ಬಿಜೆಪಿ ಜಗತ್ತಿನ ಅತ್ಯಂತ ಬಲಿಷ್ಠ ಹಾಗೂ ದೊಡ್ಡಪಕ್ಷ: ರೋಹಿತ್ ಚಕ್ರತೀರ್ಥ

By Kannadaprabha News  |  First Published Feb 18, 2024, 3:00 AM IST

ಜನಸಂಘದ ಮೂಲಕ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಸ್ಥಾಪಿತವಾದ ಭಾರತೀಯ ಜನತಾ ಪಕ್ಷ ಜಗತ್ತಿನಲ್ಲಿಯೇ ಅತ್ಯಂತ ಬಲಿಷ್ಠ ಹಾಗೂ ದೊಡ್ಡ ರಾಜಕೀಯ ಪಕ್ಷವಾಗಿದೆ. ಭಾರತ ಅಖಂಡವಾಗಿ ಇರಬೇಕು. 


ಗುಳೇದಗುಡ್ಡ (ಫೆ.18): ಜನಸಂಘದ ಮೂಲಕ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಸ್ಥಾಪಿತವಾದ ಭಾರತೀಯ ಜನತಾ ಪಕ್ಷ ಜಗತ್ತಿನಲ್ಲಿಯೇ ಅತ್ಯಂತ ಬಲಿಷ್ಠ ಹಾಗೂ ದೊಡ್ಡ ರಾಜಕೀಯ ಪಕ್ಷವಾಗಿದೆ. ಭಾರತ ಅಖಂಡವಾಗಿ ಇರಬೇಕು. ನಮ್ಮ ಶಿಕ್ಷಣದಲ್ಲಿ ರಾಷ್ಟ್ರೀಯತೆ, ಭಾರತೀಯತೆ ಇರಬೇಕು ಎಂಬ ಉದ್ದೇಶ ಹೊಂದಿದ್ದ ಜನಸಂಘದ ಕಾಲದಿಂದಲೂ ಬಿಜೆಪಿ ದೇಶ ಮೊದಲು ಎಂದೇ ನಡೆದುಕೊಂಡು ಬಂದಿದೆ ಎಂದು ಬೆಂಗಳೂರಿನ ಅಯೋಧ್ಯಾ ಪಬ್ಲಿಕೇಶನ್‌ ಪ್ರಕಾಶಕ ಹಾಗೂ ಪತ್ರಕರ್ತ ರೋಹಿತ್ ಚಕ್ರತೀರ್ಥ ಹೇಳಿದರು.

ಪಟ್ಟಣದ ಸರಸ್ವತಿ ವಿದ್ಯಾಮಂದಿರದ ಸಭಾಭವನದಲ್ಲಿ ದಿ. ಕಲ್ಯಾಣರಾವ್ ಮರಳಿ ಅವರು ರಚಿಸಿ, ಅಯೋಧ್ಯಾ ಪಬ್ಲಿಕೇಶನ್ ಪ್ರಕಟಿಸಿರುವ ಬಿಜೆಪಿ ನಡೆದು ಬಂದ ದಾರಿ ಪುಸ್ತಕ ಲೋಕಾರ್ಪಣೆ ಹಾಗೂ ಕಲ್ಯಾಣರಾವ್ ಮರಳಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಪುಸ್ತಕ ಲೋಕಾರ್ಪಣೆಗೊಳಸಿ ಮಾತನಾಡಿ, ಕಲ್ಯಾಣರಾವ್ ಮರಳಿ ಅವರು ಜನಸಂಘದಿಂದ ಪ್ರಾರಂಭಗೊಂಡು ಬಿಜೆಪಿ ಬೆಳೆದು ಬಂದ ದಾರಿಯನ್ನು ಅತ್ಯಂತ ವಸ್ತುನಿಷ್ಠವಾಗಿ ಅಕ್ಷರ ರೂಪದಲ್ಲಿ ಹಿಡಿದುಕೊಟ್ಟಿದ್ದಾರೆ. ಅಂದಿನ ಪ್ರಧಾನಿ ನೆಹರೂ ಅವರು ಹಿಂದುಗಳನ್ನು ಅಮಾನವೀಯವಾಗಿ ಕಂಡಾಗ ಸಿಡಿದೆದ್ದ ಶ್ಯಾಮಪ್ರಸಾದ ಮುಖರ್ಜಿ ಅವರು ಜನಸಂಘ ಕಟ್ಟಿದರು ಎಂದು ಹೇಳಿದರು.

