ಮನುಕುಲ ಉಳಿಯಬೇಕಿದೆ, ಕೋಮುಗಲಭೆಗಳು ನಡೆಯದಿರಲಿ : ಮಂತ್ರಾಲಯ ಶ್ರೀಗಳ ಸಂದೇಶ

By Suvarna News  |  First Published Apr 7, 2022, 8:29 PM IST

ಬೆಂಗಳೂರಿನ ಜಯನಗರದಲ್ಲಿರುವ  ರಾಘವೇಂದ್ರ ಸ್ವಾಮಿ ಮಠದಲ್ಲಿ ಪ್ರತಿಕ್ರಿಯೆ ನೀಡಿದ ಮಂತ್ರಾಲಯ ಮಠದ ಸುಭುದೇಂದ್ರ ತೀರ್ಥ ಶ್ರೀಗಳು ಕೋಮು  ಸೌಹಾರ್ದತೆ ನೆಲೆ ಗೊಳ್ಳಬೇಕು, ಕರ್ನಾಟಕ ಶಾಂತಿಯ ಹೂ ದೋಟ ಇಲ್ಲಿಂದಲೇ ಶಾಂತಿ ಆರಂಭ ಆಗಬೇಕು ಎಂದಿದ್ದಾರೆ.


ವರದಿ: ಶರತ್ ಕಪ್ಪನಹಳ್ಳಿ, ಏಷ್ಯಾನೆಟ್ ಸುವರ್ಣನ್ಯೂಸ್ 

ಬೆಂಗಳೂರು(ಎ.7): ರಾಜ್ಯದಲ್ಲಿ ಕೋಮು ಸಾಮರಸ್ಯ (communal Harmony) ಕದಡುವ ವಿದ್ಯಮಾನಗಳು ನಡೆಯುತ್ತಿರುವ ವಿಚಾರ ಕುರಿತು ಬೆಂಗಳೂರಿನ ಜಯನಗರದಲ್ಲಿರುವ  ರಾಘವೇಂದ್ರ ಸ್ವಾಮಿ ಮಠದಲ್ಲಿ (raghavendra swamy mutt ) ಪ್ರತಿಕ್ರಿಯೆ ನೀಡಿದ ಮಂತ್ರಾಲಯ ಮಠದ ಸುಭುದೇಂದ್ರ ತೀರ್ಥ ಶ್ರೀಗಳು ( Sri Subudhendra Teertha Swamiji) ತೀಕ್ಷ್ಣವಾಗಿ ಉತ್ತರಿಸಿದ್ದಾರೆ. ಈಗ ಮುಖ್ಯವಾಗಿ ಕೋಮು  ಸೌಹಾರ್ದತೆ ನೆಲೆ ಗೊಳ್ಳಬೇಕು, ಕರ್ನಾಟಕ ಶಾಂತಿಯ ಹೂ ದೋಟ ಇಲ್ಲಿಂದಲೇ ಶಾಂತಿ ಆರಂಭ ಆಗಬೇಕು, ಹಿಂದುಗಳ ಜೊತೆಗೆ ಎಲ್ಲರಿಗೂ ಈ ದೇಶ ಅವಕಾಶ ಮಾಡಿಕೊಟ್ಟಿದೆ, ಎಲ್ಲ ಸಮುದಾಯಗಳಿಗೂ‌ ಈ ನೆಲ ಜಾಗ ನೀಡಿದೆ. ಮೊದಲು ಮನುಕು‌ಲ ಉಳಿಯಬೇಕು. ಕೋವಿಡ್ ಸೇರಿದಂತೆ ಅನೇಕ ರೋಗಗಳಿಂದ  ಆರ್ಥಿಕ ಮುಗ್ಗಟ್ಟಿನ ಸಂದರ್ಭ ಇದು. ಇಂಥಹ ಸಂದರ್ಭದಲ್ಲಿ ಕೋಮುಗಲಭೆ ಬೇಡ, ಯಾರೂ ಆ ರೀತಿಯ ಸನ್ನಿವೇಶ ನಿರ್ಮಿಸುವುದು ಬೇಡ. ಮತಾಂತರ ಬೇಡ, ಧರ್ಮ ಧರ್ಮಗಳ ನಡುವೆ ಕಚ್ಚಾಟ ಬೇಡ, ಎಲ್ಲರೂ ಸೌಹಾರ್ದಯುತವಾಗಿ ಬಾಳಬೇಕು ಎಂದು ಸಮಾರಸ್ಯದ ಸಂದೇಶವನ್ನು ನೀಡಿದರು.

Tap to resize

Latest Videos

ಸಿಎಂ ಬೊಮ್ಮಾಯಿಗೆ ಮಂತ್ರಾಲಯ ಶ್ರೀಗಳಿಂದ  ಆಶೀರ್ವಾದ: ಮಂತ್ರಾಲಯ ಮಠದ ಸುಭುದೇಂದ್ರ ತೀರ್ಥರು ಬೆಂಗಳೂರಿನ ಜಯನಗರದ ರಾಘವೇಂದ್ರ ಸ್ವಾಮಿ ಮಠಕ್ಕೆ ಆಗಮಿಸಿರೋದನ್ನ ತಿಳಿದ್ದು ಖುದ್ದು ಮುಖ್ಯಮಂತ್ರಿಗಳು ದೆಹಲಿಯಿಂದ ಆಗಮಿಸುತ್ತಿದ್ದಂತೆ ಜಯನಗರದ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ತೆರಳಿ  ರಾಘವೇಂದ್ರ ಸ್ವಾಮಿಯ ದರ್ಶನ ಪಡೆದು ಮಂತ್ರಾಲಯದ ಸುಭುದೇಂದ್ರ ತೀರ್ಥ ಶ್ರೀಗಳ ಆಶೀರ್ವಾದ ಪಡೆದುಕೊಂಡರು.

