Belagavi Assembly Session : ವಿಪಕ್ಷಕ್ಕೆ ಮಣಿದ ಸರ್ಕಾರ, ಸಂಡೂರು ತಹಶೀಲ್ದಾರ್ ವರ್ಗ!

By Suvarna News  |  First Published Dec 15, 2021, 11:16 PM IST

* ವಿಪಕ್ಷದ ಒತ್ತಾಯಕ್ಕೆ ಮಣಿದ ಸರ್ಕಾರ
* ಸಂಡೂರು ಶಾಸಕರ ಒತ್ತಾಯದಂತೆ ಸರ್ಕಾರ ಸಂಡೂರು ತಹಶೀಲ್ದಾರ್ ರಶ್ಮಿ  ವರ್ಗಾವಣೆ
* ಸಂಡೂರು ಶಾಸಕ ತುಕಾರಾಂ  ಅವರಿಂದ ಹಕ್ಕು ಚ್ಯುತಿ ಮಂಡನೆ
* ಜನಪ್ರತಿನಿಧಿಗಳ ಜತೆ ಸರಿಯಾಗಿ ನಡೆದುಕೊಂಡಿಲ್ಲ ಎಂಬ ಆರೋಪ


ಬೆಳಗಾವಿ / ಬಳ್ಳಾರಿ (ಡಿ. 15)  ಸದನದಲ್ಲಿ (Belagavi Assembly Session) ಪ್ರತಿಪಕ್ಷಗಳ (Congress) ಹೋರಾಟಕ್ಕೆ ಸರ್ಕಾರ ಕೊನೆಗೂ ಮಣಿದಿದೆ.  ಸಂಡೂರು (Sandur) ಶಾಸಕರ ಒತ್ತಾಯದಂತೆ ಸರ್ಕಾರ ಸಂಡೂರು ತಹಸಿಲ್ದಾರ್ ರಶ್ಮಿ ಅವರನ್ನು ವರ್ಗಾವಣೆ (Transfer)ಮಾಡಿದೆ. 

ಧ್ವಜಾರೋಹಣಕ್ಕೆ ಅಹ್ವಾನ ನೀಡಿಲ್ಲ,  ಕಚೇರಿಗೆ ಹೋದರೆ ತಮಗೆ ಗೌರವ ಕೊಡಲ್ಲ ಎಂಬುದು ಸೇರಿದಂತೆ ಹಲವು ಆರೋಪಗಳನ್ನು ಶಾಸಕ ತುಕಾರಾಂ ಮಾಡಿದ್ದರು. ಇದೀಗ ತಹಸಿಲ್ದಾರ್ ರಶ್ಮಿ ಅವರನ್ನು ವರ್ಗಾವಣೆ ಮಾಡಿಸಲು ಕೊನೆಗೂ ಯಶಸ್ವಿಯಾಗಿದ್ದಾರೆ.

Tap to resize

Latest Videos

undefined

ರಶ್ಮಿ ಅವರನ್ನು ವರ್ಗ ಮಾಡುವಂತೆ ಕಳೆದ ಸಾರಿಯ ಕಲಾಪದಲ್ಲಿಯೇ ತುಕಾರಾಂ ಕೇಳಿಕೊಂಡಿದ್ದರು. ಯಡಿಯೂರಪ್ಪ ಸಿಎಂ ಇದ್ದಾಗ ಅವರಿಗೆ ಪತ್ರ ಬರೆದಿದ್ದರು.

ಆದ್ರೇ ಇದೀಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಒತ್ತಾಯಕ್ಕೆ ಮಣಿದ ಸರ್ಕಾರ ರಶ್ಮಿ ಅವರನ್ನು ವರ್ಗಾವಣೆ ಮಾಡಿದೆ. ಸರ್ಕಾರದ  ಸೂಚನೆಯಂತೆ ಬಳ್ಳಾರಿ  ಜಿಲ್ಲಾಧಿಕಾರಿ  ರಶ್ಮಿ ಅವರನ್ನು ವರ್ಗಾವಣೆ ಮಾಡಿದ್ದಾರೆ. ಆ ಸ್ಥಳಕ್ಕೆ  ಜಿಲ್ಲಾಧಿಕಾರಿಗಳ ಕಚೇರಿಯ ಪುರಸಭೆ ತಹಶೀಲ್ದಾರ್ ವಿಶ್ವಜಿತ್ ಮೆಹತಾ ಅವರಿಗೆ ಜವಾಬ್ದಾರಿ ನೀಡಲಾಗಿದೆ.

ಸ್ವಾತಂತ್ರ್ಯ ದಿನದ  ಧ್ವಜಾರೋಹಣಕ್ಕೆ ಶಾಸಕರು ಗೈರಾಗಿದ್ದರು. ಧ್ವಜಾರೋಹಣಕ್ಕೆ ಶಾಸಕರಿಗೆ ಮನೆಗೆ ಬಂದು ಆಹ್ವಾನ ನೀಡಿಲ್ಲ ಎನ್ನುವ ಕಾರಣಕ್ಕೆ ತುಕಾರಾಂ ಅಸಮಾಧಾನದಿಂದ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ.  ಶಾಸಕರ ಅನುಪಸ್ಥಿತಿಯಲ್ಲಿ ರಶ್ಮಿ ಧ್ವಜಾರೋಹಣ ಮಾಡಿದ್ದರು.

