Chandru Murder Case: ಗೃಹ ಸಚಿವರಿಂದಲೇ ಪೊಲೀಸರು ಸುಳ್ಳು ಹೇಳಿಸಿದ್ದಾರೆ: ಸಿ.ಟಿ. ರವಿ

By Girish Goudar  |  First Published Apr 8, 2022, 5:25 AM IST

*  ಚಂದ್ರು ಕೊಲೆಗೆ ಉರ್ದು ಭಾಷೆ ಬಾರದಿರುವುದೂ ಕಾರಣ
*  ಇದು ಗಲಭೆಗೆ ಕಾರಣವಾಗಬಾರದು ಎಂದು ಸುಳ್ಳು ಹೇಳಿಕೆ
*  ಮೃತನ ತಾಯಿಯೇ ಉರ್ದು ಕಾರಣ ಎಂದಿದ್ದಾರೆ
 


ಬೆಂಗಳೂರು(ಏ.08):  ಜೆಜೆ ನಗರದಲ್ಲಿ ಮಂಗಳವಾರ ರಾತ್ರಿ ನಡೆದಿದ್ದ ಚಂದ್ರು ಕೊಲೆಗೆ(Chandru) ಉರ್ದು ಭಾಷೆ ಬಾರದೆ ಇರುವುದು ಕೂಡ ಕಾರಣ. ಆದರೆ ಇದು ಗಲಭೆಗೆ ಕಾರಣ ಆಗಬಾರದು ಎಂಬ ಕಾರಣಕ್ಕೆ ಗೃಹ ಸಚಿವರಿಂದ ಪೊಲೀಸರೇ ಸುಳ್ಳು ಹೇಳಿಸಿದ್ದಾರೆ ಎಂಬುದು ನನ್ನ ಭಾವನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ(CT Ravi) ಹೇಳಿದ್ದಾರೆ. ‘ಗುರುವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೈಕ್‌ ಅಪಘಾತದಿಂದ ಯಾರಿಗೂ ಪೆಟ್ಟಾಗಿಲ್ಲ. ಯಾರ ಗಾಡಿಗೂ ಡ್ಯಾಮೇಜ್‌ ಆಗಿಲ್ಲ. ಭಾಷೆ ಬಾರದಿರುವುದು ಕೂಡ ಕಾರಣ ಎಂದು ಮೃತನ ತಾಯಿಯೇ ತಿಳಿಸಿದ್ದಾರೆ’ ಎಂದು ಸಮರ್ಥಿಸಿಕೊಂಡರು.

ಉರ್ದು(Urdu) ಭಾಷೆ ಬಾರದಿರುವುದು ಕಾರಣವಲ್ಲ ಎಂಬ ಗೃಹಸಚಿವರ ಹೇಳಿಕೆ ಕಾಮೆಂಟ್‌ ಮಾಡುವುದಿಲ್ಲ. ಕೆಲವೊಮ್ಮೆ ಸತ್ಯ ಸಂಗತಿ ಹೇಳುವುದಕ್ಕಿಂತ ಮುಂದೆ ಆಗುವ ಗಲಾಟೆ ತಡೆಯಲು ಪ್ರಯತ್ನ ಮಾಡುತ್ತಾರೆ. ಪೊಲೀಸರೇ ಸಚಿವರ ಬಾಯಿಂದ ಈ ರೀತಿ ಹೇಳಿಸಿರುತ್ತಾರೆ. ಮೃತ ಯುವಕನ ತಾಯಿ ಹೇಳಿಕೆ ನೋಡಿದರೆ ಭಾಷೆ ಬಾರದೆ ಇರುವುದು ಕೂಡ ಕೊಲೆಗೆ ಕಾರಣವಾಗಿದೆ. ಆದರೆ ಗಲಭೆಗೆ ಕಾರಣ ಆಗಬಾರದು ಎಂದು ಸುಳ್ಳು ಹೇಳಿಸಿದ್ದಾರೆ ಎಂದು ಭಾವಿಸಿದ್ದೇನೆ ಎಂದು ಹೇಳಿದರು.

Tap to resize

Latest Videos

ಹಿಂದೂಗಳು ಮಟನ್ ಸ್ಟಾಲ್ ಇಟ್ಟರೆ ಮುಸ್ಲಿಮರು ಅಲ್ಲಿ ಮಾಂಸ ಖರೀದಿ ಮಾಡುತ್ತಾರಾ: ಸಿಟಿ ರವಿ ಪ್ರಶ್ನೆ

‘ಅದು ಏನೇ ಆಗಿರಲಿ ತನಿಖೆ ಅಡ್ಡದಾರಿಗೆ ಹೋಗಬಾರದು. ಕಾಂಗ್ರೆಸ್‌(Congress) ರಾಜಕೀಯ ಕಾರಣಕ್ಕೆ ಮಗು ಚಿವುಟುವ ಕೆಲಸ ಮಾಡಿದೆ. ಖಲಿಸ್ತಾನ್‌ ಚಳುವಳಿಗೆ ಗೊಬ್ಬರ ಹಾಕಿದ್ದು ಕಾಂಗ್ರೆಸ್‌, ಅದಕ್ಕೆ ಬಲಿಯಾಗಿದ್ದು ಇಂದಿರಾಗಾಂಧಿ. ಮೊದಲು ಕೊಲೆ ಮಾಡುವ ಮಾನಸಿಕ ಸ್ಥಿತಿ ಯಾಕಿದೆ? ಸತ್ಯ ಹೇಳುವುದರಿಂದ ಯಾವ ಕೋಮು ಕದಡಲಿದೆ ಎಂಬುದನ್ನು ಕಾಂಗ್ರೆಸ್‌ ಮುಖಂಡರು ಉತ್ತರಿಸಬೇಕು. ನಾನು ಕೊಟ್ಟಹೇಳಿಕೆಯಲ್ಲಿ ಕೋಮು ಸಾಮರಸ್ಯ ಕದಡುವ ವಿಚಾರ ಎಲ್ಲಿದೆ ಎಂಬುದನ್ನು ತಿಳಿಸಬೇಕು’ ಎಂದು ರವಿ ಒತ್ತಾಯಿಸಿದರು.