SIDDARAMAIAH BADAMI TOUR ಮತ್ತೆ ಬಾದಾಮಿಯಿಂದ ಸ್ಫರ್ಧಿಸಲು ಹಿಂದೆ ಸರಿಯುತ್ತಾರಾ ಸಿದ್ದು?

ಸಿಎಂ ಬೊಮ್ಮಾಯಿ‌ ಜೊತೆ  ಕಂದಾಯ ಸಚಿವ ಆರ್.ಅಶೋಕ್ , ಸೋಮಣ್ಣ ಮತ್ತು ಮೈಸೂರು ಸಂಸದ ಪ್ರತಾಪ್ ಸಿಂಹ ಸಹ ಶ್ರೀಗಳ ಆಶೀರ್ವಾದ ಪಡೆದುಕೊಂಡರು. ರಾಘವೇಂದ್ರ ಸ್ವಾಮಿಗೆ ಸಿಎಂ ಬೊಮ್ಮಾಯಿ‌ ವಿಶೇಷ ಪೂಜೆಯನ್ನ ಸಹ ಸಲ್ಲಿಕೆ ಮಾಡಿದ್ರು.. ನಂತರ ಮಂತ್ರಾಲಯ ಪೀಠಾಧಿಪತಿ ಸುಭುದೇಂದ್ರ ತೀರ್ಥ ಶ್ರೀಗಳಿಗೆ ಹಾರ ಹಾಕಿ ಸನ್ಮಾನಿಸಿದ ಸಿಎಂ ಬೊಮ್ಮಯಿ ಗೌರವ ಸಲ್ಲಿಕೆ ಮಾಡಿದರು. 

ಸರ್ಕಾರ ಸುಭದ್ರವಾಗಿ ಜನಪರ ಆಡಳಿತ ನೀಡಲಿ: ಸಿಎಂ ಬೊಮ್ಮಾಯಿ‌ಗೆ (basavaraj bommai) ಆಶೀರ್ವಾದ ನೀಡಿ  ಮಾತನಾಡಿದ ಮಂತ್ರಾಲಯ ಶ್ರೀಗಳು ಸರ್ಕಾರ ಸುಭದ್ರವಾಗಿ ಜನಪರ ಆಡಳಿತ ನೀಡಲಿ, ಶಾಂತಿ ಸುವ್ಯವಸ್ಥೆ ನೆಲೆಸಲಿ. ರಾಜ್ಯದಲ್ಲಿ ಸಕಾಲಕ್ಕೆ ಮಳೆ ಬೆಳೆಯಾಗಲಿ ಅಲ್ಲದೇ ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಮುಖ್ಯಮಂತ್ರಿಗಳು ಆಗಮಿಸಬೇಕು ಎಂದು ಅಹ್ವಾನಿಸಿದ್ರು. ಹಾಗೇ ಮುಖ್ಯಮಂತ್ರಿಗಳು ನಮ್ಮ ಜಿಲ್ಲೆಯವರು ಎಂಬ ಸಂತೋಷ ಖುಷಿ ಇದೆ ಎಂದು ಸಂತಸ ಹೆಚ್ಚಿಕೊಂಡರು. 

Costal Fishing Boats ಡೀಸೆಲ್ ದರ ಏರಿಕೆ , ಮೀನೂಟ ಪ್ರಿಯರ ಕಣ್ಣೀರು!

ಈ ವೇಳೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಇಂದು ಜಯನಗರ ರಾಘವೇಂದ್ರ ಮಠಕ್ಕೆ ಸಿಎಂ ಬಂದಿದ್ದರು.ಕರ್ನಾಟಕದಿಂದ ಪಕ್ಕದ ರಾಜ್ಯದ ಮಂತ್ರಾಲಯದಲ್ಲಿರುವ ರಾಘವೇಂದ್ರ ಮಠಕ್ಕೆ ಲಕ್ಷಾಂತರ ಜನ ಹೋಗುತ್ತಾರೆ  ಅಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ನೆರವು ನೀಡಲಾಗುತ್ತದೆ. ದಾಸೋಹ ಛತ್ರಕ್ಕೆ  5 ಕೋಟಿ ನೆರವು ನೀಡುವುದಾಗಿ ಸಿಎಂ ಘೋಷಿಸಿದ್ದಾರೆ. ನಮ್ಮ ಇಲಾಖೆಯಿಂದ ಬೆಂಗಳೂರಿನಲ್ಲಿ 1.5 ಎಕರೆ ಜಾಗ ಕೊಡುತ್ತೇನೆ. ರಾಘವೇಂದ್ರ ಮಠದ ಶ್ರೀಗಳು ಸರ್ಕಾರಕ್ಕೆ ಪೂರ್ಣ ಆಶೀರ್ವಾದ ಮಾಡಿದ್ದಾರೆ. ಜನಪರ ಕೆಲಸ ಮಾಡಿ ಎಂದು ಹೇಳಿದ್ದಾರೆ ಅವರು ಹೇಳಿದಂತೆ ಜನರಿಗೆ ಅನುಕೂಲವಾಗುವಂತೆ ಕೆಲಸ ಮಾಡುತ್ತೇವೆ ಎಂದರು.

click me!