
ನವದೆಹಲಿ (ಏ.10): ‘2026-27ನೇ ಶೈಕ್ಷಣಿಕ ವರ್ಷದಿಂದ 6ನೇ ತರಗತಿಯಲ್ಲಿ ತೃತೀಯ ಭಾಷೆಯನ್ನು (ಆರ್3) ಕಡ್ಡಾಯವಾಗಿ ಜಾರಿಗೊಳಿಸಬೇಕು. ಪಠ್ಯಪುಸ್ತಕಗಳು ಇನ್ನೂ ಲಭ್ಯವಾಗದಿದ್ದರೂ, ಸ್ಥಳೀಯವಾಗಿ ಲಭ್ಯವಿರುವ ಪುಸ್ತಕಗಳನ್ನೇ ಬಳಸಿಕೊಂಡು 7 ದಿನಗಳ ಒಳಗೆ ತುರ್ತಾಗಿ ಬೋಧನೆಯನ್ನು ಆರಂಭಿಸಬೇಕು’ ಎಂದು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಗುರುವಾರ ಆದೇಶಿಸಿದೆ.
ಕರ್ನಾಟಕದ ರಾಜ್ಯ ಪಠ್ಯಕ್ರಮಗಳಲ್ಲಿ ದ್ವಿಭಾಷಾ ಸೂತ್ರದ ಬಗ್ಗೆ ಚರ್ಚೆ ನಡೆದಿರುವ ನಡುವೆಯೇ ಈ ಆದೇಶ ಬಂದಿದೆ.
‘ಅನೇಕ ಶಾಲೆಗಳು ಈಗಾಗಲೇ ಆರ್3 ಅನುಷ್ಠಾನ ಮಾಡಿವೆ. ಉಳಿದ ಶಾಲೆಗಳೂ ತಕ್ಷಣವೇ ಬೋಧನೆಯನ್ನು ಪ್ರಾರಂಭಿಸಬೇಕು. ಅಧಿಕೃತ ಪಠ್ಯಪುಸ್ತಕಗಳು ಬರುವವರೆಗೆ ಸ್ಥಳೀಯವಾಗಿ ಲಭ್ಯವಿರುವ ಪುಸ್ತಕಗಳು ಅಥವಾ ವಸ್ತುಗಳನ್ನು ಬಳಸಿಕೊಳ್ಳಬೇಕು. ಇದನ್ನು ನಮ್ಮ ಪ್ರಾದೇಶಿಕ ಕಚೇರಿಗಳು ಮೇಲ್ವಿಚಾರಣೆ ಮಾಡುತ್ತವೆ’ ಎಂದು ಎಚ್ಚರಿಸಿದೆ.
ಸಿಬಿಎಸ್‌ಇ 6ನೇ ತರಗತಿಯಿಂದ ತ್ರಿಭಾಷಾ ಸೂತ್ರವನ್ನು ಜಾರಿಗೆ ತರುವುದಾಗಿ ಕಳೆದ ವಾರವಷ್ಟೇ ಆದೇಶ ಹೊರಡಿಸಿತ್ತು. ಆರ್1, ಆರ್2, ಆರ್3 ಎಂಬ 3 ಭಾಷೆಗಳಿರುತ್ತವೆ. ಇವುಗಳಲ್ಲಿ 2 ಭಾಷೆಗಳು ಕಡ್ಡಾಯವಾಗಿ ಭಾರತೀಯ ಭಾಷೆಗಳಾಗಿರಬೇಕು ಎಂದು ತಿಳಿಸಿತ್ತು. ಅದನ್ನೀಗ ಅತಿ ತುರ್ತಾಗಿ ಅನುಷ್ಠಾನಕ್ಕೆ ತರಲು ಮುಂದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