
ಬೆಂಗಳೂರು (ಏ.18) : ನಗರದ ಹೊರವರ್ತುಲ ರಸ್ತೆಯ (ಓಆರ್‌ಆರ್) ಮೆಟ್ರೋ ಕಾಮಗಾರಿಗೆ ತೊಡಕಾಗಿದ್ದ ದೊಡ್ಡನೆಕ್ಕುಂದಿ ಬಳಿ ತೆರೆದ ವೆಬ್ ಗರ್ಡರ್ ಅಳವಡಿಕೆ ಗೊಂದಲ ನಿವಾರಣೆಯಾಗಿದೆ. ಶೀಘ್ರವೇ ಕಾಮಗಾರಿ ಆರಂಭವಾಗುವ ಸಾಧ್ಯತೆಯಿದೆ.
‘ನಮ್ಮ ಮೆಟ್ರೋ’ದ ರೇಷ್ಮೇ ಕೇಂದ್ರ-ಕೆ.ಆರ್.ಪುರದವರೆಗಿನ 19 ಕಿ.ಮೀ. ‘ನೀಲಿ ಮಾರ್ಗ’ದ ಕಾಮಗಾರಿ ಇದು. ಮಹದೇವಪುರದ ದೊಡ್ಡನೆಕ್ಕುಂದಿ ಬಳಿ ಕಳೆದ ಆರು ತಿಂಗಳಿಂದ ಕಗ್ಗಂಟಾಗಿ ಕೆಲಸ ಸ್ಥಗಿತಗೊಳ್ಳಲು ಕಾರಣವಾಗಿದ್ದ ತೊಡಕು ನಿವಾರಿಸಿಕೊಂಡಿರುವ ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ಶೀಘ್ರ ಇಲ್ಲಿ ರೈಲ್ವೇ ಅಂಡರ್‌ಪಾಸ್ ಕಾಮಗಾರಿ ಆರಂಭಿಸಲು ಮುಂದಾಗಿದೆ.
Namma Metro: ಬಿಸಿಲು ಝಳದಿಂದ ಮೆಟ್ರೋ ರೈಲು ಸಂಚಾರ 20 ನಿಮಿಷ ಸ್ಥಗಿತ!
ಸಮಸ್ಯೆ ಏನಿತ್ತು?
ದೊಡ್ಡನೆಕ್ಕುಂದಿ(Doddenkkundi metro) ಬಳಿ ಹಾದುಹೋಗಿರುವ ರೈಲ್ವೆ ಮಾರ್ಗದಲ್ಲಿ ಮೆಟ್ರೋ ಎತ್ತರಿಸಿದ ಮಾರ್ಗ ನಿರ್ಮಿಸಿ (ಗರ್ಡರ್ ಅಳವಡಿಕೆ ಮೂಲಕ) ಕಾರಿಡಾರ್ ಕೊಂಡೊಯ್ಯಲು ಯೋಜನೆ ರೂಪಿಸಿಕೊಂಡಿದೆ. ಆದರೆ, ಇಲ್ಲಿ ಮೆಟ್ರೋ ತನ್ನ ಯೋಜನಾ ವರದಿಯಲ್ಲಿ 65 ಮೀ. ತೆರೆದ ವೆಬ್ ಗರ್ಡರ್ ಅಳವಡಿಕೆಗೆ ಮಂಜೂರಾತಿ ಪಡೆದಿತ್ತು. ಆದರೆ, ಭವಿಷ್ಯದಲ್ಲಿ ರೈಲ್ವೆ ಇಲಾಖೆಯಿಂದ ಇಲ್ಲಿ ಐದನೇ ಹಳಿ ಅಳವಡಿಸುವ ಯೋಜನೆ ಹೊಂದಿದೆ. ಈಗಿನಂತೆ ಮೆಟ್ರೋ 65 ಮೀ. ವೆಬ್ ಗರ್ಡರ್ ಅಳವಡಿಸಿದರೆ ಮುಂದೆ ನಮಗೆ ಸಮಸ್ಯೆಯಾಗಲಿದೆ. ಹೀಗಾಗಿ 85 ಮೀ. ಗರ್ಡರ್ ಅಳವಡಿಕೆಗೆ ರೈಲ್ವೆ ಪಟ್ಟು ಹಿಡಿದಿತ್ತು.
ಈ ಬಗ್ಗೆ ಈಚೆಗೆ ಮೆಟ್ರೋ(Namma metro) ಅಧಿಕಾರಿಗಳು ರೈಲ್ವೇ, ಕರ್ನಾಟಕ ರೈಲ್ವೇ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ (Karnataka Railway Infrastructure Development Company)(ಕೆ-ರೈಡ್) ಜೊತೆಗೆ ಸಭೆ ನಡೆಸಿ ಈ ಸಮಸ್ಯೆಯನ್ನು ನಿವಾರಿಸಿಕೊಂಡಿದ್ದಾರೆ. ಮೆಟ್ರೋ ಯೋಜನೆಯಂತೆ 65 ಮೀ. ತೆರೆದ ವೆಬ್ ಗರ್ಡರ್ ಅಳವಡಿಕೆಗೆ ರೈಲ್ವೆ ಅಧಿಕಾರಿಗಳನ್ನು ಒಪ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಶೀಘ್ರವೇ ಇಲ್ಲಿ ಕಾಮಗಾರಿ ಆರಂಭಕ್ಕೂ ಮೆಟ್ರೋ ಸಿದ್ಧತೆ ಮಾಡಿಕೊಂಡಿದೆ.
ಬೆಂಗಳೂರು: ಮೆಟ್ರೋ ಕೆಳಗೆ ಕಂಪನಿಗಳಿಂದ ಉದ್ಯಾನ..!
ಒಟ್ಟಾರೆ ರೇಷ್ಮೇ ಕೇಂದ್ರ-ಕೆ.ಆರ್.ಪುರದವರೆಗಿನ ಮೆಟ್ರೋ ಮಾರ್ಗದ ಕಾಮಗಾರಿ 2025-26ನೇ ಸಾಲಿನಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