ಬ್ರಾಹ್ಮಣ ವಿದ್ಯಾರ್ಥಿನಿಗೆ ಬಲವಂತವಾಗಿ ಮೊಟ್ಟೆ ತಿನ್ನಿಸಿದ ಶಿಕ್ಷಕ!

By Kannadaprabha News  |  First Published Nov 24, 2023, 6:16 AM IST

ಬಿಸಿಯೂಟದ ವೇಳೆ ಬ್ರಾಹ್ಮಣ ವಿದ್ಯಾರ್ಥಿನಿಗೆ ಶಾಲಾ ಶಿಕ್ಷಕರೊಬ್ಬರು ಬಲವಂತವಾಗಿ ಮೊಟ್ಟೆ ತಿನ್ನಿಸಿದ ಘಟನೆ ಮಂಗಳವಾರ ಅಮೃತ ಗ್ರಾಮದ ಕೆಪಿಎಸ್‌ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಈ ಕುರಿತು ಅಧಿಕಾರಿಗಳ ಮಧ್ಯಪ್ರವೇಶದ ಬಳಿಕ ಶಿಕ್ಷಕ ತಮ್ಮ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ.


ಶಿವಮೊಗ್ಗ (ನ.24): ಬಿಸಿಯೂಟದ ವೇಳೆ ಬ್ರಾಹ್ಮಣ ವಿದ್ಯಾರ್ಥಿನಿಗೆ ಶಾಲಾ ಶಿಕ್ಷಕರೊಬ್ಬರು ಬಲವಂತವಾಗಿ ಮೊಟ್ಟೆ ತಿನ್ನಿಸಿದ ಘಟನೆ ಮಂಗಳವಾರ ಅಮೃತ ಗ್ರಾಮದ ಕೆಪಿಎಸ್‌ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಈ ಕುರಿತು ಅಧಿಕಾರಿಗಳ ಮಧ್ಯಪ್ರವೇಶದ ಬಳಿಕ ಶಿಕ್ಷಕ ತಮ್ಮ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ.

ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಮಹಾತ್ವಾಕಾಂಕ್ಷಿ ಯೋಜನೆಯಡಿ ಮೊಟ್ಟೆ ಮತ್ತು ಚಿಕ್ಕಿ ನೀಡುವ ಯೋಜನೆ ಜಾರಿಗೊಳಿಸಿತ್ತು. ಅದರಂತೆ ಅಮೃತ ಗ್ರಾಮದ ಕೆಪಿಎಸ್ ಪ್ರಾಥಮಿಕ ಶಾಲೆ(KPS Primary school amrita village shivamogga)ಯಲ್ಲೂ ಮಕ್ಕಳಿಗೆ ಮೊಟ್ಟೆ ನೀಡಲಾಗಿದ್ದು, ಬ್ರಾಹ್ಮಣ ವಿದ್ಯಾರ್ಥಿನಿಯೊಬ್ಬಳಿಗೆ ಶಿಕ್ಷಕರೊಬ್ಬರು ಬಲವಂತಾಗಿ ಮೊಟ್ಟೆ ತಿನ್ನಿಸಿದ್ದಾರೆ ಎನ್ನಲಾಗಿದೆ. ಬಳಿಕ ಹಿರಿಯ ಅಧಿಕಾರಿಗಳ ಮಧ್ಯ ಪ್ರವೇಶವಾಗಿದ್ದು, ಶಿಕ್ಷಕರು ತಮ್ಮ ತಪ್ಪಿಗಾಗಿ ಕ್ಷಮೆ ಕೋರಿದ್ದಾರೆ.

Latest Videos

undefined

ಮೊಟ್ಟೆ ನಿಜವಾಗಲೂ ಆರೋಗ್ಯಕ್ಕೆ ಒಳ್ಳೇಯದಾ? ಹಳದಿ ಬೆಸ್ಟೋ, ಬಿಳಿಯ ಪಾರ್ಟ್ ಒಳಿತೋ?

2ನೇ ತರಗತಿಯಲ್ಲಿ ಸುಮಾರು 26 ಮಕ್ಕಳಿದ್ದು, 10 ವಿದ್ಯಾರ್ಥಿಗಳು ನಿತ್ಯ ಚಿಕ್ಕಿ ಸೇವಿಸುತ್ತಿದ್ದಾರೆ. ಆದರೂ ಆ ಎಲ್ಲ ಮಕ್ಕಳಿಗೂ ಒತ್ತಾಯದಿಂದ ಶಿಕ್ಷಕ ಪುಟ್ಟನಾಯ್ಕ(Teacher puttanaik) ಮೊಟ್ಟೆ ನೀಡಿದ್ದರು ಎನ್ನಲಾಗಿದೆ. ಈ ಕುರಿತು ಪೋಷಕರು ಮೊದಲಿಗೆ ಶಾಲಾ ಅಡಳಿತ ಗಮನಕ್ಕೆ ತಂದಿದ್ದಾರೆ. ಆದರೂ ಶಾಲೆ ಆಡಳಿತ ವರ್ಗ ನಿರ್ಲಕ್ಷ್ಯ ತೋರಿದೆ. ಈ ಹಿನ್ನೆಲೆ ಪೋಷಕ ವರ್ಗ ಆಕ್ರೋಶಗೊಂಡಿದ್ದರು. ಬಳಿಕ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ದೂರು ನೀಡಿದ್ದು, ಗುರುವಾರ ಇಲಾಖೆ ಹಿರಿಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಶಿಕ್ಷಕ ಲೋಪ ಎಸಗಿರುವುದು ಕಂಡುಬಂದಿದೆ. ಶಿಕ್ಷಕರು ತಪ್ಪನ್ನು ಒಪ್ಪಿಕೊಂಡಿದ್ದು, ಪೋಷಕವರ್ಗ ಕೂಡ ದೂರು ಹಿಂಪಡೆದಿದೆ.

ಶಾಲಾ ಮಕ್ಕಳಿಗೆ ಮೊಟ್ಟೆಯ ಜತೆ ವಿಶೇಷ ಪೌಷ್ಠಿಕ ಆಹಾರ: ಸಚಿವ ಮಧು ಬಂಗಾರಪ್ಪ

click me!