
- ಆರೆಸ್ಸೆಸ್ ನೋಂದಣಿ ಆಗಿದ್ರೆ ಖರ್ಗೆ ವಿರುದ್ಧ ದೂರು ನೀಡ್ಲಿ
ಕಲಬುರಗಿ (ಏ.10): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ‘ಬಿಜೆಪಿ, ಆರೆಸ್ಸೆಸ್ ವಿಷಸರ್ಪ, ಅವನ್ನು ಕೊಲ್ಲಿ’ ಎಂಬ ಹೇಳಿಕೆ ವಿರುದ್ಧ ಯಾರೋ ದೂರು ಸಲ್ಲಿಸಿದ್ದಾರೆ. ಆರ್‌ಎಸ್‌ಎಸ್ ಯಾಕೆ ದೂರು ದಾಖಲಿಸಿಲ್ಲ?. ಅವರು ನೋಂದಣಿ ಮಾಡಿಸಿಕೊಂಡಿದ್ದರೆ ತಾವೇ ಲೆಟರ್‌ಹೆಡ್‌ನಲ್ಲಿ ದೂರು ದಾಖಲಿಸಲಿ ಎಂದು ಆರ್‌ಡಿಪಿಆರ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮದು ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ತತ್ವ. ಬುದ್ಧ-ಬಸವ ಅವರ ತತ್ವಗಳನ್ನು ನಾವು ಹೊಂದಿದ್ದೇವೆ. ಕೆಲವೊಬ್ಬರು ಈ ತತ್ವ ಹಾಗೂ ಸಂವಿಧಾನ ವಿರೋಧಿ ಸಿದ್ಧಾಂತ ಹೊಂದಿರುತ್ತಾರೆ. ಇದು ಸರಿಯಲ್ಲ ಎನ್ನುವುದು ನಮ್ಮ ವೈಯಕ್ತಿಕ ಅಭಿಪ್ರಾಯ. ಅಷ್ಟಕ್ಕೂ ಖರ್ಗೆ ಹೇಳಿದ್ದೇನು?. ವಿಷಸರ್ಪಗಳನ್ನು ಕೊಲ್ಲಿ ಎಂದು ಹೇಳಿದ್ದಾರೆ. ವಿಷ ಸರ್ಪ ಎದುರಾದರೆ ಯಾರಾದರೂ ಹಾಲು ಎರೆಯಲು ಆಗುತ್ತದೆಯೇ? ಎಂದು ಪ್ರಶ್ನಿಸಿದರು.
ಬಿಜೆಪಿಯವರು ಪಾರ್ಲಿಮೆಂಟ್‌ನಲ್ಲಿ ಮೆಜಾರಿಟಿ ಹೊಂದಿದ್ದಾರೆ. ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು ನಮ್ಮ ದೇಶದವರಲ್ಲ ಎಂದು ಅವರು ಹೇಳಿ ಬಿಡಲಿ. ಯುಎಇಯವರನ್ನು ತಬ್ಬಿಕೊಳ್ಳುತ್ತಾರೆ. ಅವರಿಂದ ಪೆಟ್ರೋಲ್ ಬೇಕು, ಯೂರಿಯಾ ಬೇಕು. ಅಷ್ಟೇಕೆ, ಕೇಸರಿ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಯುಎಇನಿಂದ ಬರುತ್ತದೆ. ಹಾಗಾದರೆ, ಮುಸ್ಲಿಂ ರಾಷ್ಟ್ರಗಳ ಜೊತೆಗೆ ಎಲ್ಲ ವ್ಯಾಪಾರ ವ್ಯವಹಾರ ನಿಲ್ಲಿಸಲಿ ಎಂದು ಸವಾಲು ಹಾಕಿದರು.
==
ಕೊರೋನಾ ಸಮಯದಲ್ಲಿ ಅಮಿತ್ ಶಾ ಮಗ ಐಪಿಎಲ್ ಆಡಿಸಿದ್ದು ದುಬೈನಲ್ಲಿ. ಈ ತರ ಇಬ್ಬಗೆ ನೀತಿ ಯಾಕೆ?. ಅವರ ಮಾತುಗಳನ್ನು ಅವರೇ ಸಮರ್ಥನೆ ಮಾಡಿಕೊಳ್ಳಲು ಆಗುತ್ತಿಲ್ಲ ಎಂದು ಖರ್ಗೆ ಕುಟುಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