ಪಂಚಮಸಾಲಿ ಸಮುದಾಯಕ್ಕೆ ಗುಡ್‌ನ್ಯೂಸ್, ಮೀಸಲಾತಿ ನೀಡಲು ಸರ್ಕಾರ ಒಪ್ಪಿಗೆ!

By Suvarna NewsFirst Published Dec 29, 2022, 7:01 PM IST
Highlights

ಹೊಸ ವರ್ಷದ ಸನಿಹದಲ್ಲೇ ಪಂಚಮಸಾಲಿ ಸಮುದಾಯಕ್ಕೆ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ. ಮೀಸಲಾತಿ ಹೋರಾಟಕ್ಕೆ ಮಣಿದಿರುವ ಇದೀಗ ಬೇಡಿಕೆಗೆ ಗ್ರೀನ್ ಸಿಗ್ನಲ್ ನೀಡಿದೆ

ಬೆಂಗಳೂರು(ಡಿ.29): ಪಂಚಮಸಾಲಿ ಸಮುದಾಯದ ಬಹುದಿನಗಳ ಬೇಡಿಕೆ ಈಡೇರಿದೆ. ಪ್ರಬಲ ಸಮುದಾಯಗಳ ಸತತ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ.  ಇದೀಗ ಪಂಚಮಸಾಲಿ, ಒಕ್ಕಲಿಗ ಹಾಗೂ ಲಿಂಗಾಯಿತ ಸಮುದಾಯಕ್ಕೆ ಮೀಸಲಾತಿ ನೀಡಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಕುರಿತು ಸಭೆ ಸೇರಿದ ಸಚಿವ ಸಂಪುಟ, ಮಹತ್ವದ ನಿರ್ಧಾರ ಘೋಷಿಸಿದೆ. ಪಂಚಮಸಾಲಿ ಸಮುದಾಯಕ್ಕೆ 2ಸಿ ಅಡಿ ಮೀಸಲಾತಿ ನೀಡಲಾಗಿದೆ. ಇನ್ನು ಒಕ್ಕಲಿಗೆ ಸಮುದಾಯಕ್ಕೆ ಹೊಸ ಪ್ರವರ್ಗ ಸೃಷ್ಟಿಸಲಾಗಿದೆ. ಒಕ್ಕಲಿಗ ಸಮುದಾಯಕ್ಕೆ 2ಸಿ ಅಡಿಯಲ್ಲಿ ಮೀಸಲಾತಿ ನೀಡಲು ಸಚಿವ ಸಂಪುಟಕ್ಕೆ ಒಪ್ಪಿಗೆ ನೀಡಿದೆ. ಲಿಂಗಾಯಿತ ಸಮುದಾಯಕ್ಕೆ 3ಬಿಯಲ್ಲಿರುವ ಮೀಸಲಾತಿಯನ್ನು 2ಡಿ ಅಡಿಯಲ್ಲಿ ನೀಡಲು ಒಪ್ಪಿಗೆ ಸೂಚಿಸಿದೆ. 3ಬಿಯಲ್ಲಿದ್ದ ಲಿಂಗಾಯಿತರಿಗೆ 2ಡಿ ಅಡಿಯಲ್ಲಿ ಮೀಸಲಾತಿ ಘೋಷಿಸಲಾಗಿದೆ.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಚಿವ ಮಾಧುಸ್ವಾಮಿ ಮೀಸಲಾತಿ ಸಿಹಿ ಸುದ್ದಿ ನೀಡಿದ್ದಾರೆ. ಹಿಂದುಳಿದ ವರ್ಗದ ಅಯೋಗ ಮಧ್ಯಂತರ ವರದಿ ನೀಡಿದೆ. ಹೊಸದಾಗಿ ಎರಡು ಪ್ರವರ್ಗಗಳನ್ನು ಸೃಷ್ಟಿಸಲಾಗಿದೆ. 2c ಮತ್ತು 2d ಪ್ರ ವರ್ಗ ಹೊಸದಾಗಿ ಸೇರ್ಪಡೆಗೊಂಡಿದೆ ಎಂದು ಮಾಧುಸ್ವಾಮಿ ಹೇಳಿದ್ದಾರೆ. 

 

ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಮೀಸಲಾಗಿದ್ದ ಶೇಕಡಾ 10ರಷ್ಟು ಮೀಸಲಾತಿಯನ್ನು ಶೇಕಡಾ 6ಕ್ಕೆ ಇಳಿಕೆ ಮಾಡಲಾಗಿದೆ. ಇಲ್ಲಿನ ಶೇಕಡಾ 4 ರಷ್ಟು ಮೀಸಲಾತಿಯನ್ನು 2ಡಿ ಹಾಗೂ 2ಸಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ಮಾಧುಸ್ವಾಮಿ ಹೇಳಿದ್ದಾರೆ. ಬ್ರಾಹ್ಮಣರು ಸೇರಿದಂತೆ ಎಲ್ಲಾ ಮೇಲ್ವರ್ಗದಲ್ಲಿನ ಆರ್ಥಿಕ ಹಿಂದುಗಳಿದ ವರ್ಗಗಳ ಮೀಸಲಾತಿಗೆ ಕತ್ತರಿ ಹಾಕಲಾಗಿದೆ. 

