ರಾಜ್ಯದಲ್ಲಿ ಸಾವಿರಕ್ಕೂ ಅಧಿಕ ಬ್ಲಾಕ್ ಫಂಗಸ್ : ಸಾವಿನ ಸಂಖ್ಯೆಯೂ ಏರಿಕೆ

By Kannadaprabha NewsFirst Published Jun 1, 2021, 8:23 AM IST
Highlights
  • ದಿನದಿಂದ ದಿನಕ್ಕೆ ಬ್ಲಾಕ್‌ ಫಂಗಸ್‌ ಪ್ರಕರಣಗಳ ಏರಿಕೆ
  • ಬರೋಬ್ಬರಿ 1,319 ಮಂದಿ ಕಪ್ಪು ಶಿಲೀಂದ್ರ ಸೋಂಕಿಗೆ ಗುರಿ
  • ರಾಜ್ಯದಲ್ಲಿ ಚಿಕಿತ್ಸೆ ಫಲಕಾರಿಯಾಗದೆ 43 ಮಂದಿ ಸಾವು

ಬೆಂಗಳೂರು (ಜೂ.01): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬ್ಲಾಕ್‌ ಫಂಗಸ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು ಬರೋಬ್ಬರಿ 1,319 ಮಂದಿ ಕಪ್ಪು ಶಿಲೀಂದ್ರ ಸೋಂಕಿಗೆ ಗುರಿಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ 43 ಮಂದಿ ಮೃತಪಟ್ಟಿದ್ದಾರೆ. ಸೋಮವಾರ ಬೆಳಗ್ಗೆ 10.30 ವೇಳೆಗೆ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ 1,285 ಮಂದಿಗೆ ಸೋಂಕು ದೃಢಪಟ್ಟಿದ್ದು, 18 ಮಂದಿ ಗುಣಮುಖರಾಗಿದ್ದು, 41 ಮಂದಿ ಮೃತಪಟ್ಟಿದ್ದರು.

ಸೋಮವಾರ ಬೆಂಗಳೂರು ನಗರದಲ್ಲಿ 9, ಗದಗ 9, ಧಾರವಾಡ 5, ಬಾಗಲಕೋಟೆ 4, ಹಾವೇರಿ 3, ಉಡುಪಿ, ಚಿತ್ರದುರ್ಗ, ಬಳ್ಳಾರಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ 1 ಪ್ರಕರಣ ಸೇರಿ 34 ಪ್ರಕರಣ ವರದಿಯಾಗಿದೆ. ಈ ಮೂಲಕ ಒಟ್ಟು ಸೋಂಕು 1,319ಕ್ಕೆ ಏರಿಕೆಯಾಗಿದ್ದು ಸೋಮವಾರ ಬೌರಿಂಗ್‌ ಆಸ್ಪತ್ರೆ ಮತ್ತು ಹಾಗೂ ಶಿವಮೊಗ್ಗದಲ್ಲಿ ತಲಾ ಒಬ್ಬರು ಮೃತರಾಗಿದ್ದು,ಸಾವಿನ ಸಂಖ್ಯೆ 43ಕ್ಕೆ ಏರಿಕೆಯಾಗಿದೆ.

ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಹೆಚ್ಚುತ್ತಿದೆ ಸ್ಟ್ರೋಕ್, ಹಾರ್ಟ್‌ ಆ್ಯಟಾಕ್! ...

ಈವರೆಗೆ ಒಟ್ಟು ಬೆಂಗಳೂರು ನಗರದಲ್ಲಿ 545 ಮಂದಿ, ಧಾರವಾಡ 124, ಕಲಬುರಗಿ 102, ವಿಜಯಪುರ 57, ಬಾಗಲಕೋಟೆ 73, ವಿಜಯಪುರ 57, ಬೆಳಗಾವಿ 47, ಕೋಲಾರ 42, ಶಿವಮೊಗ್ಗ 38, ಮೈಸೂರು 35, ರಾಯಚೂರು 36, ಚಿತ್ರದುರ್ಗ 34, ಬೆಂಗಳೂರು ಗ್ರಾಮಾಂತರ 20, ದಕ್ಷಿಣ ಕನ್ನಡ 28, ದಾವಣಗೆರೆ 24, ಗದಗ 19, ಬೀದರ್‌ 18, ಕೊಪ್ಪಳ 14, ತುಮಕೂರು 10, ಹಾಸನ 9, ಹಾವೇರಿ, ಉಡುಪಿ ತಲಾ 11, ಬಳ್ಳಾರಿ 7, ಮಂಡ್ಯ, ರಾಮನಗರ, ಉತ್ತರ ಕನ್ನಡ, ಯಾದಗಿರಿ ತಲಾ 3, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ತಲಾ 1 ಪ್ರಕರಣ ವರದಿಯಾಗಿದೆ.

43 ಸಾವು: ಈವರೆಗೆ ಧಾರವಾಡ 8, ಶಿವಮೊಗ್ಗ 6, ಕಲಬುರಗಿ 4, ಬೆಂಗಳೂರು 5, ದಕ್ಷಿಣ ಕನ್ನಡ 4, ಹಾಸನ 3, ಬೆಂಗಳೂರು ಗ್ರಾಮಾಂತರ, ಕೊಪ್ಪಳ, ಕೋಲಾರ ತಲಾ 2, ಬಾಗಲಕೋಟೆ, ಬೆಳಗಾವಿ , ಬೀದರ್‌, ಚಿಕ್ಕಬಳ್ಳಾಪುರ, ದಾವಣಗೆರೆ, ರಾಯಚೂರು, ಯಾದಗಿರಿಯಲ್ಲಿ ತಲಾ ಒಬ್ಬರು ಸೇರಿ ಒಟ್ಟು 43 ಮಂದಿ ಮೃತಪಟ್ಟಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!