ಬೆಂಗಳೂರು (ಡಿ.15): ದಕ್ಷಿಣ ಆಫಿಕ್ರಾದಿಂದ ಬಂದು ಒಮಿಕ್ರೋನ್ (Omicron) ಧೃಡಪಟಿದ್ದ 34 ವರ್ಷದ ಸೋಂಕಿತ ಸಂಪೂರ್ಣ ಗುಣಮುಖನಾಗಿದ್ದು, ಮಂಗಳವಾರ ಸಂಜೆ ಆಸ್ಪತ್ರೆಯಿಂದ (Hospital) ಬಿಡುಗಡೆ ಮಾಡಲಾಗಿದೆ. ಈ ಮೂಲಕ ಒಮಿಕ್ರೋನ್ ರೂಪಾಂತರಿ ತಗುಲಿ ಗುಣಮುಖರಾದ ರಾಜ್ಯದ ಮೊದಲ ವ್ಯಕ್ತಿ ಇವರಾಗಿದ್ದಾರೆ. ರಾಜ್ಯದಲ್ಲಿ ಈವರೆಗೂ ದಕ್ಷಿಣ ಆಫ್ರಿಕಾದಿಂದ (South Africa) ಬಂದ ಇಬ್ಬರು ಮತ್ತು ಅಂತರಾಷ್ಟ್ರೀಯ ಸಭೆಯಲ್ಲಿ ಭಾಗವಹಿಸಿದ್ದ ವೈದ್ಯರೊಬ್ಬರಲ್ಲಿ ಒಮಿಕ್ರೋನ್ ದೃಢಪಟ್ಟಿದೆ. ಈ ಪೈಕಿ ಇಬ್ಬರು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನೊಬ್ಬ (ಎರಡನೇ ಸೋಂಕಿತ 66 ವರ್ಷದ ವೃದ್ಧ) ನಕಲಿ ಸೋಂಕು ವರದಿ ಸಲ್ಲಿಸಿ ವಿದೇಶಕ್ಕೆ ತೆರಳಿದ್ದು, ಈ ಕುರಿತು ಪೊಲೀಸರು (Police) ತನಿಖೆ ನಡೆಸಿದ್ದಾರೆ.
ಮೊದಲ ಸೋಂಕಿತ ಇನ್ನೂ ಆಸ್ಪತ್ರೆಯಲ್ಲಿ:
undefined
ಅಂತಾರಾಷ್ಟ್ರೀಯ ಸಭೆಯೊಂದರಲ್ಲಿ ಭಾಗವಹಿಸಿ ಡಿ.1 ರಂದು ಒಮಿಕ್ರೋನ್ ದೃಢಪಟ್ಟಿದ್ದ 46 ವರ್ಷದ ಬೆಂಗಳೂರು (Bengaluru) ಮೂಲದ ವೈದ್ಯನಿಗೆ (Doctor) ಚಿಕಿತ್ಸೆ ಮುಂದವರೆಸಲಾಗಿದೆ. ಸೋಮವಾರ ನಡೆಸಿದ ಪರೀಕ್ಷೆಯಲ್ಲಿ ರೋಗ ಪ್ರತಿಕಾಯಗಳ ಉತ್ಪತ್ತಿ ಪ್ರಮಾಣ ಸಾಮಾನ್ಯಕ್ಕಿಂತಲೂ ಕಡಿಮೆ ಇರುವ ಕಾರಣ ಇನ್ನು ಒಂದು ದಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಅವಶ್ಯಕವಿದೆ. ಸದ್ಯ ಸೊಂಕಿನ ಲಕ್ಷಣಗಳಿಲ್ಲ, ಬುಧವಾರ ಮತ್ತೊಂದು ಪರೀಕ್ಷೆ ನಡೆಸಿ ಫಲಿತಾಂಶ ಆಧರಿಸಿ ಬಿಡುಗಡೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಸದ್ಯ ಗುಣಮುಖರಾಗಿರುವ ವ್ಯಕ್ತಿ ಡಿ.1ರಂದು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದರು. ವಿಮಾನ ನಿಲ್ದಾಣದಲ್ಲಿ ಸೋಂಕು ಪರೀಕ್ಷೆ ನಡೆಸಿ ವರದಿ ನೆಗೆಟಿವ್ ಬಂದ ಹಿನ್ನೆಲೆ ಮನೆಯಲ್ಲಿ ಕ್ವಾರಂಟೈನ್ ಇದ್ದರು. ಆದರೆ, ಎರಡು ದಿನಗಳ ಬಳಿಕ (ಡಿ.3) ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಕಾರಣಕ್ಕೆ ಆರ್‌ಟಿಪಿಸಿಆರ್ (RTPCR) ಪರೀಕ್ಷೆ ನಡೆಸಿದಾಗ ಕೊರೋನಾ (Corona) ದೃಢಪಟ್ಟಿತ್ತು. ಕೂಡಲೇ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ, ವಂಶವಾಹಿ ಪರೀಕ್ಷೆ ನಡೆಸಲಾಗಿತ್ತು. ಕಳೆದ ಭಾನುವಾರ (ಡಿ.12) ವರದಿ ಬಂದಿದ್ದು, ಒಮಿಕ್ರೋನ್ ದೃಢ ಪಟ್ಟಿತ್ತು.
