ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ನೇಮಕವಾಗಿದೆ. ಸೂಕ್ತವಾದ ವ್ಯಕ್ತಿಯನ್ನು ವಿರೋಧಪಕ್ಷದ ನಾಯಕರನ್ನಾಗಿ ನಮ್ಮ ನಾಯಕರು ನೇಮಕ ಮಾಡುತ್ತಾರೆ. ನಾನೂ ಪ್ರತಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ ಹೇಳಿದರು.
ಮೈಸೂರು (ನ.11): ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ನೇಮಕವಾಗಿದೆ. ಸೂಕ್ತವಾದ ವ್ಯಕ್ತಿಯನ್ನು ವಿರೋಧಪಕ್ಷದ ನಾಯಕರನ್ನಾಗಿ ನಮ್ಮ ನಾಯಕರು ನೇಮಕ ಮಾಡುತ್ತಾರೆ. ನಾನೂ ಪ್ರತಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ ಹೇಳಿದರು.
ಬಿವೈ ವಿಜಯೇಂದ್ರ ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾಗಿದೆ. ಮುಂದಿನ ವಿರೋಧ ಪಕ್ಷ ನಾಯಕನನ್ನಾಗಿ ಆಯ್ಕೆ ಮಾಡೋ ವಿಚಾರ ಸಂಬಂಧ ಇಂದು ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿಧಾನ ಸಭೆಯಲ್ಲಿರೋ 66 ಜನ ಶಾಸಕರಿದ್ದಾರೆ. ಎಲ್ಲರೂ ವಿರೋಧ ಪಕ್ಷದ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದಾರೆ. ನಾನೂ ಕೂಡ ಆಕಾಂಕ್ಷಿಯಾಗಿದ್ದೇನೆ ಎಂದರು. ಇದೇ ವೇಳೆ ವಿರೋಧ ಪಕ್ಷದ ನಾಯಕರನ್ನಾಗಿ ಎಚ್‌ಡಿಕೆಯನ್ನ ನೇಮಿಸಲಾಗುತ್ತದ ಎಂಬ ಪ್ರಶ್ನೆಗೆ ನಮ್ಮಲ್ಲೇ ಬೇಕಾದಷ್ಟು ನಾಯಕರಿದ್ದಾರೆ. ಜೆಡಿಎಸ್ ಜೊತೆ ಮೈತ್ರಿ ಆಗಿರಬಹುದು. ಅಂದ ಮಾತ್ರಕ್ಕೆ ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾನ ಕೊಡಬೇಕು ಅಂತಾ ಏನೂ ಇಲ್ಲ ಎನ್ನುವ ಮೂಲಕ ನಿರಾಕರಿಸಿದರು.
48 ದಿನಗಳ ಬಳಿಕ ಇಂದು ಶ್ರೀರಾಮ ಸೇನೆ ಕಾರ್ಯಕರ್ತರ ಬಿಡುಗಡೆ; ಪರಪ್ಪನ ಆಗ್ರಹಾರಕ್ಕೆ ಆಗಮಿಸಿದ ಪ್ರಮೋದ್ ಮುತಾಲಿಕ್
ಇನ್ನು ಬಿಜೆಪಿ ನಾಯಕರು ಬಿವೈ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾದ್ಯಕ್ಷರನ್ನಾಗಿ ಮಾಡಿದ್ದಾರೆ. ವಿಜಯೇಂದ್ರ ಯುವಕರಿದ್ದಾರೆ. ಪಕ್ಷವನ್ನು ಸಮರ್ಥವಾಗಿ ಕಟ್ಟುತ್ತಾರೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಜನ ಆಕಾಂಕ್ಷಿಗಳಿದ್ದರು. ಆ ಪೈಕಿ ಹಿರಿಯರೂ ಇದ್ದರು. ಆದರೆ ಹಿರಿಯರಿಗೆ ಕೊಡಬಾರದು ಅಂತೇನಿಲ್ಲ. ವಿ.ಸೋಮಣ್ಣ ಪ್ರಭಾವಿ ನಾಯಕರು. ಅವರಿಗೆ ಎಲ್ಲಾ ರೀತಿಯ ಅರ್ಹತೆ ಇತ್ತು. ಇತ್ತ ಸಿ.ಟಿ.ರವಿ ಅವರಿಗೂ ಪಕ್ಷ ಅನೇಕ ಹುದ್ದೆಗಳನ್ನ ನೀಡಿದೆ. ಒಂದೇ ಹುದ್ದೆ ಎಲ್ಲರಿಗೂ ಕೊಡಲಿಕ್ಕೆ ಆಗಲ್ಲ. ಹೀಗಾಗಿ ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿ ಇರಬೇಕಾಗುತ್ತದೆ ಎಂದರು.
ತುಮಕೂರಲ್ಲಿ ಪುಂಡರ ಹಾವಳಿ; ಹಿಡಿಯಲು ಹೋದ ಪೊಲೀಸರ ಮೇಲೂ ಮಚ್ಚು ಬೀಸಿದ ಕಿರಾತಕರು!