48 ದಿನಗಳ ಬಳಿಕ ಇಂದು ಶ್ರೀರಾಮ ಸೇನೆ ಕಾರ್ಯಕರ್ತರ ಬಿಡುಗಡೆ; ಪರಪ್ಪನ ಆಗ್ರಹಾರಕ್ಕೆ ಆಗಮಿಸಿದ ಪ್ರಮೋದ್ ಮುತಾಲಿಕ್

By Ravi Janekal  |  First Published Nov 11, 2023, 1:00 PM IST

ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ದುಷ್ಕರ್ಮಿಗಳ ಮೇಲೆ ದಾಳಿ ನಡೆಸಿ ಬಂಧನಕ್ಕೊಳಗಾಗಿದ್ದ ಶ್ರೀರಾಮಸೇನೆ ಕಾರ್ಯಕರ್ತರು. 48 ದಿನಗಳ ಜೈಲು ವಾಸದ ಬಳಿಕ ಇಂದು ಬಿಡುಗಡೆಯಾಗಲಿದ್ದಾರೆ. ಈ ಹಿನ್ನೆಲೆ ಶ್ರೀರಾಮ ಸೇನೆ ಸಂಸ್ಥಾಪಕ, ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಾರ್ಯಕರ್ತರನ್ನು ಸ್ವಾಗತಿಸಲು ಪರಪ್ಪನ ಆಗ್ರಹಾರ ಜೈಲು ಬಳಿ ಆಗಮಿಸಿದರು.


ಬೆಂಗಳೂರು (ನ.11) : ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ದುಷ್ಕರ್ಮಿಗಳ ಮೇಲೆ ದಾಳಿ ನಡೆಸಿ ಬಂಧನಕ್ಕೊಳಗಾಗಿದ್ದ ಶ್ರೀರಾಮಸೇನೆ ಕಾರ್ಯಕರ್ತರು. 48 ದಿನಗಳ ಜೈಲು ವಾಸದ ಬಳಿಕ ಇಂದು ಬಿಡುಗಡೆಯಾಗಲಿದ್ದಾರೆ. ಈ ಹಿನ್ನೆಲೆ ಶ್ರೀರಾಮ ಸೇನೆ ಸಂಸ್ಥಾಪಕ, ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಾರ್ಯಕರ್ತರನ್ನು ಸ್ವಾಗತಿಸಲು ಪರಪ್ಪನ ಆಗ್ರಹಾರ ಜೈಲು ಬಳಿ ಆಗಮಿಸಿದರು.

ತುಮಕೂರಲ್ಲಿ ಪುಂಡರ ಹಾವಳಿ; ಹಿಡಿಯಲು ಹೋದ ಪೊಲೀಸರ ಮೇಲೂ ಮಚ್ಚು ಬೀಸಿದ ಕಿರಾತಕರು!

Tap to resize

Latest Videos

16 ಜನ ಶ್ರೀರಾಮ ಸೇನೆ ಕಾರ್ಯಕರ್ತರನ್ನು ಬಂದಿಸಲಾಗಿತ್ತು.

ಸೆ.23ರಂದು ದೊಡ್ಡಬಳ್ಳಾಪುರದಲ್ಲಿ ಟಿ.ಬಿ ಕ್ರಾಸ್ ಬಳಿ ನಡೆದಿದ್ದ ಪ್ರಕರಣ. ಅಕ್ರಮವಾಗಿ 30 ಟನ್ ಗೋಮಾಂಸ  ಹಿಂದುಪುರದಿಂದ ಬೆಂಗಳೂರಿನ  ಶಿವಾಜಿ ನಗರಕ್ಕೆ ಏಳು ಬುಲೆರೋ, ಟಾಟಾ ಇಂಡಿಕಾದಲ್ಲಿ ಗೋಮಂಸ ಸಾಗಾಟ ಮಾಡುತ್ತಿದ್ದ ದುಷ್ಕರ್ಮಿಗಳು. ಸಾಗಾಟ ಮಾಡುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ್ದ ಶ್ರೀರಾಮಸೇನೆ ಕಾರ್ಯಕರ್ತರು. 

ಕಾರ್ಯಾಚರಣೆ ಮಾಡಿದಾಗ ಕಾರು ಹತ್ತಿಸಲು ಮುಂದಾಗಿದ್ರು. ಈ ವೇಳೆ ಶ್ರೀರಾಮ ಸೇನೆ ಕಾರ್ಯಕರ್ತರು ಹಾಗೂ ಗೋಮಾಂಸ ಸಾಗಾಟ ಮಾಡುತ್ತಿದ್ದವರ ನಡುವೆ ಗಲಾಟೆ ಆಗಿತ್ತು. ಈ ಪ್ರಕರಣದಲ್ಲಿ ಡಕಾಯತಿ ಕೇಸ್ ದಾಖಲಾಗಿ ಒಟ್ಟು 16 ಜನ ಶ್ರೀರಾಮಸೇನೆ ಕಾರ್ಯಕರ್ತರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿತ್ತು. ಇಂದು ಬೇಲ್ ಮೂಲಕ ಬಿಡುಗಡೆ ಆಗಲಿರುವ ಕಾರ್ಯಕರ್ತರು. 16 ಜನರ ಪೈಕಿ 15 ಜನ ಜೈಲಿನಿಂದ ಇಂದು ಬಿಡುಗಡೆಯಾಗಲಿದ್ದಾರೆ. ಹೀಗಾಗಿ ಕಾರ್ಯಕರ್ತರನ್ನು ಸ್ವಾಗತಿಸಲು ಪ್ರಮೋದ ಮುತಾಲಿಕ್ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ.

click me!