 ಬೆಳಗಾವಿ ಅಧಿವೇಶನದಲ್ಲಿ ತಹಶೀಲ್ದಾರ್ ವಿರುದ್ಧ  ತುಕಾರಾಂ  ಹಕ್ಕುಚ್ಯುತಿ ಪ್ರಸ್ತಾಪ ಮಂಡನೆ ಮಾಡಿದರು. ತಹಶೀಲ್ದಾರ್ ಕಾಲೇಜಿನಲ್ಲಿ ಪಾರ್ಟಿ ಮಾಡುತ್ತಾರೆ. ಕರ್ತವ್ಯ ಲೋಪ ಹಾಗೂ ಭ್ರಷ್ಟಾಚಾರದ ಆರೋಪ ಅವರ ಮೇಲಿದೆ.  ಜನರೊಂದಿಗೆ ಸರಿಯಾದ ರೀತಿಯಲ್ಲಿ ವರ್ತಿಸುವುದಿಲ್ಲ ಎಂದ ತುಕಾರಾಂ ಸದನದಲ್ಲಿ ಕೆಲ ಪೋಟೋಗಳನ್ನು ಪ್ರದರ್ಶನ ಮಾಡಿದ್ದರು.

ತುಕಾರಾಂ ಬೆನ್ನಿಗೆ ನಿಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸದಸ್ಯರು ತಹಶೀಲ್ದಾರ್ ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದರು.  ಜನಪ್ರತಿನಿಧೀಗಳ ಜತೆ ಸರಿಯಾಗಿ ವರ್ತಿಸಿದ ಅಧಿಕಾರಿಗಳ ಮೇಲೆ ಕಢಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದರು. 

Belagavi Assembly Session: ಪೊಲೀಸ್‌ ಕ್ವಾರ್ಟರ್ಸ್‌ ಕೋಳಿ ಗೂಡಿನಂತಿವೆ: ಸ್ಪೀಕರ್‌ ಕಾಗೇರಿ ಕಿಡಿ

ರೋಹಿಣಿ ಸಿಂಧೂರಿ ವರ್ಸಸ್ ಜನಪ್ರತಿನಿಧಿಗಳು: ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಮೇಲೆಯೂ ಜನಪ್ರತಿನಿಧಿಗಳು ಸರಣಿ ಆರೋಪ ಮಾಡಿದ್ದರು. 
ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿ, ತೇಜೋವಧೆಗೆ ಯತ್ನಿಸಿದ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಕೆ.ಆರ್‌. ನಗರ ಶಾಸಕ ಸಾ.ರಾ. ಮಹೇಶ್‌ ಹೇಳಿದ್ದರು.

ರೋಹಿಣಿಯವರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಸಾರಾ ಚೌಲ್ಟ್ರಿಯನ್ನು ರಾಜಕಾಲುವೆ ಮೇಲೆ ನಿರ್ಮಿಸಲಾಗಿದೆ ಎಂದಿದ್ದರು. ಆದರೆ ಪ್ರಾದೇಶಿಕ ಆಯುಕ್ತರು ರಚಿಸಿದ್ದ ತಂಡ ನೀಡಿರುವ ವರದಿಯಲ್ಲಿ ತಮಗೆ ಕ್ಲೀನ್‌ಚಿಟ್‌ ನೀಡಲಾಗಿದೆ.  ಈ ರೀತಿ ತಮ್ಮ ತೇಜೋವಧೆ ಹಾಗೂ ಸುಳ್ಳು ಆರೋಪ ಮಾಡಿರುವುದರಿಂದ ಮುಂದಿನ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡಿಸಲು ಅನುಮತಿ ಕೋರಿ ಸ್ವೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸಂಪೂರ್ಣ ದಾಖಲೆಗಳ ಸಮೇತ ಪತ್ರ ಬರೆದಿದ್ದೇನೆ ಎಂದು ಹೇಳಿದ್ದರು.  ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ್ ಸಿಂಹ ಸಹ ರೋಹಿಣಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು.

ಕಾಂಗ್ರೆಸ್ ಸದಸ್ಯರ ಅಮಾನತು: ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ (Protest) ಮಾಡುತ್ತಿದ್ದ ಕಾಂಗ್ರೆಸ್ (Congress)ಸದಸ್ಯರನ್ನು ಒಂದು ದಿನದ ಮಟ್ಟಿಗೆ ವಿಧಾನ ಪರಿಷತ್ ನಿಂದ (Legislative council) ಅಮಾನತು ಮಾಡಲಾಗಿದೆ. ಸಭಾಪತಿ ಆದೇಶ ಉಲ್ಲಂಘಿಸಿದ್ದಕ್ಕೆ ಶಿಕ್ಷೆಗೆ ಗುರಿಯಾಗಿದ್ದಾರೆ.

ಸದನದ (Belagavi Suvarna Siudha)ಬಾವಿಗಿಳಿದು ಧರಣಿ ಮಾಡಿದ್ದ ಸದಸ್ಯರನ್ನು ಅಮಾನತು ಮಾಡಲಾಗಿದೆ. ಸಭಾಪತಿ ಸ್ಥಾನದಲ್ಲಿ ಬಿಜೆಪಿಯ ಸದಸ್ಯೆ ತೇಜಸ್ವಿನಿ ಗೌಡ ಇದ್ದರು.   ಸಿಎಂ ಇಬ್ರಾಹಿಂ, ಪಿಆರ್ ರಮೇಶ್,  ಆರ್ ರಮೇಶ್, ನಾರಾಯಣ ಸ್ವಾಮಿ, ಬಿಕೆ ಹರಿಪ್ರಸಾದ್, ಯಬಿ ವೆಂಕಟೇಶ್, ವೀಣಾ ಅಚ್ಚಯ್ಯ ಸೇರಿ ಹದಿನಾಲ್ಕು ಜನ ಅಮಾನತಿಗೆ ಗುರಿಯಾಗಿದ್ದಾರೆ

 

click me!