ಸಿದ್ದು ಸಿಎಂ ಆಗಿದ್ದರು ಎನ್ನಲು ನಾಚಿಕೆಯಾಗ್ತಿದೆ: ರವಿ

ಬೆಂಗಳೂರು: ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಅವರು ನಮ್ಮ ರಾಜ್ಯದ ಮುಖ್ಯಮಂತ್ರಿ ಆಗಿದ್ದರಲು ಎಂದು ಹೇಳಲು ನಾಚಿಕೆಯಾಗುತ್ತಿದೆ ಎಂದು ಸಿ.ಟಿ. ರವಿ ಕಿಡಿಕಾರಿದ್ದಾರೆ.
‘ಅಲ್‌ಖೈದಾ ಮುಖ್ಯಸ್ಥನ ವಿಡಿಯೋ ಕೂಡ ಆರ್‌ಎಸ್‌ಎಸ್‌ನವರೇ(RSS) ಕಳುಹಿಸುವುದು’ ಎಂದಿದ್ದ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಸಿದ್ದರಾಮಯ್ಯ ಅವರು ಕಾಲ ಕಾಲಕ್ಕೆ ಸತ್ಯ ಹೇಳುವ ತಂಡವನ್ನು ಇಟ್ಟುಕೊಳ್ಳಬೇಕು. ಅರುಳೋ ಮರುಳೋ ಎನ್ನುವ ಪರಿಸ್ಥಿತಿಗೆ ಬಂದಿದ್ದಾರೆ. ಸ್ವತಃ ಅಲ… ಖೈದಾ ಮುಖಂಡ ಮುಸ್ಕಾನ್‌ ಬೆಂಬಲಿಸಿ ಮಾತಾಡಿರೋ ವಿಡಿಯೋ ಇದೆ. ಅದನ್ನು ನೋಡಬೇಕು. ಇಲ್ಲದಿದ್ದರೆ ಅವರು ಅವರ ಸ್ಥಾನಕ್ಕೆ ತಕ್ಕ ಮಾತನಾಡುತ್ತಿಲ್ಲ ಎನ್ನುವುದು ಗೊತ್ತಾಗಲಿದೆ’ ಎಂದರು.

Hijab Verdict: ಸಮವಸ್ತ್ರದ ಅರ್ಥ ಏನು? ಸದನದಲ್ಲಿ ಗುಡುಗಿದ ಸಿಟಿ ರವಿ

ವೈಯಕ್ತಿಕ ಕಾರಣಗಳಿಂದ ಹರ್ಷ ಕೊಲೆಯಾಗಿಲ್ಲ ಎಂದು NIA ದೃಢೀಕರಿಸಿದೆ

ಚಿಕ್ಕಮಗಳೂರು: ಶಿವಮೊಗ್ಗದಲ್ಲಿ ನಡೆದ ಹಿಂದೂ ಯುವಕ ಹರ್ಷ ಕೊಲೆ ಪ್ರಕರಣ ಇದೀಗ ಎನ್ ಐ ಎ  ತನಿಖೆ ನಡೆಸುತ್ತಿದೆ.  ಇದರ ನಡುವೆ ಶಿವಮೊಗ್ಗ ಹರ್ಷನ ಕೊಲೆ ಹಿಂದೆ ಕೋಮುದಳ್ಳುರಿಯ ಉದ್ದೇಶವಿದೆ ಎನ್ನುವ ಅಂಶ ಬಹಿರಂಗವಾಗಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. 

ಇನ್ನು ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಶನಿವಾ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಲಾರ್ಯದರ್ಶಿ ಸಿ.ಟಿ ರವಿ,  ಹರ್ಷನ ಕೊಲೆ ಹಿಂದೆ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿರುವ ಸಾಧ್ಯತೆ ಇದೆ ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ. ಪರೇಶ್ ಮೇಸ್ತಾ, ಇಂದು ಹರ್ಷ, ನಾಳೆ ಮತ್ತೊಬ್ಬರು ಎಂಬ ಪರಿಸ್ಥಿತಿ ಬರಬಾರದು ಎನ್ನುವ ಉದ್ದೇಶದಿಂದ ಸರ್ಕಾರ  ಎನ್.ಐ.ಎಗೆ ಕೇಸ್ ವಹಿಸಿರುವುದು. ಈ ಬಗ್ಗೆ  ಸಮಗ್ರ ತನಿಖೆಯಾಗಿ ಸತ್ಯಾಂಶಹೊರಬಲಿದ ಎಂದರು.
 

click me!