SC ST Reservation: ಎಸ್ಸಿ, ಎಸ್ಟಿ ಮೀಸಲು ಏರಿಕೆ ಮಸೂದೆ ಮಂಡನೆ

3 B ನಲ್ಲಿದ್ದ ಸಮುದಾಯಗಳನ್ನು 2c ಗೆ ಮತ್ತು 2dಗೆ ಸೇರಿಸಲಾಗಿದೆ. ಇದರಡಿ ಯಾವ ಸಮುದಾಯಗಳು ಬರಲಿದೆ ಅನ್ನೋದನ್ನು ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಹಿಂದುಳಿದ ಆಯೋಗ ಅಂತಿಮ ವರದಿ ನೀಡಿದ ಬಳಿಕ ಯಾರಿಗೆ ಎಷ್ಟು ಪ್ರಮಾಣದ ಮೀಸಲಾತಿ ನಿರ್ಧರಿಸಲಾಗುವುದು ಎಂದು ಮಾಧುಸ್ವಾಮಿ ಹೇಳಿದ್ದಾರೆ. 

ಪಂಚಮಸಾಲಿ ಸಮುದಾಯ 2ಎ ಮೀಸಲಾತಿಗಾಗಿ ಹೋರಾಟ ನಡೆಸಿತ್ತು. ಕೂಡಲ ಸಂಗಮದ ಬಸವ ಪೀಠದ ಸ್ವಾಮೀಜಿ ಜಯಮೃತ್ಯುಂಜಯ  ನೇತೃತ್ವದಲ್ಲಿ ಭಾರಿ ಹೋರಾಟ ನಡೆಸಲಾಗಿದೆ. ಆದರೆ 2ಎ ಮೀಸಲಾತಿಗಾಗಿ ಹೋರಾಟ ನಡೆಸಿದ ಪಂಚಮಸಾಲಿ ಸಮುದಾಯಕ್ಕೆ 2ಸಿ ಅಡಿಯಲ್ಲಿ ಮೀಸಲಾತಿ ಘೋಷಿಸಲಾಗಿದೆ. 

ಬಸನಗೌಡ ಪಾಚೀಲ್ ಜೊತೆ ಸ್ವಾಮೀಜಿ ಮಾತುಕತೆ
ಸರ್ಕಾರದ ಮೀಸಲಾತಿ ಘೋಷಣೆ ಬೆನ್ನಲ್ಲೇ ಜಯಮೃತ್ಯುಂಜಯ ಸ್ವಾಮೀ ಮಹತ್ವದ ಮಾತುಕತೆ ನಡೆಸುತ್ತಿದ್ದಾರೆ. ಮೀಸಲಾತಿಯ ಹೊಸ ಪ್ರವರ್ಗ ಸೃಷ್ಟಿ, ಮೀಸಲಾತಿ ವಿಭಾಗದ ಸ್ವಾಮೀಜಿ ಗೊಂದಲಕ್ಕೆ ಸಿಲುಕಿದ್ದಾರೆ. ಹೀಗಾಗಿ ಬಸನಗೌಡ ಪಾಟೀಲ್ ಯತ್ನಾಳ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಸ್ವಾಮೀಜಿ ಸುದ್ದಿಗೋಷ್ಠಿ ನಡೆಸಿ ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ. ಮಾಧುಸ್ವಾಮಿ ಹೇಳಿಕೆ ಬಗ್ಗೆ ಸ್ಪಷ್ಟ ನಿಖರ ಮಾಹಿತಿ ಸಿಕ್ಕಿಲ್ಲ.  ಈರಣ್ಣ ಕಡಾಡಿ, ಬಸನಗೌಡ ಪಾಟೀಲ್ ಯತ್ನಾಳ್ ಜೊತೆ ಮಾತನಾಡಿದ್ದೇನೆ. ಅವರ ಜೊತೆ ಮತ್ತೊಮ್ಮೆ ಚರ್ಚಿಸಿ ನಿರ್ಧಾರ ತಿಳಿಸುತ್ತೇನೆ.  ಕ್ಯಾಬಿನೆಟ್ ನಿರ್ಧಾರ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಈಗಲೇ ಯಾವುದೇ ವಿಜಯೋತ್ಸವ ಆಚರಿಸಬೇಡಿ. ಮಾಹಿತಿ ತಿಳಿದು ಬಳಿಕ ನಿರ್ಧರಿಸೋಣ ಎಂದು ಸ್ವಾಮೀಜಿ ಹೇಳಿದ್ದಾರೆ.

click me!