾ ತಿರುವು ಯೋಜನೆ ಮೂಲಕ 1.72 ಟಿಎಂಸಿ ಮತ್ತು ಬಂಡೂರಿ ತಿರುವು ಯೋಜನೆಯ ಮೂಲಕ 2.18 ನೀರನ್ನು ಮಲಪ್ರಭಾಕ್ಕೆ ತಿರುಗಿಸಲು ಯೋಜನಾ ವರದಿ ಸಲ್ಲಿಸಲು ಸೂಚಿಸಿತು. ಅದರಂತೆ 2020ರಲ್ಲಿ ರಾಜ್ಯ ಸರ್ಕಾರ ಕೇಂದ್ರ ಜಲಶಕ್ತಿ ಇಲಾಖೆಗೆ ಡಿಪಿಆರ್ ಸಲ್ಲಿಸಿತು.

 

ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಅಸ್ತು: ದಸರಾ ಬಳಿಕ ಕಾಮಗಾರಿಗೆ ಚಾಲನೆ ಸಾಧ್ಯತೆ

ಅಂಕಿ-ಅಂಶಗಳು ( ಪರಿಷ್ಕತ ಡಿಪಿಆರ್ ಪ್ರಕಾರ)
* ಕಳಸಾ-ಬಂಡೂರಿ ಮೂಲಕ ಮಹದಾಯಿಯಿಂದ ಮಲಪ್ರಭಾಕ್ಕೆ ಹರಿಯುವ ಒಟ್ಟು ನೀರು 3.9 ಟಿಎಂಸಿ
* ಹಳೇ ಡಿಪಿಆರ್ ಪ್ರಕಾರ ಈ ಎರಡೂ ಯೋಜನೆಗಳಿಗೆ 1,675 ಕೋಟಿ ರೂಪಾಯಿ.
* ಪರಿಷ್ಕೃತ ಡಿಪಿಆರ್ ಪ್ರಕಾರ  ಯೋಜನಾ ವೆಚ್ಚ 1,096 ಕೋಟಿ ರೂಪಾಯಿ
* 579 ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ಉಳಿಕೆ
* ಅರಣ್ಯ ಬಳಕೆ ಪ್ರಮಾಣವೂ ೩೪೯ ಹೆಕ್ಟೇರ್‌ಗಳಿಂದ ಬರೀ 58 ಹೆಕ್ಟೇರಿಗೆ ಇಳಿಕೆ

ಸಿಎಂ ಪ್ರತಿಕ್ರಿಯೆ!
ಕಳಸಾ ಬಂಡೂರಿ ಯೋಜನೆಯ ಮೂಲ ಸ್ವರೂಪದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಕೇಂದ್ರದ ಒಪ್ಪಿಗೆ ಸಿಕ್ಕಿರುವುದು ಸಂತಸ ತಂದಿದೆ. ಶೀಘ್ರದಲ್ಲೇ ಟೆಂಡರ್ ಕರೆದು ಕೆಲಸ ಪೂರ್ಣಗೊಳಿಸುತ್ತೇವೆ. ಯಲ್ಲಮ್ಮನ ಒಡಲಿನಿಂದ ಬಾದಾಮಿ ಒಡಲಿನವರೆಗೆ ನೀರು ಹರಿಸುವ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

click me!