ಕಲ್ಲಿದ್ದಲು ಕಳ್ಳತನ ವರದಿಗೆ ತೆರಳಿದ್ದ ಸುವರ್ಣ ನ್ಯೂಸ್ ವರದಿಗಾರ, ಕ್ಯಾಮೆರಾಮನ್‌ ಮೇಲೆ ರೈಲ್ವೆ ಪಿಎಸ್‌ಐ ದರ್ಪ!

By Kannadaprabha NewsFirst Published Nov 24, 2023, 5:34 AM IST
Highlights

 ಸುದ್ದಿ ಮಾಡಲು ಹೋಗಿದ್ದ ಏಷ್ಯಾನೆಟ್‌ ಸುವರ್ಣ ನ್ಯೂಸ್ ವಾಹಿನಿಯ ಜಿಲ್ಲಾ ವರದಿಗರರಾದ ಜಗನ್ನಾಥ ಪೂಜಾರ್ ಮತ್ತು ಕ್ಯಾಮರಾ ಮನ್ ಶ್ರೀನಿವಾಸ ಮೇಲೆ ರೈಲ್ವೆ ಪಿಎಸ್ಐ ಅಭಿಷೇಕ್ ಕುಮಾರ ಅನುಚಿತವಾಗಿ ವರ್ತಿಸಿದ್ದು,  ಅವರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ರಾಯಚೂರು (ನ.24): ಸುದ್ದಿ ಮಾಡಲು ಹೋಗಿದ್ದ ಏಷ್ಯಾನೆಟ್‌ ಸುವರ್ಣ ನ್ಯೂಸ್ ವಾಹಿನಿಯ ಜಿಲ್ಲಾ ವರದಿಗರರಾದ ಜಗನ್ನಾಥ ಪೂಜಾರ್ ಮತ್ತು ಕ್ಯಾಮರಾ ಮನ್ ಶ್ರೀನಿವಾಸ ಮೇಲೆ ರೈಲ್ವೆ ಪಿಎಸ್ಐ ಅಭಿಷೇಕ್ ಕುಮಾರ ಅನುಚಿತವಾಗಿ ವರ್ತಿಸಿದ್ದು, ಅವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಮಿತಿ ಮತ್ತು ರಾಯಚೂರು ಎಡಿಟರ್ಸ್ ಗಿಲ್ಡ್‌ ಒತ್ತಾಯಿಸಿತು.

ಸ್ಥಳೀಯ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಉಭಯ ಸಂಘಟನೆ ಪದಾಧಿಕಾರಿಗಳು, ಸದಸ್ಯರು ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ ನಾಯಕಗೆ ಮನವಿ ಸಲ್ಲಿಸಿ, ರೈಲ್ವೆ ಪೊಲೀಸ್‌ ವಿರುದ್ಧ ಅಗತ್ಯ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

Latest Videos

ಅನಾಥಾಶ್ರಮ ಹೆಸರಲ್ಲಿ ತಾಲಿಬಾನ್ ಮಾದರಿ ಶಿಕ್ಷಣ ನೀಡ್ತಿರೋ ಆರೋಪ ; ಆ ಬಗ್ಗೆ ನನಗೆ ಗೊತ್ತಿಲ್ಲ ಎಂದ ಗೃಹಸಚಿವ! 

ಸಮೀಪದ ಯರಮರಸ್ ರೈಲ್ವೆ ನಿಲ್ದಾಣದಲ್ಲಿ ಕಲ್ಲಿದ್ದಲು ಕಳ್ಳತನದ ವರದಿ ಕುರಿತಂತೆ ಕೆಪಿಸಿ ಅಧಿಕಾರಿಗಳ ತಂಡ ಪರಿಶೀಲನೆಗಾಗಿ ಆಗಮಿಸಿತ್ತು. ಇದರ ವರದಿಗಾಗಿ ಪತ್ರಕರ್ತರು ಹೋಗಿದ್ದ ವೇಳೆ ಸುವರ್ಣ ವಾಹಿನಿ ವರದಿಗಾರ ಜಗನ್ನಾಥ ಪೂಜಾರ ಮತ್ತು ಅವರ ಕ್ಯಾಮರಾಮನ್ ಶ್ರೀನಿವಾಸ ಸುದ್ದಿ ಮಾಡುತ್ತಿರುವಾಗ ಪಿಎಸ್ಐ ಅಭಿಷೇಕ ಕುಮಾರ ವಿಡಿಯೋ ಮಾಡದಂತೆ ತಡೆದು, ಕ್ಯಾಮೆರಾ ಜಪ್ತಿ ಮಾಡಿದ್ದಾರೆ. ನಂತರ ವಾಹಿನಿ ವರದಿಗಾರನನ್ನು ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡು ನಾಲ್ಕು ತಾಸುಗಳವರೆಗೆ ತಿರುಗಾಡಿಸಿ ಶಕ್ತಿನಗರದ ಗೆಸ್ಟ್ ಹೌಸ್ ಬಳಿ ಬಿಟ್ಟು ಕಳಿಸಿದ್ದಾರೆ. 

 

ವಿದ್ಯುತ್‌ ಕೊರತೆ ಇದ್ದರೂ ರೈತರಿಗೆ 3 ಪಾಳಿ ವಿದ್ಯುತ್: ಇಂಧನ ಸಚಿವ ಕೆ.ಜೆ. ಜಾರ್ಜ್

ಈ ಘಟನೆಯನ್ನು ಉಭಯ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದು, ಪಿಎಸ್ಐ ಅಭೀಷೇಕ್ ಕುಮಾರ ವಿರುದ್ಧ ಕಾನೂನು ಪ್ರಕಾರ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಉಭಯ ಸಂಘಟನೆಗಳ ಆರ್.ಗುರುನಾಥ, ಚೆನ್ನಬಸವಣ್ಣ, ಬಿ.ವೆಂಕಟಸಿಂಗ್, ಶಿವಮೂರ್ತಿ ಹೀರೆಮಠ, ಬಸವರಾಜ ನಾಗಡದಿನ್ನಿ, ವಿಜಯಜಾಗಟಗಲ್ , ಎಂ.ಪಾಷಾ ಹಟ್ಟಿ, ಜಗನ್ನಾಥ ಪೂಜಾರಿ, ರಾಮಕೃಷ್ಣ ದಾಸರಿ, ವಿಶ್ವನಾಥ್ ಹೂಗಾರ, ಭೀಮೇಶ, ನಾಗರಾಜ್, ಪ್ರಸನ್ನಕುಮಾರ್ ಜೈನ್, ಸಣ್ಣ ಈರಣ್ಣ, ಮಹಿಪಾಲರೆಡ್ಡಿ, ರವಿಕುಮಾರ್, ಶ್ರೀನಿವಾಸ, ಖಾದರ್, ಜಿಲಾನಿ, ಯಲ್ಲಪ್ಪ, ಮಲ್ಲಿಕಾರ್ಜುನ ಸ್ವಾಮಿ ಸೇರಿ ಹಿರಿಯ-ಕಿರಿಯ ಪತ್ರಕರ್ತರು, ಕ್ಯಾಮರಾಮನ್‌ಗಳು ಇದ್ದರು.

click me!