‘ಸರ್ಕಾರದ ಮಾರ್ಗ ಸೂಚಿಯಂತೆ ಆಸ್ಪತ್ರೆ(Hospital) ದಾಖಲಾಗಿ 10 ದಿನಗಳು ಪೂರ್ಣಗೊಂಡಿದ್ದು, ಎರಡು ಬಾರಿ ಆರ್‌ಟಿಪಿಸಿಆರ್ (RTPCR) ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಸೋಂಕಿತ ಸಂಪೂರ್ಣ ಆರೋಗ್ಯವಾಗಿದ್ದಾರೆ. ಈ ಹಿನ್ನೆಲೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಈ ಸೋಂಕಿತರ ಸಂಪರ್ಕದಲ್ಲಿದ್ದ ಎಲ್ಲಾ 20 ಮಂದಿಯ ಕೊರೊನಾ (Corona) ವರದಿ ನೆಗೆಟಿವ್ ಬಂದಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಮುಂದಿನ ಒಂದು ವಾರ ಹೋಂ ಕ್ವಾರಂಟೈನ್ ಸೂಚಿಸಲಾಗಿದೆ. ವಾರದ ಬಳಿಕ ಮತ್ತೆ ಸೋಂಕು ಪರೀಕ್ಷೆ ಸೇರಿದಂತೆ ಕೊರೋನಾ ನಂತರದ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ’ ಎಂದು ಬೌರಿಂಗ್ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದರು.
ಬ್ರಿಟನ್‌ನಲ್ಲಿ ನಿತ್ಯ 2 ಲಕ್ಷ ಜನರಿಗೆ ಒಮಿಕ್ರಾನ್ : ಭಾರೀ ಆತಂಕ ಹುಟ್ಟುಹಾಕಿರುವ ಒಮಿಕ್ರೋನ್ ಸೋಂಕಿತರ ಸಂಖ್ಯೆ (Omicron Variant) ಬ್ರಿಟನ್‌ನಲ್ಲಿ 2-3 ದಿನಕ್ಕೊಮ್ಮೆ ದ್ವಿಗುಣವಾಗುತ್ತಿದೆ. ಮಾದರಿ ಅಧ್ಯಯನಗಳ ಅನ್ವಯ ಈಗಾಗಲೇ ದೇಶದಲ್ಲಿ ನಿತ್ಯವೂ 2 ಲಕ್ಷ ಜನರಿಗೆ ಹೊಸ ವೈರಸ್ ಅಂಟುತ್ತಿರುವ ಭೀತಿ ಇದೆ ಎಂದು ಬ್ರಿಟನ್ (Britain) ಆರೋಗ್ಯ ಇಲಾಖೆ ಅಂದಾಜು ಮಾಡಿದೆ.
ಸೋಮವಾರ ಬ್ರಿಟನ್‌ನಲ್ಲಿ ಒಂದು ಒಮಿಕ್ರೋನ್ ಪೀಡಿತನ ಸಾವು ಸಂಭವಿಸಿತ್ತು. ಇದರ ಬೆನ್ನಲ್ಲೇ ಮಾತನಾಡಿರುವ ಬ್ರಿಟನ್ ಆರೋಗ್ಯ ಕಾರ್ಯದರ್ಶಿ ಸಾಜಿದ್ ವಾಜಿದ್, ‘ಈಗಾಗಲೇ 2 ವಾರಗಳಿಂದ ದೇಶದಲ್ಲಿ ಸೋಂಕಿನ ಏರಿಕೆ ದಾಖಲಾಗುತ್ತಿದೆ.
ಹಾಲಿ ಇಂಗ್ಲೆಂಡ್‌ನಲ್ಲಿ ದಾಖಲಾಗುತ್ತಿರುವ ಕೇಸಲ್ಲಿ ಒಮಿಕ್ರೋನ್ ಪಾಲು ಶೇ.20 ತಲುಪಿದೆ, ಲಂಡನ್‌ನಲ್ಲಿ ಈಗಾಗಲೇ ಇದು ಶೇ.44ಕ್ಕೇರಿದೆ. ಇನ್ನು 48 ಗಂಟೆಗಳಲ್ಲಿ ಒಮಿಕ್ರೋನ್ ಕೇಸುಗಳು ಇನ್ನಷ್ಟುಹೆಚ್ಚಳ ಆಗಬಹುದು. ಸೌಮ್ಯ ಸೋಂಕಿನ ಲಕ್ಷಣ ಇರುವ, ಯಾವುದೇ ಲಕ್ಷಣ ಇರದ, ಪರೀಕ್ಷೆ ಮಾಡಿಸದೇ ಇರುವವರ ಲೆಕ್ಕವನ್ನು ಆಧರಿಸಿ ನಡೆದ ಮಾದರಿ ಅಧ್ಯಯನದ ಅನ್ವಯ ನಿತ್ಯವೂ 2 ಲಕ್ಷ ಜನರಿಗೆ ಹೊಸ ಸೋಂಕು ತಗುಲುತ್ತಿರುವ ಆತಂಕ ಇದೆ. ಈಗ ಬ್ರಿಟನ್‌ನಲ್ಲಿ ಖಚಿತಪಟ್ಟ4713 ಒಮಿಕ್ರೋನ್ ಕೇಸುಗಳಿವೆ. ಈ ಪೈಕಿ 250 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.