Latest Videos

undefined

ಸಿದ್ದರಾಮಯ್ಯಗೆ ಈ ರಾಜ್ಯದಲ್ಲಿರಲು ಯೋಗ್ಯತೆ ಇಲ್ಲ: ಸಂಸದ ಮುನಿಸ್ವಾಮಿ ಆಕ್ರೋಶ

ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಮಾತನಾಡಿ, ಜೀವನದ ಕೊನೆಯ ತನಕ ಅತ್ಯಂತ ಸಕ್ರೀಯವಾಗಿದ್ದ ಕಲ್ಯಾಣರಾವ್ ಮರಳಿ ಅವರು, ಚಿಕ್ಕವರಿದ್ದಾಗಲೇ ಸಂಘದ ವ್ರತ ಪಾಲಿಸಿ, ಜೀವನ ಪೂರ್ತಿ ಪಾಳಿಸಿಕೊಂಡು ಬಂದರು. ಕರೋನಾದಂತಹ ಕಾಲದಲ್ಲೂ ಹೊಸದನ್ನು ಯೋಚಿಸಿ, ಲಾಕ್ಡೌನ್, ಮಾಸ್ಕ್, ವ್ಯಾಕ್ಸಿನ್ ನಂತಹ ಶಬ್ದ ಉಪಯೋಗಿಸಿ ಕೊರೋನಾಸೇನ್ ಚಾರ್ಟ್‌ ರೂಪಿಸಿದವರು ಎಂದರು. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಲೇಖಕ ಕಲ್ಯಾಣರಾವ್‌ ಮರಳಿ ಅವರು ವೃತ್ತಿಯಿಂದ ಶಿಕ್ಷಕರು. ಅವರು ಶಾಲೆಗೆ ಮಾತ್ರ ಶಿಕ್ಷಕರಾಗಿರಲಿಲ್ಲ. ಇಡೀ ಸಮಾಜಕ್ಕೆ ಶಿಕ್ಷಕರಾಗಿದ್ದರು. ಈಗೀಗ ಪಕ್ಷಕ್ಕೆ ಬಂದಿರುವವರಿಗೆ ಬಿಜೆಪಿ ಇತಿಹಾಸ ಗೊತ್ತಿಲ್ಲ.

ಪಕ್ಷದ ಇತಿಹಾಸ ಗೊತ್ತಿಲ್ಲದವರಿಗೆ ಕಲ್ಯಾಣರಾವ್ ಮರಳಿ ಅವರ ಬಿಜೆಪಿ ನಡೆದು ಬಂದ ದಾರಿ ಪುಸ್ತಕ ಮಾರ್ಗದರ್ಶಕವಾಗಿದೆ ಎಂದರು. ಮುರುಘಾಮಠದ ಶ್ರೀ ಕಾಶಿನಾಥ ಶ್ರೀಗಳು ಸಾನ್ನಿಧ್ಯ ವಹಿಸಿ, ಆರ್ ಎಸ್ ಎಸ್ ಕರ್ನಾಟಕ ಉತ್ತರ ಪ್ರಾಂತ ಸದಸ್ಯ ಅರವಿಂದರಾವ್ ದೇಶಪಾಂಡೆ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಪ್ರಸನ್ನ ಮರಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಪತ್ರಕರ್ತರಾದ ದು.ಗು. ಲಕ್ಷ್ಮಣ, ರೋಹಿತ್ ಚಕ್ರತೀರ್ಥ, ಆರ್ ಎಸ್ ಎಸ್ ಕರ್ನಾಟಕ ಉತ್ತರ ಪ್ರಾಂತ ಸದಸ್ಯ ಅರವಿಂದರಾವ್ ದೇಶಪಾಂಡೆ, ಸಂಪತ್ ಕುಮಾರ ರಾಠಿ ಅವರನ್ನು ಸನ್ಮಾನಿಸಲಾಯಿತು.

ನನ್ಮನೆ ದೋಸೆ ತುತಾದರೆ ಬಾಲಕೃಷ್ಣರ ಬಾಣಲೆ ತೂತು: ಮಾಜಿ ಶಾಸಕ ಮಂಜುನಾಥ್

ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ, ಪ್ರದೀಪ ಮರಳಿ, ಬಾಳಾಸಾಹೇಬ ಕುಲಕರ್ಣಿ, ಭಾರತಿ ಕಲ್ಯಾಣ ಮರಳಿ, ಪ್ರಜ್ಞಾ ಪ್ರಸನ್ನ ಮರಳಿ, ಪ್ರತೀಮಾ ಪ್ರದೀಪ ಮರಳಿ, ಮಾಧುರಿ ವಿವೇಕ ಕುಲಕರ್ಣಿ, ವಿವೇಕ ಕುಲಕರ್ಣಿ, ಅಜಯ ಕುಲಕರ್ಣಿ, ಶಂಕರ ರೂಢಗಿ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಮಲ್ಲಿಕಾರ್ಜುನ ಶೀಲವಂತ, ಬಸವರಾಜ ಬ್ಯಾಳಿ, ಹನಮಂತ ಕಂದಗಲ್ಲ, ವಿವೇಕಾನಂದ ದೇವಾಂಗಮಠ, ಸಿದ್ದು ನಾಯನೇಗಲಿ, ಶಿವಕುಮಾರ ಅಚನೂರ, ಸುಧೀರ ಗುಡ್ಡದ, ಶಿವಯೋಗೆಪ್ಪ ಮುರಗೋಡ ಸೇರಿದಂತೆ ಮರಳಿ ಕುಟುಂಬ ಸದಸ್ಯರು ಇದ್ದರು.

click me!